ಚಿಕ್ಕಬಳ್ಳಾಪುರದ ಲಾಡ್ಜ್ನಲ್ಲಿ ಶವವಾಗಿ ಪತ್ತೆಯಾದ ಮಹಿಳೆ
1 min readಚಿಕ್ಕಬಳ್ಳಾಪುರದ ಲಾಡ್ಜ್ನಲ್ಲಿ ಶವವಾಗಿ ಪತ್ತೆಯಾದ ಮಹಿಳೆ
ವ್ಯಕ್ತಿಯ ಜೊತೆ ನೆನ್ನೆ ಲಾಡ್ಜಿಗೆ ಬಂದಿದ್ದ ಮಹಿಳೆ
ಮಹಿಳೆ ಅನುಮಾನಾಸ್ಪದ ಸಾವಿನ ಬಗ್ಗೆ ಪೊಲಾಸರ ತನಿಖೆ
ಅವರಿಬ್ಬರು ನಿನ್ನೆ ರಾತ್ರಿ ಖುಷಿಯಾಗಿ ಲಾಡ್ಜ್ಗೆ ಬಂದಿದ್ದರು. ರಾತ್ರಿಯಿಡೀ ಅವರಿಬ್ಬರೂ ರೂಮ್ನಲ್ಲಿ ಅದೇನ್ ಮಾಡಿದರೋ ಗೊತ್ತಿಲ್ಲ. ಬೆಳಗಾಗುವಷ್ಟರಲ್ಲಿ ವ್ಯಕ್ತಿ ಲಾಡ್ಜ್ನಿಂದ ಹೊರ ಹೋಗಿದ್ದು, ಆತನ ಜೊತೆ ಬಂದಿದ್ದ ಮಹಿಳೆ ವಾಪಸ್ ಹೋಗಿಲ್ಲ. ಇದರಿಂದ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಹೋಗಿ ನೋಡಿದರೆ ರೂಮಿನಲ್ಲಿ ಮಹಿಳೆ ಶವವಾಗಿ ಪತ್ತೆಯಾಗಿದ್ದಾಳೆ. ಮಹಿಳೆಯ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.
ಚಿಕ್ಕಬಳ್ಳಾಪುರ ನಗರದ ಎಂ.ಜಿ.ರಸ್ತೆಯಲ್ಲಿ ಕಾವೇರಿ ಲಾಡ್ಜ್ ಇದೆ. ಈ ಲಾಡ್ಜ್ಗೆ ನಿನ್ನೆ ರಾತ್ರಿ ಬಂದ ಜೋಡಿಯೊಂದು, ರೂಮ್ ಮಾಡಿಕೊಂಡು ರಾತ್ರಿತಂಗಿದ್ದಾರೆ. ಆದರೆ ಬೆಳಿಗ್ಗೆ ಲಾಡ್ಜ್ನಿಂದ ವ್ಯಕ್ತಿ ಮಾತ್ರ ಹೊರ ಬಂದಿದ್ದಾನೆ, ಮಹಿಳೆ ಬಂದಿಲ್ಲ. ಇದರಿಂದ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಹೋಗಿ ನೋಡಿದರೆ ರೂಮಿನಲ್ಲಿ ಮಹಿಳೆ ಶವವಾಗಿ ಪತ್ತೆಯಾಗಿದ್ದು, ಮಹಿಳೆಯ ಸಾವಿನ ಸುತ್ತ ಅನುಮಾನ ಮೂಡಿದೆ. ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ, ಆಕೆಯ ಜೊತೆ ಬಂದಿದ್ದವ ಚಿಕ್ಕಬಳ್ಳಾಪುರ ಮೂಲದ ನರಸಿಂಹಮೂರ್ತಿ ಎನ್ನಲಾಗಿದೆ. ಲಾಡ್ಜ್ ಸಿಬ್ಬಂದಿ ರೂಮ್ ಬುಕ್ ಮಾಡುವಾಗ ಯಾವುದೆ ದಾಖಲೆ ಪಡೆದಿಲ್ಲ, ಹೆಸರು ವಿಳಾಸ ಪಡೆದಿಲ್ಲ, ಇದರಿಂದ ಪೊಲೀಸರು ಅನುಮಾನಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮಹಿಳೆಯ ಜೊತೆ ಬಂದಿದ್ದ ವ್ಯಕ್ತಿಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು. ಸ್ಪಷ್ಟತೆಯಿಲ್ಲ. ಇದರಿಂದ ಪೊಲೀಸರು ಮೊಬೈಲ್ ತಂತ್ರನ ಬಳಸಿ ಆರೋಪಿಯ ಪತ್ತೆಯಾರ್ಯ ನಡೆಸಿದ್ದಾರೆ. ಆದರೆ ಮಹಿಳೆಯ ಕೊಲೆ ಮಾಡಲಾಗಿದಿಯಾ ಇಲ್ಲವೇ ಹೃದಯಾಘಾತವಾಗಿದಿಯಾ ತನಿಖೆಯಿಂದ ಗೊತ್ತಾಗಬೇಕಿದೆ. ಲಾಡ್ಜ್ ಸಿಬ್ಬಂದಿ ದಾಖಲೆ ವಿಳಾಸ ಪಡೆಯದೆ ಹೇಗೆ ರೂಮ್ ನೀಡಿದ್ದಾರೆ ಅನ್ನೊದು ಯಕ್ಷ ಪ್ರಶ್ನೆಯಾಗಿದೆ.