ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ಅಂತೂ ಇಂತೂ ಉದ್ಘಾಟನೆಗೆ ಸಿದ್ಧವಾಗಿದೆ ಗಾಂಧಿ ಭವನ

1 min read

ಅಂತೂ ಇಂತೂ ಉದ್ಘಾಟನೆಗೆ ಸಿದ್ಧವಾಗಿದೆ ಗಾಂಧಿ ಭವನ
ಗಾಂಧಿ ಜಯಂತಿ ದಿನವೇ ಗಾಂಧಿ ಭವನ ಉದ್ಘಾಟನೆ
ಕಳೆದ ಹಲವು ವರ್ಷಗಳ ನಿರಂತರ ನಿರ್ಮಾಣ
ಕೊನೆಗೂ ಸಿಕ್ಕಿದೆ ಗಾಂಧಿ ಭವನಕ್ಕೆ ಉದ್ಘಾಟನೆ ಭಾಗ್ಯ

ಅದು ಪ್ರತಿಷ್ಠಿತ ಬಿಬಿ ರಸ್ತೆಗೆ ಹೊಂದಿಕೊ0ಡೇ ಇದ್ದ ಜಾಗ. ಅಲ್ಲಿ ಗಾಂಧಿ ಭವನ ನಿರ್ಮಾಣ ಮಾಡಲು ಅಡಿಗಲ್ಲು ಹಾಕಿ ವರ್ಷಗಳೇ ಕಳೆದಿವೆ. ಅನುದಾನ ಕೊರತೆಯ ನೆಪದಲ್ಲಿ ವರ್ಷಗಳು ಉರುಳಿದರೂ ಉದ್ಘಾಟನೆ ಭಾಗ್ಯ ಕಾಣದೆ ಸೊರಗುತ್ತಿದ್ದ ಗಾಂಧಿ ಭವನಕ್ಕೆ ಕೊನೆಗೂ ಉದ್ಘಾಟನೆ ಭಾಗ್ಯ ಸಿಕ್ಕಿದೆ. ಅಕ್ಟೋಬರ್ ೨ರ ಗಾಂಧಿ ಜಯಂತಿ ದಿನ ಗಾಂಧಿ  ಭವನ ಉದ್ಘಾಟನೆಯಾಗಲಿದೆ.

ಚಿಕ್ಕಬಳ್ಳಾಪುರದ ಬಿಬಿ ರಸ್ತೆಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎದುರಿನಲ್ಲಿ ಮತ್ತು ಜಿಲ್ಲಾ ಸಾರ್ವಜನಿಕ ಗ್ರಂಥಾಲಯದ ಪಕ್ಕದಲ್ಲಿ ನಿರ್ಮಾಣವಾಗಿರುವ ಈ ಗಾಂಧಿ ಭವನ ನಿರ್ಮಾಣದ ಹಾದಿ ಗಾಂಧೀಜಿಯವರ ಸ್ವಾತಂತ್ರ ಹೋರಾಟಕ್ಕಿಂತ ಹೆಚ್ಚು ಪ್ರಾಯಾಸ ಎಂದರೆ ತಪ್ಪಾಗಲಾರದು. ಸತತ ಹಲವು ವರ್ಷಗಳ ನಿರ್ಮಾಣದ ಕತ್ತಲು ಸೀಳಿಕೊಂಡು ಮಹಾಲಯ ಅಮಾವಾಸ್ಯೆ ದಿನದಂದೇ ಗಾಂಧಿ ಭವನ ಉದ್ಘಾಟನೆಯಾಗಲಿದ್ದು, ಇದು ಸಾರ್ವಜನಿಕ ಸೇವೆಗೆ ಯಾವ ರೀತಿಯಲ್ಲಿ ಉಪಯೋಗಕ್ಕೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಚಿಕ್ಕಬಳ್ಳಾಪುರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಿರ್ಮಾಣವಾಗಿರುವ ಗಾಂಧಿ ಭವನವು ಅ. 2ರ ಗಾಂಧಿ ಜಯಂತಿ ದಿನ ಲೋಕಾರ್ಪಣೆಗೊಳ್ಳಲಿದೆ. ಕಟ್ಟಡ ಕಾಮಗಾರಿ ಪೂರ್ಣವಾಗಿದ್ದು ಭವನದ ಒಳಗಿನ ಗಾಂಧಿ ಪ್ರತಿಮೆಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.

ಮುಂದಿನ ಪೀಳಿಗೆಗೆ ಮತ್ತು ಮಕ್ಕಳಿಗೆ ಗಾಂಧೀಜಿ ಅವರ ಬದುಕು, ಸ್ವಾತಂತ್ರ ಹೋರಾಟ, ಸಾಮಾಜಿಕ ಹೋರಾಟ ಸೇರಿದಂತೆ ಅವರ ಜೀವನದ ವಿಚಾರಗಳನ್ನು ಅರಿಯ್ಳಲು ಭವನ ನೆರವಾಗಲಿದೆ. ಭವನದಲ್ಲಿರುವ ಗಾಂಧಿ ಅವರ ಪ್ರತಿಮೆಗಳು, ಅವರ ಚಿತ್ರಗಳು ಇಡೀ ಅವರ ಬದುಕನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತವೆ. ಚಿಕ್ಕಬಳ್ಳಾಪುರದಲ್ಲಿ ನಿರ್ಮಾಣವಾಗಿರುವ ಗಾಂಧಿ ಭವನ ನಗರಕ್ಕೊಂದು ಮೆರುಗು ತರಲಿದೆ ಎಂದರೆ ಖಂಡಿತ ಅತಿಶಯವಲ್ಲ. ಗಾಂಧಿ ಅವರಿಗೆ ಸಂಬ0ಧಿಸಿ ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ಶಿಬಿರಗಳನ್ನು ನಡೆಸಲು ಮತ್ತು ಅವರ ಬದುಕಿನ ಕುರಿತು ಮಕ್ಕಳಿಗೆ ಪಾಠ ಹೇಳಲು ಈ ಭವನ ನಿರ್ಮಿಸಿದಂತೆ ಇದೆ.

ರಾಷ್ಟçಪಿತ ಮಹಾತ್ಮ ಗಾಂಧೀಜಿ ಅವರು ತಾಲ್ಲೂಕಿನ ಐತಿಹಾಸಿಕ ನಂದಿ ಗಿರಿಧಾಮಕ್ಕೆ ಎರಡು ಬಾರಿ ಭೇಟಿ ನೀಡಿದ್ದರು. ಆದರೆ ಜಿಲ್ಲೆಯ ಸಾಮಾನ್ಯ ಜನರು ಅವರು ಅಂದು ಭೇಟಿ ನೀಡಿದ್ದ ಚಿತ್ರಗಳನ್ನು ಕಣ್ತುಂಬಿಕೊಳ್ಳುವುದು ಕಷ್ಟ ಸಾಧ್ಯ. ಆದರೆ ಈಗ ನಗರದಲ್ಲಿ ನಿರ್ಮಾಣವಾಗಿರುವ ಗಾಂಧಿ ಭವನದಲ್ಲಿ ಕಾಲ್ನಡಿಗೆಯಲ್ಲಿ ನಂದಿಬೆಟ್ಟ ಇಳಿದ ಗಾಂಧೀಜಿ, ನಂದಿಗಿರಿಧಾಮದಲ್ಲಿ ಎರಡನೇ ಬಾರಿಗೆ ಮಹಾತ್ಮ ಗಾಂಧೀಜಿ, ನಂದಿ ಗಿರಿಧಾಮದಲ್ಲಿ ವಿಶ್ರಮಿಸುತ್ತಿರುವ ಮಹಾತ್ಮ ಎನ್ನುವ ಚಿತ್ರಗಳೂ ಇವೆ. ಮಹಾತ್ಮರ ನಂದಿಗಿರಿಧಾಮ ಭೇಟಿಯ ಚಿತ್ರಗಳನ್ನು ಮರುಸೃಷ್ಟಿಸಲಾಗಿದೆ.

ಭವನದ ಪ್ರವೇಶವೇ ಗಮನ ಸೆಳೆಯುವಂತೆ ೧೯೩೦ರಲ್ಲಿ ದಂಡಿ ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ಸಮುದ್ರ ತೀರದಲ್ಲಿ ಗಾಂಧಿ ಅವರ ಮೊಮ್ಮಗ ತಾತನ ಕೋಲು ಹಿಡಿದು ಮುಂದೆ ನಡೆಯುತ್ತಿರುವುದು, ಅವನ ಹಿಂದೆ ಗಾಂಧೀಜಿ ಸಾಗುತ್ತಿರುವ ಪ್ರತಿಮೆ ಭವನ ಪ್ರವೇಶದ ಮೊದಲು ಸಿಗುತ್ತದೆ. ಇದರ ಪಕ್ಕದಲ್ಲಿಯೇ ಕೆಟ್ಟದ್ದನ್ನು ನೋಡಬೇಡ, ಕೇಳಬೇಡ, ಮಾತನಾಡಬೇಡ ಎನ್ನುವ ಮೂರು ಕೋತಿಗಳು, ನಂತರ ಅಸ್ಪಶ್ಯತೆ ನಿವಾರಣೆಗೆ ಹೋರಾಟಕ್ಕೆ ರೂಪಕ ಎನ್ನುವಂತೆ ನಿರ್ಮಿಸಿರುವ ಮಗು ಮತ್ತು ಗಾಂಧಿ ಪ್ರತಿಮೆಗಳು ಕಾಣುತ್ತವೆ.

ಚರಕದಲ್ಲಿ ನೂಲು ತೆಗೆಯುತ್ತಿರುವ ಗಾಂಧಿ, ಭಗವದ್ಗೀತೆ, ಅವರು ಬಳಸುತ್ತಿದ್ದ ಪೆನ್ನು, ಮೇಜುಗಳ ಪ್ರತಿಕೃತಿ ಒಳಗೊಂಡ ಕೊಠಡಿ, ಗಾಂಧೀಜಿ ಅವರಿಗೆ ಸಂಬ0ಧಿಸಿದ0ತೆ ರಚನೆ ಆಗಿರುವ ಕೃತಿಗಳು, ಸಾಹಿತ್ಯವನ್ನು ಒಳಗೊಂಡ ಗ್ರಂಥಾಲಯ, ವಿಚಾರ ಸಂಕಿರಣಕ್ಕೆ ಎಂದು ರೂಪಿಸಲಾದ ಕೊಠಡಿ, ತರಬೇತಿ ಕೊಠಡಿ, ಖಾದಿ ಭಂಡಾರ ಹೀಗೆ ವಿವಿಧ ಮಳಿಗೆಗಳು ನಿರ್ಮಾಣವಾಗಿವೆ. ಮುಖ್ಯವಾಗಿ ಗಮನ ಸೆಳೆಯುವುದು ಇಲ್ಲಿನ ೧೦೦ ಚಿತ್ರಗಳು. ಮೋಹನ್ ದಾಸ್ ಟು ಮಹಾತ್ಮ ಎನ್ನುವ ಈ ಚಿತ್ರಪಟ ಗ್ಯಾಲರಿಯಲ್ಲಿ ಗಾಂಧೀಜಿ ಅವರು ಹುಟ್ಟಿದ ಮನೆ, ತಂದೆ, ತಾಯಿ, ಬಾಲ್ಯದಲ್ಲಿ ಪಾಠ ಮಾಡಿದ ಅವರ ಶಿಕ್ಷಕರ ಚಿತ್ರಗಳು, ಬಾಲ್ಯದಲ್ಲಿ ಗಾಂಧಿ ಅವರ ಚಿತ್ರ, ಅವರ ಸ್ವಾತಂತ್ರ ಹೋರಾಟದ ಕ್ಷಣಗಳು, ಸಾಮಾಜಿಕ ಹೋರಾಟದ ಚಿತ್ರಗಳನ್ನು ಕಾಣಬಹುದು. ಈ ಚಿತ್ರಪಟ ಗ್ಯಾಲರಿಯಲ್ಲಿನ 100 ಚಿತ್ರಗಳು ಗಮನ ಸೆಳೆಯುತ್ತವೆ.

೨೦೧೯ರ ಜೂ.೫ರಂದು ಅಂದಿನ ಜಿಲ್ಲೆ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಗಾಂಧಿ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ 2024ರ ಅ.೨ರಂದು ಜಿಲ್ಲೆ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಭವನವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಗಾಂಧಿ ಭವನ ಕಟ್ಟಡ ಉದ್ಘಾಟನೆ ಹಾಗೂ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಅಕ್ಟೋಬರ್ 2 ರಂದು ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ಕಾರ್ಯಕ್ರಮದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿರುವುದು ವಿಶೇಷವಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲೆ ಉಸ್ತುವಾರಿ ಸಚಿವರಾದ ಡಾ.ಎಂ.ಸಿ. ಸುಧಾಕರ್ ಅವರು ನೆರವೇರಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಹಿಸಲಿದ್ದು, ಚಿಕ್ಕಬಳ್ಳಾಪುರ ಸಂಸದ ಡಾ. ಕೆ.ಸುಧಾಕರ್, ಕೋಲಾರ ಸಂಸದ ಎಂ. ಮಲ್ಲೇಶ್ ಬಾಬು, ಶಾಸಕರಾದ ಎಸ್.ಎನ್. ಸುಬ್ಬಾರೆಡ್ಡಿ, ಬಿ.ಎನ್. ರವಿಕುಮಾರ್, ಕೆ.ಹೆಚ್. ಪುಟ್ಟಸ್ವಾಮಿಗೌಡ, ವಿಧಾನ ಪರಿಷತ್ತಿನ ಸದಸ್ಯರಾದ ಚಿದಾನಂದ ಎಂ. ಗೌಡ, ಎಂ.ಎಲ್. ಅನಿಲ್ ಕುಮಾರ್, ಡಿ.ಟಿ. ಶ್ರೀನಿವಾಸ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

 

About The Author

Leave a Reply

Your email address will not be published. Required fields are marked *