ಉಚಿತ ಜಾನುವಾರು ಮೇವು ವಿತರಣೆ

ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ದಂಡು

ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಶ್ರೀನಿವಾಸಪುರದಲ್ಲಿ ಪ್ರತಿಭಟನೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ

December 24, 2024

Ctv News Kannada

Chikkaballapura

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರಿಗೆ ಗೌರವ ಸಮರ್ಪಣೆ

1 min read

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರಿಗೆ ಗೌರವ ಸಮರ್ಪಣೆ
ತಿಮ್ಮಕ್ಕ ಬಡಾವಣೆ ನಾಗರಿಕರಿಂದ ಅದ್ಧೂರಿ ಸನ್ಮಾನ
೫ ವರ್ಷಗಳ ಸಾಧನೆ 1 ವರ್ಷದಲ್ಲಿ ಮಾಡಲು ಸಲಹೆ

ಚಿಕ್ಕಬಳ್ಳಾಪುರ ನಗರಸಬೆಯ ಅಧ್ಯಕ್ಷಮತ್ತು ಉಪಾಧ್ಯಕ್ಷರು ಅಕ್ಕಪಕ್ಕದ ವಾರ್ಡಿನವರೇ ಆಗಿರೋದು ವಿಶೇಷ. ಹೌದು ಅಧ್ಯಕ್ಷ ಗಜೇಂದ್ರ ೪ನೇ ವಾರ್ಡಿನ ಸದಸ್ಯರಾಗಿದ್ದಾರೆ, ಉಪಾಧ್ಯಕ್ಷ ನಾಗರಾಜ್ ಜೆ ೫ನೇ ವಾರ್ಡಿನ ಸದಸ್ಯರು. ಹಾಗಾಗಿ ನಗರಸಭೆೆಯ ಜವಾಬ್ದಾರಿ ವಹಿಸಿಕೊಂಡಿರುವ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ೫ನೇ ವಾರ್ಡಿನ ತಿಮ್ಮಕ್ಕ ಬಡಾವಣೆಯ ನಾಗರಿಕರು ಆತ್ಮೀಯವಾಗಿ ಸನ್ಮಾನಿಸಿದರು.

ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಗೆ ಹೊಂದಿಕೊ0ಡೇ ಇರುವ ತಿಮ್ಮಕ್ಕ ಬಡಾವಣೆ ಮತ್ತು ಶ್ರಿನಿವಾಸ್ ಬಡಾವಣೆಗಳು ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿವೆ. ಅತಿ ಹೆಚ್ಚು ಸುಶಿಕ್ಷಿತರೇ ವಾಸವಿರುವ ಈ ಎರಡೂ ಬಡಾವಣೆಗಳು ನೂತನವಾಗಿ ನಿರ್ಮಾಣವಾಗಿವೆ. ಈ ಎರಡೂ ಬಡಾವಣೆಗಳೂ ೫ನೇ ವಾರ್ಡಿನ ವ್ಯಾಪ್ತಿಗೆ ಒಳಪಟ್ಟಿದ್ದು, ಈ ಹಿಂದೆ ನಡೆದ ನಗರಸಭಾ ಚುನಾವಣೆ ವೇಳೆ ತಿಮ್ಮಕ್ಕ ಬಡಾವಣೆಯ ಬಹುತೇಕ ನಾಗರಿಕರು ಆಗಿನ ಬಿಜೆಪಿ ಅಭ್ಯರ್ಥಿಯಾಗಿದ್ದ ನಾಗರಾಜ್ ಅವರನ್ನು ಬೆಂಬಲಿಸಿದ್ದರು. ಅದೇ ಕಾರಣಕ್ಕೆ ನಾಗರಾಜ್ ಅವರು ನಗರದಲ್ಲಿಯೇ ಅತಿ ಹೆಚ್ಚು ಮತಗಳ ಅಂತರದಿAದ ಗೆಲುವು ಸಾಧಿಸಿದ್ದರು.

ನಗರಸಭಾ ಸದಸ್ಯರಾದ ಮೊದಲ ಅವಧಿಯಲ್ಲಿಯೇ ಅವರಿಗೆ ಅಧಿಕಾರ ಹುಡುಕಿ ಬಂದಿದೆ ಎಂಬುದಕ್ಕೆ ಇದೀಗ ಉಪಾಧ್ಯಕ್ಷರಾಗಿರುವುದೇ ನಿದರ್ಶನವಾಗಿದೆ. ತಮ್ಮದೇ ವಾರ್ಡಿನ ಸದಸ್ಯ ಉಪಾಧ್ಯಕ್ಷರಾಗಿದ್ದಾರೆ ಎಂಬ ಸಂಭಮದ ಕಾರಣ ಶ್ರೀನಿವಾಸ ಬಡಾವಣೆ ಮತ್ತು ತಿಮ್ಮಕ್ಕ ಬಡಾವಣೆ ನಿವಾಸಿಗಳು ಸೇರಿ ಶನಿವಾರ ಸಂಜೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಈ ಸಂದಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ, ಅಧಿಕಾರ ಅವಧಿ ಹೆಚ್ಚು ಮತ್ತು ಕಡಿಮೆ ಎಂಬ ಬೇಧವಿಲ್ಲದೆ ಇರುವ ಅವಧಿಯಲ್ಲಿಯೇ ಜನಪರ ಕೆಲಸಗಳನ್ನು ಮಾಡುವ ಮೂಲಕ ನಗರಸಭೆ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಇರುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸಲಹೆ ನೀಡಿದರು. ಅಲ್ಲದೆ ತಿಮ್ಮಕ್ಕ ಬಡಾವಣೆಯಲ್ಲಿರುವ ಚರಂಡಿ ಮತ್ತು ರಸ್ತೆ ಸಮಸ್ಯೆಗಳನ್ನು ಬಗೆಹರಿಸುವಂತೆ ಕೋರಿದರು.

ಬಡಾವಣೆಯ ನಿವಾಸಿಯಾದ ಗಾಯಕ ಗಾ.ನ. ಅಶ್ವತ್ಥ್ ಅವರು ವಚನ ಹಾಡುವ ಮೂಲಕ ಆರಂಭವಾದ ಸನ್ಮಾನ ಕಾರ್ಯಕ್ರಮದಲ್ಲಿ ಬಡಾವಣೆಯ ನಿವಾಸಿಗಳಾದ ನವಮೋಹನ್, ಶಿವಕುಮಾರ್ ಸೇರಿದಂತೆ ಹಲವರು ಮಾತನಾಡಿದರು. ತಮ್ಮ ಬಡಾವಣೆಯಲ್ಲಿ ಇ ಖಾತೆ ಸಮಸ್ಯೆ ಆಗಿದೆ. ಇದಕ್ಕೆ ಮುಕ್ತಿ ದೊರಕಿಸಿ ಕೊಡಲು ಸಹಕರಿಸುವಂತೆ ನಗರಸಬೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಕೋರಿದರು. ಅಲ್ಲದೆ ಮಳೆ ಬಂದರೆ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೆ ನಿಂತಲ್ಲೇ ನಿಲ್ಲುತ್ತಿದ್ದು, ಇದಕ್ಕೆ ಪರಿಹಾರ ದೊರಕಿಸಲು ಕೋರಿದರು. ಇನ್ನು ಹಲವರು ಬಡಾವಣೆಯಲ್ಲಿ ದೇವಾಲಯ ಇಲ್ಲದಿದ್ದು, ಪುಟ್ಟ ಗಣಪತಿ ದೇವಾಲಯ ನಿರ್ಮಿಸಿಕೊಟ್ಟರೆ ಬಡಾವಣೆಯ ಜನತೆಗೆ ಸಹಕಾರಿಯಾಗಲಿದೆ. ಹಾಗಾಗಿ ಈ ವಿಚಾರದತ್ತ ನಗರಸಭೆÉ ಗಮನ ಹರಿಸಿ, ತಮ್ಮ ಅವಧಿಯಲ್ಲಿಯೇ ದೇವಾಲಯ ನಿರ್ಮಿಸಿಕೊಡಬೇಕೆಂದು ಕೋರಿದರು.

ಎರಡೂ ಬಡಾವಣೆಗಳ ನಿವಾಸಿಗಳ ಮಾತುಗಳನ್ನು ಆಲಿಸಿದ ನಗರ¸ಭೆ ಉಪಾಧ್ಯಕ್ಷನಾಗರಾಜ್ ಜೆ ಮಾತನಾಡಿ, ಉಭಯ ಬಡಾವಣೆಗಳಲ್ಲಿ ಖಾತೆ ಸೇರಿದಂತೆ ಇತರೆ ಸಮಸ್ಯೆಗಳಿರುವುದು ತಮ್ಮ ಗಮನಕ್ಕೆ ಬಂದಿದೆ. ಯುಜಿಡಿ, ಚರಂಡಿ, ಬೀದಿ ದೀಪ, ರಸ್ತೆ ಸೇರಿದಂತೆ ಇತರೆ ಸಮಸ್ಯೆಗಳು ಎದುರಾದ ಕೂಡಲೇ ಬಗೆಹರಿಸಲಾಗುತ್ತಿದ್ದು, ಖಾತೆ ವಿಚಾರದಲ್ಲಿ ತಡವಾಗಲು ಸರ್ಕಾರದ ನಿಬಂಧನೆಗಳೇ ಕಾರಣವಾಗಿದೆ. ಹಾಗಾಗಿ ಈ ಕುರಿತು ಸಭೆಯಲ್ಲಿ ಚರ್ಚೆ ಮಾಡಿ, ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸುವುದಾಗಿ ಹೇಳಿದರು.

ನಂತರ ನಗರಸಭೆ ಅಧ್ಯಕ್ಷಗಜೇಂದ್ರ ಮಾತನಾಡಿ, ತಮಗೆ ಅತಿ ಕನಿಷ್ಠ ಅವಧಿ ಇರುವುದರಿಂದ ಇರುವ ಅವಧಿಯಲ್ಲಿಯೇ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಲಾಗುವುದು. ಅಲ್ಲದೆ ನಗರ¸ಭೆಯಲ್ಲಿ ಜ್ವಲಂತವಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಉಪಾಧ್ಯಕ್ಷರೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು. ಪ್ರಸ್ತುತ ಅಗಲೀಕರಣ ಆಗುತ್ತಿರುವ ಎಂಜಿ ರಸ್ತೆಗೆ ಹೊಂದಿಕೊ0ಡೇ ತಿಮ್ಮಕ್ಕ ಬಡಾವಣೆ ಇದ್ದು, ಎಂಜಿ ರಸ್ತೆ ಸುಸಜ್ಜಿತವಾಗಿ ನಿರ್ಮಾಣವಾಗಲು ಅಗತ್ಯವಿರುವ ಕ್ರಮಗಳನ್ನು ಈಗಾಗಲೇ ವಹಿಸಲಾಗುತ್ತಿದೆ. ಇನ್ನು ಆಸ್ತಿ ಕಳೆದುಕೊಳ್ಳುವ ಕಟ್ಟಡ ಮಾಲೀಕರಿಗೆ ಹೆಚ್ಚು ತೊಂದರೆಯಾಗದ ರೀತಿಯಲ್ಲಿ ಹೆದ್ದಾರಿ ಅಗಲೀಕರಣ ಮಾಡಲು ಸಂಬAಧಿಸಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಈ ವಿಚಾರದಲ್ಲಿಯೂ ಜನರಿಗೆ ಅನುಕೂಲ ಮಾಡಿಕೊಡಲು ಬದ್ಧರಾಗಿರುವುದಾಗಿ ಅವರು ಹೇಳಿದರು.

ನಂತರ ಶ್ರೀನಿವಾಸ ಮತ್ತು ತಿಮ್ಮಕ್ಕ ಬಡಾವಣೆಗಳ ನಿವಾಸಿಗಳು ಅಧ್ಯಕ್ಷ, ಉಪಾಧ್ಯಕ್ಷರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಈ ಸಂದಭದಲ್ಲಿ ಕಿಡ್ನಿ ಆಸ್ಪತ್ರೆಯ ಜಯರಾಂ, ಚಂದ್ರಪ್ಪ, ಮುನಿಕೃಷ್ಣ, ಗಾ.ನ. ಅಶ್ವತ್ಥ್, ಮಧು, ಸಂದೀಪ್, ಕೋಡಿರಂಗಪ್ಪ, ನವ ಮೋಹನ್, ಶಿವಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *