ಎಸ್‌ಎಫ್‌ಐ ರಾಜ್ಯ ಸಮ್ಮೇಶನ ಯಶಸ್ವಿ
1 min readಎಸ್‌ಎಫ್‌ಐ ರಾಜ್ಯ ಸಮ್ಮೇಶನ ಯಶಸ್ವಿ
ಮೂರು ದಿನಗಳ ಕಾಲ
ಚಿಕ್ಕಬಳ್ಳಾಪುರದಲ್ಲಿ ನಡೆದ ಸಮ್ಮೇಳನ
ಎಸ್‌ಎಫ್‌ಐ 16ನೇ ರಾಜ್ಯ ಸಮ್ಮೇಳನ ಮೂರು ದಿನಗಳ ಕಾಲ ಚಿಕ್ಕಬಳ್ಳಾಪುರದಲ್ಲಿ ನಡೆಯಿತು. ಸಭೆಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳನ್ನ ಗುರುತಿಸಿ, ಪರಿಹಾರ ಹುಡುಕುವ ನಿಟ್ಟಿನಲ್ಲಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು ಎಂದು ಎಸ್‌ಎಫ್‌ಐ ಕೇಂದ್ರ ಸಮಿತಿ ಸದಸ್ಯ ಅಮರೇಶ್ ಕಡಗ ಹೇಳಿದರು.
ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಸ್‌ಎಫ್‌ಐ ಕೇಂದ್ರ ಸಮಿತಿ ಸದಸ್ಯ ಅಮರೇಶ್ ಕಡಗ, ಅಭಿವೃದ್ಧಿಯ ಹೆಸರಿನಲ್ಲಿ ದೇಶದ ಶಿಕ್ಷಣ ಬಂಡವಾಳಶಾಹಿಗಳ ಕೈಗೆ ನೀಡಲಾಗುತ್ತಿದೆ. ಎಸ್‌ಎಐ ನಂತಹ ಸಂಘಟನೆ ಇದನ್ನು ವಿರೋಧಿತ್ತಿದೆ. 40 ವರ್ಷಗಳ ಹಿಂದೆ ಕಾಲೇಜುಗಳಲ್ಲಿ ಯಾವ ರಾಜಕಾರಣಿ ಇರುತ್ತಿರಲಿಲ್ಲ,
ಭಾರತದಲ್ಲಿ ಸಾಧು ಸಂತರು ಪ್ರಗತಿಪರರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಇಂತಹ ದೇಶದಲ್ಲಿ ನಾಜಿ ಸಂತತಿಗಳಿಗೆ ಜಾಗವಿಲ್ಲ. ಹಿಂದು ಮುಸ್ಲಿಂ ನಡುವೆ ಕೋಮುವಾದ ಸೃಷ್ಟಿಸುವ ನಾಜಿಗಳಿಗೆ ಇಲ್ಲಿ ಅವಕಾಶವಿಲ್ಲ. ಮತ್ತೊಬ್ಬ ಕೇಂದ್ರ ಸಮಿತಿ ಸದಸ್ಯ ಭೀಮನಗೌಡ ಮಾತನಾಡಿ, ವಿದ್ಯಾರ್ಥಿನಿಯರ ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ, ಮಹಿಳೆಯರ ಸೂಕ್ತ ರಕ್ಷಣೆಗೆ ಒತ್ತಾಯಿಸಿ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಡೊನೇಷನ್ ಹಾವಳಿ ನಿಯಂತ್ರಣಕ್ಕೆ ಒತ್ತಾಯ, ಎಸ್‌ಎಐ ೫೪ನೇ ಸಂಸ್ಥಾಪನ ದಿನಾಚರಣೆ ಮತ್ತು ಸ್ಮರಣ ಹಂಚಿಕೆ ತರಲು ನಿರ್ಣಯಗಳನ್ನು ಎಸ್‌ಎïಐ ಹೊಸ ರಾಜ್ಯ ಸಮಿತಿ ನಿರ್ಣಯಿಸಿದ್ದು, ಇದನ್ನು ಮುಖ್ಯ ವಾಹಿನಿಗೆ ತರಲು ಹೋರಾಟ ರೂಪಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಈ ಸಂದಭದಲ್ಲಿ ಕೇಂದ್ರ ಸಮಿತಿ ಸದಸ್ಯರು ನವದೆಹಲಿ ಅಮರೇಶ್ ಕಡಗದ, ಭೀಮನಗೌಡ, ನೂತನ ಎಸ್ ಎಫ್ ಐ ರಾಜ್ಯ ಅಧ್ಯಕ್ಷ ಅಂಬ್ಳಿ ಕಲ್ ಶಿವಕುಮಾರ್, ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ಇದ್ದರು.