85 ಸಾವಿರ ವಿಚಾರವಾಗಿ ಸ್ನೇಹಿತರ ನಡುವೆ ಗಲಾಟೆ
1 min read85 ಸಾವಿರ ವಿಚಾರವಾಗಿ ಸ್ನೇಹಿತರ ನಡುವೆ ಗಲಾಟೆ
ಕೊಲೆಯಲ್ಲಿ ಅಂತ್ಯ, ಬೆಂಗಳೂರು
ಗ್ರಾಮಾ0ತರ ಎಸ್ಪಿ. ಎಎಸ್ ಪಿ ಭೇಟಿ
ತಮಿಳುನಾಡು ಮೂಲದ ರಾಜೀವ್ ಗಾಂಧಿ ಪೆರುಮಾಳ್ ಕೊಲೆಯಾದವ
ಇಬ್ಬರು ಕಾರ್ಮಿಕರ ನಡುವೆ ಹಣದ ವಿಚಾರದಲ್ಲಿ ಗಲಾಟೆ ನಡೆದು, ಪರಸ್ಪರ ಬಡಿದಾಡಿಕೊಂಡು ಹ¯್ಲೆ ನಡೆದ ಪರಿಣಾಮ ವ್ಯಕ್ತಿಯೊಬ್ಬ ಕೊಲೆಯಾಗಿದ್ದಾನೆ. ನೆಲಮಂಗಲ ತಾಲೂಕಿನ ರಾಷ್ಟಿಯ ಹೆದ್ದಾರಿ ೪೮ರ ಪಕ್ಕದ ಮಹಿಮಾಪುರದ ಖಾಸಗಿ ಹೋಟೆಲ್ ಬಳಿ ಇರುವ ವಠಾರದ ಶೆಡ್ ಮನೆಯಲ್ಲಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಇಬ್ಬರು ಕಾರ್ಮಿಕರ ನಡುವೆ ಹಣದ ವಿಚಾರದಲ್ಲಿ ಗಲಾಟೆ ನಡೆದು, ಪರಸ್ಪರ ಬಡಿದಾಡಿಕೊಂಡು ಹಲ್ಲೆ ನಡೆದ ಪರಿಣಾಮ ವ್ಯಕ್ತಿಯೊಬ್ಬ ಕೊಲೆಯಾಗಿದ್ದಾನೆ ತಮಿಳುನಾಡು ಮೂಲದ ರಾಜೀವ್ ಗಾಂಧಿ ಪೆರುಮಾಳ್ (40) ಕೊಲೆಯಾದ ವ್ಯಕ್ತಿಯಾಗಿz್ದÁನೆ, ಈತನ ಮನೆಯಲ್ಲಿದ್ದ ಮತ್ತೊಬ್ಬ ಸ್ನೇಹಿತ ಸುರೇಶ್ ಬಾಲಾಜಿ ಹಣದ ವಿಚಾರವಾಗಿ ಜಗಳವಾಗಿ ಕೊಲೆಮಾಡಿರುವ ಆರೋಪಿಯಾಗಿದ್ದಾನೆ.
ರಾಜೀವ್ ಗಾಂಧೀ ಪೆರುಮಾಳ್ ಮತ್ತು ಆತನ ಸ್ನೇಹಿತ ಸಾಕಷ್ಟು ದಿನದಿಂದ ಮಹಿಮಾಪುರ ಬಳಿ ಇರುವ ಶೆಡ್‌ನಲ್ಲಿ ವಾಸವಿದ್ದು, ಕಲ್ಲು ಕೆಲಸ, ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆ ಹಣಕಾಸಿನ ವಿಚಾರದಲ್ಲಿ ಶುಕ್ರವಾರ ರಾತ್ರಿ ಗಲಾಟೆ ನಡೆದಿದೆ, ದೊಣ್ಣೆಯಿಂದ ಪೆರುಮಾಳ್ ಸ್ನೇಹಿತ ಹಲ್ಲೆ ನಡೆಸಿದ್ದಾ ನೆ, ತೀವ್ರ ರಕ್ತ ಸ್ರಾವದಿಂದ ರಾಜೀವ್ ಗಾಂಧಿ ಪೆರುಮಾಳ್‌ನನ್ನು, ಕೊಲೆ ಮಾಡಿದ ಸ್ನೇಹಿತ ೮ನೇ ಮೈಲಿ ಬಳಿ ಇರವ ಪ್ರಕ್ರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾ ನೆ, ಚಿಕಿತ್ಸೆ ಫಲಕಾರಿಯಾಗದೆ ರಾಜೀವ್ ಗಾಂಧಿ ಪೆರುಮಾಳ್ ಸಾವನಪ್ಪಿದ್ದಾ ರೆ. ಆತನ ಸ್ನೇಹಿತ ೮೫ ಸಾವಿರ ರೂಪಾಯಿ ವಿಚಾರವಾಗಿ ಒಂದೇ ರೂಮಿನಲ್ಲಿದ್ದ ಇಬ್ಬರು ಸ್ನೇಹಿತರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್.ಪಿ. ಸಿ.ಕೆ.ಬಾಬಾ, ಎಎಸ್ಪಿ ನಾಗೇಶ್, ಡಿವೈಎಸ್ಪಿ ರವಿ, ನೆಲಮಂಗಲ ಗ್ರಾಮಾಂತರ ಠಾಣೆ ಪಿಐ ನರೇಂದ್ರ ಬಾಬು, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾ ರೆ. ಘಟನೆ ಸಂಬ0ಧ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳದಲ್ಲಿ ಎಎಸ್‌ಐ ಸಿದ್ದಗಂಗಯ್ಯ, ವಿಧಿ-ವಿನ ಪ್ರಯೋಗಾಲಯದ ತಂಡ, ಬೆರಳಚ್ಚು ತಜ್ಞರ ತಂಡ, ಪೇದೆಗಳಾದ ಮಧು, ಗ್ರಾಮಸ್ಥರಾದ ಪ್ರಕಾಶ್ ನರೇಂದ್ರ ಇತರರಿದ್ದರು.
ಈ ವೇಳೆ ಎಸ್.ಪಿ.ಸಿಕೆ.ಬಾಬಾ ಮಾತನಾಡಿ, ಇಬ್ಬರು ಸ್ನೇಹಿತರ ನಡುವಿನ ಜಗಳ, ವಾಗ್ವಾದದಿಂದ ಹಲ್ಲೆ ಸ್ವರೂಪ ಪಡೆದು, ದೊಣ್ಣೆಯಿಂದ ಸ್ನೇಹಿತನ ಕೊಲೆ ಯಾಗಿದೆ, ಆರೋಪಿಯನ್ನಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ, ತನಿಖೆ ಪ್ರಗತಿಯಲ್ಲಿದೆ ಆರೋಪಿಯ ಬಂಧಿಸಿದ್ದೇವೆ, ಇಬ್ಬರು ತಮಿಳುನಾಡು ಮೂಲದವರು ಎಂದು ಹೇಳಿದರು.