ಜಿಲ್ಲಾ ಕೇಂದ್ರಕ್ಕೆ ಶೀಘ್ರದಲ್ಲಿ ಬರಲಿದೆ ಎಂ ಆರ್ ಐ ಸ್ಕಾನಿಂಗ್
1 min readಜಿಲ್ಲಾ ಕೇಂದ್ರಕ್ಕೆ ಶೀಘ್ರದಲ್ಲಿ ಬರಲಿದೆ ಎಂ ಆರ್ ಐ ಸ್ಕಾನಿಂಗ್
ಶಾಸಕ ಪ್ರದೀಪ್ ಈಶ್ವರ್ ಘೋಷಣೆ
ಚಿಕ್ಕಬಳ್ಳಾಪುರ ಜಿಲ್ಲಾ ಸ್ಥಾಪನೆಯಾಗಿ ಹದಿನೆಂಟ್ ವರ್ಷಕಳೆದರೂ ಜಿಲ್ಲಾ ಕೇಂದ್ರದಲ್ಲೊ0ದು ಎಂ ಆರ್ ಐ ಕೇಂದ್ರವಿರಲಿಲ್ಲ ಈಗ ನಮ್ಮ ಸರಕಾರ ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಇನ್ಮುಂದೆ ಎಂ ಆರ್ ಐ ಸ್ಕಾನಿಂಗ್ ಗೆ ಬೆಂಗಳೂರಿಗೆ ಹೋಗುವ ಕಷ್ಟ ತಪ್ಪುತ್ತದೆ ಅದಕ್ಕಾಗಿ 16 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಇಂದು ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮವನ್ನು ನಗರದ ೨೩-೨೪ ನೇ ವಾರ್ಡಿನ ಮನೆ ಮನೆಗಳಿಗೆ ಭೇಟಿನೀಡಿ, ಜನರ ಸಮಸ್ಯಗಳನ್ನು ಆಲಿಸಿ, ಮುಖಂಡರ ಮನೆಯಲ್ಲಿ ಕಾಪಿ ತಿಂಡಿ ಸವಿದರು.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವಾಗಿ ಹದಿನೆಂಟು ವರ್ಷ ಕಳೆದಿದೆ, ಆದರೆ ಜಿಲ್ಲಾ ಕೇಂದ್ರದಲ್ಲಿ ಎಂ ಆರ್ ಐ ಸ್ಕಾನಿಂಗ್ ಇಲ್ಲದಿರುವುದು ವಿಪರ್ಯಾಸ, ಈ ಹಿಂದೆ ಡಾ. ಕೆ ಸುಧಾಕರ್ ರವರು ಆರೋಗ್ಯ ಸಚಿವರು ಕೂಡ ಆಗಿದ್ದರು, ಅವರು ಕೂಡ ಈ ಬಡ ಜನರಿಗೆ ಸಹಾಯವಾಗುವಂತಹ ಎಂ ಆರ್ ಐ ಸ್ಕಾನಿಂಗ್ ಅನ್ನು ಜಿಲ್ಲಾಕೇಂದ್ರದಲ್ಲಿ ಹಾಕುವ ಕೆಲಸವಾಗಲಿಲ್ಲ ಆದರೆ ಅವರು ಮಾಡದೆ ಇರುವ ಕೆಲಸ ನಮ್ಮ ಕಾಂಗ್ರೆಸ್ ಸರ್ಕಾರ ಮಾಡಿದೆ, ಜಿಲ್ಲಾ ಕೇಂದ್ರಕ್ಕೆ ಎಂ ಆರ್ ಐ ಸ್ಕಾನಿಂಗ್ ಯಂತ್ರ ಅತ್ಯವಶ್ಯಕ, ಇದಕ್ಕೆ ಬೇಕಾಗಿರುವ ಸುಸಜ್ಜಿತ ಕೊಠಡಿ ನಿರ್ಮಾಣಕ್ಕೆ 16 ಕೋಟಿ ಅನುಧಾನ ಬಿಡುಗಡೆ ಮಾಡಲಾಗಿದೆ.
ಇನ್ನು ನಗರದ ಅಭಿವೃದ್ದಿಗೆ ನನ್ಮ ಅನುಧಾನದಲ್ಲಿಯೂ ಎಂಟತ್ತು ಕೋಟಿ ವದಗಿಸುತ್ತೇನೆ, ನಗರಕ್ಕೆ ಎಂಟ್ರಿ ಕೊಡುವ ನಾಲ್ಕು ರಸ್ತೆಗಳಿಗೆ ಸ್ವಾಗತ ಕಮಾನುಗಳನ್ನ ರಚಿಸಲಾಗುತ್ತದೆ, ಇನ್ನು ನಗರಸಭೆಯಲ್ಲಿ ಅಡ್ಡ ಮತಧಾನ ಮಾಡಿದ ಕಾಂಗ್ರೇಸ್ ಪಕ್ಷದ 6 ಜನರನ್ನ ಅನರ್ಹ ಗೊಳಿಸುವ ಕುರಿತು ಜಿಲ್ಲಾದಿಕಾರಿಗಳಿಗೆ ಅರ್ಜಿ ಸಲ್ಲಿಸಲು ಕಾನೂನು ಸಲಹೆಗಾರರು ತಯಾರು ಮಾಡುತ್ತಿದ್ದೇವೆ ಎಂದರು.
ವಾರ್ಡುಗಳಿಗೆ ಭೇಟಿ ಕೊಡುವ ಮುನ್ನ ವಾಪಸಂದ್ರ ರಂಗನಾಥಸ್ವಾಮಿ ದೇವರಿಗೆ ವಿಷೇಶ ಪೂಜೆ ಸಲ್ಲಿಸಿ ದರ್ಶನ ಪಡೆದು ವಾರ್ಡುಗಳಿಗೆ ಭೇಟಿ ಕೊಟ್ಟರು.
ಈ ಸಂದರ್ಭದಲ್ಲಿ ನಗರಸಭಾದಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ಕಾಂಗ್ರೇಸ್ ಮುಖಂಡರು ಹಾಜರಿದ್ರು.