ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ನಗರಸಭೆಯಿಂದ ಸ್ಮಶಾನಗಳ ಸ್ವಚ್ಛತೆಗೆ ಚಾಲನೆ

1 min read

ನಗರಸಭೆಯಿಂದ ಸ್ಮಶಾನಗಳ ಸ್ವಚ್ಛತೆಗೆ ಚಾಲನೆ
ಮುಂದುವರಿದ ಸ್ವಚ್ಛ ಭಾರತ್ ಅಭಿಯಾನ
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರಿಂದ ಸ್ವಚ್ಛತೆಗೆ ಚಾಲನೆ

ಚಿಕ್ಕಬಳ್ಳಾಪುರ ನಗರ ವ್ಯಾಪ್ತಿಯಲ್ಲಿರುವ ಸ್ಮಶಾನಗಳ ಅದ್ವಾನಕ್ಕೆ ಕೊನೆಗೂ ಮುಕ್ತಿ ಸಿಗುತ್ತಿದೆ. ಗಿಡ ಗಂಟಿಗಳು ಬೆಳೆದು ಸಮಾಧಿಗಳೇ ಕಾಣದ ರೀತಿಯಲ್ಲಿ ಪೊದೆಗಳಾಗಿದ್ದ ಸ್ಮಶಾನಗಳು ಇದೀಗ ಸ್ವಚ್ಛಗೊಳ್ಳುತ್ತಿವೆ. ಇದಕ್ಕೆ ಕಾರಣ ನಗರಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರು. ಇದೀಗ ಪಿತೃಪಕ್ಷ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಮಹಾಲಯ ಅಮಾವಾಸ್ಯೆ ಎದುರಾಗಲಿದೆ. ಹಾಗಾಗಿಸ್ಮಶಾನಗಳ ಸ್ವಚ್ಛತೆಗೆ ನಗರಸಭೆ ಮುಂದಾಗಿದೆ.

ಹೌದು, ಈ ಹಿಂದೆ ಗಿಡ ಗಂಟಿಗಳು ಬೆಳೆದು ಅದ್ವಾನವಾಗಿರುವ ಸ್ಮಶಾನಗಳ ಬಗ್ಗೆ ಸಿಟಿವಿ ನ್ಯೂಸ್ ವಿಶೇಷ ವರದಿ ಪ್ರಸಾರ ಮಾಡಿತ್ತು. ಅಲ್ಲದೆ ಮಹಾಲಯ ಅಮಾವಾಸ್ಯೆ ವೇಳೆಗೆ ಸ್ಮಶಾನಗಳು ಸ್ವಚ್ಛ ಮಾಡಿ ಸಾರ್ವಜನಿಕರಿಗೆ ಸಹಕರಿಸಬೇಕಾದ ಹೊಣೆ ನಗರಸಭೆ ಮೇಲಿದೆ ಎಂದು ಹೇಳಲಾಗಿತ್ತು. ಅದೇ ಸಮಯಕ್ಕೆ ನಗರಸಭೆಗೆ ನೂತನ ಸಾರಥಿಗಳು ಬಂದಿದ್ದು, ಪ್ರಸ್ತುತ ಪಿತೃಪಕ್ಷಗಳು ನಡೆಯುತ್ತಿದ್ದು, ಶೀಘ್ರದಲ್ಲಿಯೇ ಮಹಾಲಯ ಅಮಾವಾಸ್ಯೆ ಆಗಮಿಸಲಿದೆ. ಮಹಾಲಯ ಅಮಾವಾಸ್ಯೆ ದಿನ ಅಗಲಿದ ಹಿರಿಯರಿಗೆ ಪೂಜೆ ಸಲ್ಲಿಸುವುದ ಹಿಂದೂಗಳಲ್ಲಿ ಸಾಂಪ್ರದಾಯವಾಗಿದ್ದು, ಅಂದು ಜನರಿಗೆ ತೊಂದರೆಯಾಗದ ರೀತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಅಲ್ಲದೆ ನೆನ್ನೆ ತಾನೇ ಚಿಕ್ಕಬಳ್ಳಾಪುರದ ಬಸಪ್ಪನ ಛತ್ರದ ಆವರಣದಲ್ಲಿದ್ದ ಕಲ್ಯಾಣಿ ಸ್ವಚ್ಛಗೊಳಿಸಲಾಗಿತ್ತು. ಸ್ವಚ್ಛ ಭಾರತ್ ಅಭಿಯಾನದಡಿ ಗಣಿ ಮತ್ತು ಭೂ  ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಪಂ ಸಿಇಒ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕಲ್ಯಾಣಿ ಸ್ವಚ್ಛತೆಯಲ್ಲಿ ಭಾಗವಹಿಸಿದ್ದರು. ಅಂದು ಆರಂಭವಾಗಿರುವ ಸ್ವಚ್ಛತಾ ಅಭಿಯಾನ ಅಕ್ಟೋಬರ್ ೨ರವರೆಗೂ ಮುಂದುವರಿಸಲು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು ನಿರ್ಧೆರಿಸಿದ್ದು, ಪ್ರತಿನಿತ್ಯ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಪ್ರಕಟಿಸಿದ್ದಾರೆ.

ನಗರಸಭೆÉ ಅಧ್ಯಕ್ಷ ಗಜೇಂದ್ರ ಹಾಗೂ ಉಪಾಧ್ಯಕ್ಷನಾಗರಾಜ್ ಜೆ ನೇತೃತ್ವದಲ್ಲಿ ಇಂದು ನಗರಸಭೆ ವ್ಯಾಪ್ತಿಯ ಸ್ಮಶಾನಗಳ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು, ನಗರಸಭೆ ಆರೋಗ್ಯ ವಿಭಾಗದ ಅಧಿಕಾರಿಗಳು ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಾಥ್ ನೀಡಿದರು. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಮೊದಲಿಗೆ ನಗರದ ನಿಮ್ಮಾಕುಲ ಕುಂಟೆಯ ಎರಡು ಸ್ಮಶಾನಗಳಿಗೆ `ಭೆಟಿ ನೀಡಿ ಪರಿಶೀಲನೆ ನಡೆಸುವ ಜೊತೆಗೆ ಜೆಸಿಬಿಗಳ ಮೂಲಕ ಸ್ಮಶಾನ ಸ್ವಚ್ಛತೆಗೆ ಚಾಲನೆ ನೀಡಿದರು. ನಂತರ ಸೂಲಾಲಪ್ಪನ ದಿನ್ನೆಯಲ್ಲಿರುವ ಸ್ಮಶಾನಕ್ಕೆ `ಭೆಟಿ ನೀಡಿ, ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಅಲ್ಲದೆ ಸೂಲಾಲಪ್ಪನ ದಿನ್ನೆ ಪ್ರದೇಶದಲ್ಲಿ ಈಗಾಗಲೇ ನಿರ್ಮಾಣವಾಗಿ, ಉದ್ಘಾಟನೆಗೆ ಸಿದ್ಧವಾಗಿರುವ ಅನಿಲ ಚಿತಾಗಾರಕ್ಕೆ ಭೇಟಿ ನೀಡಿದ ಅಧ್ಯಕ್ಷ, ಉಪಾಧ್ಯಕ್ಷರು ಸಿದ್ಧವಾಗಿರುವ ಚಿತಾಗಾರವನ್ನು ಪರಿಶೀಲಿಸಿ, ಆದಷ್ಟು ಶೀಘ್ರದಲ್ಲಿ ಚಿತಾಗಾರಕ್ಕೆ ಚಾಲನೆ ನೀಡುವ `Àಭರವಸೆಯನ್ನು ನೀಡಿದರು. ನಗರದ ಸ್ಮಶಾನಗಳಲ್ಲಿ ಜಾಗದ ಕೊರತೆಯಾಗಿರುವ ಬಗ್ಗೆ ಈಗಾಗಲೇ ದೂರುಗಳು ಬಂದಿದ್ದು, ಈ ಸಂಕಷ್ಟವನ್ನು ಪರಿಹರಿಸಲು ಅನಿಲ ಚಿತಾಗಾರ ಚಾಲನೆಗೊಂಡರೆ ಸಹಕಾರಿಯಾಗಲಿದೆ ಎಂದು ಇದೇ ವೇಳೆ ಅಧ್ಯಕ್ಷ, ಉಪಾಧ್ಯಕ್ಷರು ತಿಳಿಸಿದರು.

ನಂತರ ನಗರದ ೨೨ನೇ ವಾರ್ಡಿನ ನಕ್ಕಲಕುಂಟೆಯ ಸ್ಮಶಾನಕ್ಕೆ `ಭೆಟಿ ನೀಡಿ, ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಅಲ್ಲಿಂದ ವಾಪಸಂದ್ರದಲ್ಲಿರುವ ಎರಡು ಸ್ಮಶಾನಗಳಿಗೆ `ಭೇಟಿ ನೀಡಿ, ಎರಡೂ ಸ್ಮಶಾನಗಳ ಸ್ವಚ್ಛತೆಗೆ ಮುಂದಾದರು. ಎಲ್ಲ ಸ್ಮಶಾನಗಳ ಸ್ವಚ್ಛತೆಗೆ ಚಾಲನೆ ನೀಡಿದ ನಂತರ ಮಾತನಾಡಿದ ನಗರಸಭೆÉ ಅಧ್ಯಕ್ಷ ಗಜೇಂದ್ರ, ಪ್ರಸ್ತುತ ಪಿತೃಪಕ್ಷಗಳು ನಡೆಯುತ್ತಿದೆ. ಅಕ್ಟೋಬರ್ ೨ರಂದು ಮಹಾಲಯ ಅಮಾವಾಸ್ಯೆ ಇದ್ದು, ಅಂದು ಅಗಲಿದ ಹಿರಿಯರಿಗೆ ಪೂಜೆ ಸಲ್ಲಿಸುವ ಸಾಂಪ್ರದಾಯ ಹಿಂದೂ ಸಮುದಾಯದಲ್ಲಿದೆ. ಹಾಗಾಗಿ ಜನರಿಗೆ ಸ್ಮಶಾನಗಳಲ್ಲಿ ಅಸ್ವಚ್ಛತೆ ಕಾಡಿದರೆ ಸಮಸ್ಯೆ ಆಗಲಿದೆ ಎಂಬ ಉದ್ದೇಶದಿಂದ ಸ್ವಚ್ಛತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಅಲ್ಲದೆ ಸ್ಮಶಾನಗಳಲ್ಲಿ ಗಿಡಗಂಟಿಗಳು ಬೆಳೆದು, ಸಮಾಧಿಗಳೇ ಕಾಣಿಸದ ಸ್ಥಿತಿ ಇದೆ. ಇದರಿಂದ ಜನರಿಗೆ ತೊಂದರೆಯಾಗಲಿದ್ದು, ಜನರಿಗೆ ತೊಂದರೆ ತಪ್ಪಿಸಲು ಸ್ವಚ್ಛತಾ ಕಾರ್ಯ ನಡೆಸುತ್ತರುವುದಾಗಿ ಉಪಾಧ್ಯಕ್ಷ ನಾಗರಾಜ್ ಜೆ. ಹೇಳಿದರು. ಅಗಲಿದ ಹಿರಿಯರಿಗೆ ಪೂಜೆಯ ಮೂಲಕ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಹಿಂದೂಗಳ ನಂಬಿಕೆ. ಹಾಗಾಗಿ ಜನರಿಗೆ ಅನುಕೂಲ ಮಾಡುವುದು ನಗರಸಭೆÉ ಜವಾಬ್ದಾರಿಯಾಗಿದೆ. ಅಲ್ಲದೆ ಈಗಾಗಲೇ ನಗರ¸ಭೆಟಿಯಿಂದ ಸ್ವಚ್ಛತಾ ಅಭಿಯಾನ ಆರಂಭಿಸಿದ್ದು, ಅದರ ಮುಂದುವರಿದ ಭಾಗವಾಗಿಯೂ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಇನ್ನು ಕಳೆದ ದಿನವೇ ನಗರದ ಬಸಪ್ಪನ ಛತ್ರದ ಕಲ್ಯಾಣಿ ಸ್ವಚ್ಛತೆ ಮೂಲಕ ನಗರದಲ್ಲಿ ಸ್ವಚ್ಛ ಭಾರತ್ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕಂದವಾರದಲ್ಲಿರುವ ಪೌರಕಾರ್ಮಿಕರ ಕಾಲೋನಿಯಲ್ಲಿಯೂ ಈಗಾಗಲೇ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕೆಲಸಮಾಡಲಾಗಿದೆ. ಇಂದು ಸ್ಮಶಾನಗಳ ಸ್ವಚ್ಛತೆಗೆ ಚಾಲನೆ ನೀಡಲಾಗಿದ್ದು, ಅಕ್ಟೋಬರ್ ೨ರ ವರೆಗೆ ಈ ಸ್ವಚ್ಛತಾ ಅಭಿಯಾನ ಮುಂದುವರಿಯಲಿದೆ. ಪ್ರತಿ ನಿತ್ಯ ಒಂದು ವಿನೂತನ ಸ್ವಚ್ಛತಾ ಕಾರ್ಯಗಳ ಮೂಲಕ ಅಭಿಯಾನ ಮುಂದುವರಿಯಲಿದೆ ಎಂದು ಉಪಾಧ್ಯಕ್ಷ ನಾಗರಾಜ್ ಜೆ ತಿಳಿಸಿದರು.

About The Author

Leave a Reply

Your email address will not be published. Required fields are marked *