ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ಭಾರತಕ್ಕಿಂತ ಎರಡು ವರ್ಷ ತಡವಾಗಿ ಸ್ವಾತಂತ್ರ ಪಡೆದ ಚೀನಾ

1 min read

ಭಾರತಕ್ಕಿಂತ ಎರಡು ವರ್ಷ ತಡವಾಗಿ ಸ್ವಾತಂತ್ರ ಪಡೆದ ಚೀನಾ
ನಮಗಿಂತ ನೂರು ಪಟ್ಟು ಹೆಚ್ಚಾಗಿ ಅಭಿವೃದ್ದಿಯಾಗಿದೆ
ಇಲ್ಲಿ ಶಿಕ್ಷಣ ಬಡತನ ಶ್ರೀಮಂತ ಬಡವ ಬೇದಬಾವದಲ್ಲಿದ್ದೇವೆ

ಭಾರತಕ್ಕೆ ಸ್ವಾತಂತ್ರ ಬಂದು ಎಪ್ಪತೆಂಟು ವರ್ಷಗಳಾಗಿದೆ, ಇನ್ನೂ ಶಿಕ್ಷಣ, ಉದ್ಯೋಗ, ಶ್ರೀಮಂತ ಬಡವ ಅನ್ನೋ ವ್ಯತ್ಯಾಸದಲ್ಲೆ ಬದುಕುತಿದ್ದೇವೆ. ಆದರೆ ನಮಗಿಂತ ಎರಡು ವರ್ಷ ತಡವಾಗಿ ಸ್ವಾತಂತ್ರ ಪಡೆದ ಚೀನಾ ನೂರು ವರ್ಷ ಮುಂದಕ್ಕೆ ಹೋಗಿದೆ. ಅಲ್ಲಿ ಕಟ್ಟಿದ ತೆರಿಗೆ ಪ್ರತಿ ಪೈಸೆ ಸರ್ಕಾರಕ್ಕೆ ಹೋಗುತ್ತೆ, ನಮ್ಮಲ್ಲಿ ಖಾಸಗಿ ಮತ್ತು ಕಾರ್ಪೋರೇಟ್ ಕಂಪನಿಗಳಿಗೆ ಸೇರುತ್ತೆ ಎಂದು ಎಸ್ ಎಫ್ ಐ ರಾಜ್ಯ ಮಾಜಿ ಕಾರ್ಯದರ್ಶಿ ಕೆ.ಪ್ರಕಾಶ್ ಅಭಿಪ್ರಾಯ ಪಟ್ಟರು.

ಚಿಕ್ಕಬಳ್ಳಾಪುರ ನಗರದ ಕೆ ಇ ಬಿ ಕಲ್ಯಾಣ ಮಂಟಪದಲ್ಲಿ ನಡೆದ ಎಸ್ ಎಫ್ ಐ ನ ಮೂರು ದಿನಗಳ ರಾಜ್ಯ ಸಮ್ಮೇಳನ ಇಂದು ಮುಕ್ತಾಯವಾಯಿತು. ಸಮ್ಮೇಳನಕ್ಕೆ ಶುಭಕೋರಿ ಮಾತನಾಡಿದ ಮಾಜಿ ಕಾರ್ಯದರ್ಶಿ ಕೆ.ಪ್ರಕಾಶ್, ಭಾರತ ಸ್ವಾತಂತ್ರ ಪಡೆದು 78 ವರ್ಷಗಳಾಗಿವೆ ಇನ್ನೂ ಅಭಿವೃದ್ದಿ ಪಥದಲ್ಲಿಯೇ ಇದ್ದೇವೆ, ನಾವು ಕಟ್ಟುವ ತೆರಿಗೆ ಖಾಸಗಿ ಕಂಪನಿಗಳ ಪಾಲಾಗುತ್ತಿವೆ, ಸಾರ್ವಜನಿಕ ಉದ್ದಿಮೆಗಳು ಬಾಗಿಲು ಮುಚ್ಚುತ್ತಿವೆ, ಕೇಂದ್ರ ಸರ್ಕಾರ ಸ್ವಾಮ್ಯದ ಬಿ ಎಸ್ ಎನ್ ಎಲ್ ಮುಚ್ಚಿಹೋಗುತ್ತಿದೆ. ಪ್ರಜಾಪ್ರಭುತ್ವ ಸತ್ತು ಹೋಗಿದೆ ನಾವಾಕುವ ಪ್ರತಿ ವೋಟು ಶ್ರೀಮಂತರ ಪರ ಕಾನೂನು ರೂಪಿಸುವ ಶಾಸನಗಳಾಗುತ್ತಿವೆ ಎಂದರು.

ಅದೇ ಕಾರಣಕ್ಕೆ ನಾವು ಇನ್ನೂ ಶಿಕ್ಷಣ ಕೊಡಿ, ಉದ್ಯೋಗ ಕೊಡಿ ನಿವೇಶನ, ವಸತಿ ಆಹಾರ ಕೊಡಿ ಎಂದು ಬೇಡಿಕೊಳ್ಳುತಿದ್ದೇವೆ. ವಿದ್ಯಾರ್ಥಿಗಳು ದೇಶದ ಕುಲಗೆಟ್ಟ ರಾಜಕೀಯ ಹಾಗು ರಾಜಕಾರಣಿಗಳ ಕುತಂತ್ರಗಳನ್ನ ವಿರೋಧಿಸಬೇಕು. ವಿದ್ಯಾರ್ಥಿಗಳ ಒಗ್ಗಟ್ಟು ಬಲಗೊಳ್ಳಬೇಕು, `ಭಗತ್ ಸಿಂಗ್ ಚಂದ್ರಶೇಖರ್ ಅಜಾದ್ ಗಳಾಗಿ ಪರಿವರ್ತನೆಯಾಗಬೇಕು ಎಂದು ಕರೆ ನೀಡಿದರು.

ಎಸ್ ಎಫ್ ಐ ರಾಜ್ಯ ಸಮಿತಿ ನೂತನ ಅಧ್ಯಕ್ಷ ಶಿವಪ್ಪ ಮಾತನಾಡಿ, ರಾಜ್ಯದ ೨೦ಕ್ಕೂ ಹಚ್ವು ಜಿಲ್ಲೆಗಳಿಂದ ಬಂದಿರುವ ಪ್ರತಿನಿಧಿಗಳು ಕೈಗೊಂಡಿರುವ ನಿರ್ಣಯಗಳನ್ನ ಜಾರಿ ಮಾಡಬೇಕು ಅದಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ ಸಂಘಟನೆ ಬಲಗೊಳಿಸಲು ನಮ್ಮೊಟ್ಟಿಗೆ ಕೈಜೋಡಿಸಬೇಕು, ಕೇಂದ್ರ ಸರ್ಕಾರ ಜಾರಿಗೆ ತಂದ ನ್ಯೂ ಎಜುಕೇಶನ್ ಪಾಲಸಿಯನ್ನ ವಿರೋಧಿಸಿ ಹೋರಾಟ ಮಾಡಿದ ಪರಿಣಾಮ ಸಿಎಂ ಸಿದ್ದರಾಮಯ್ಯ ಎನ್ ಇ ಪಿ ರದ್ದುಗೊಳಿಸಿ ಎಸ್ ಇ ಪಿ ಯನ್ನ ಜಾರಿಗೆ ತಂದಿದ್ದಾರೆ ಎಂದರು

ಕಳೆದ ಮೂರು ವರ್ಷದಲ್ಲಿ ಸಂಘಟನೆಗೆ ದುಡಿದು ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಹಲವು ಮುಖಂಡರನ್ನ ಬಿಡುಗಡೆ ಗೊಳಿಸಿ ಹೊಸಬರನ್ನ ರಾಜ್ಯ ಸಮಿತಿಗೆ ಆಯ್ಕೆ ಮಾಡಲಾಯಿತು. ಬಿಡುಗಡೆಗೊಂಡ ಮುಖಂಡರನ್ನು ಬೀಳ್ಕೊಟ್ಟರು. ವೇದಿಕೆಯಲ್ಲಿ ರಾಜ್ಯ ಕಾರ್ಯದರ್ಶಿ ಬೀಮನಗೌಡ, ಸ್ವಾಗತ ಸಮಿತಿ ಅಧ್ಯಕ್ಷ ಡಾ ಅನಿಲ್ ಕುಮಾರ್, ಗೌರವಾಧ್ಯಕ್ಷ ಸರ್ದಾರ್ ಚಾನ್ ಪಾಶ, ಚನ್ನರಾಯಪ್ಪ, ಎಂ ಪಿ ಮುನಿವೆಂಕಟಪ್ಪ ಇದ್ದರು.

 

About The Author

Leave a Reply

Your email address will not be published. Required fields are marked *