ಉಚಿತ ಹೃದ್ರೋಗ ತಪಾಸಣೆ ಶಿಬಿರಕ್ಕೆ ಚಾಲನೆ
1 min readಉಚಿತ ಹೃದ್ರೋಗ ತಪಾಸಣೆ ಶಿಬಿರಕ್ಕೆ ಚಾಲನೆ
ಉಚಿತ ಆರೋಗ್ಯ ಶಿಬಿರಗಳ ಸದ್ಬಳಕೆಗೆ ಮನವಿ
ನಂಜನಗೂಡು ನಗರದ ಗುರುಭವನದಲ್ಲಿ ಗೌತಮ ಬುದ್ಧ ಸಾಮಾಜಿಕ ಸೇವಾ ಟ್ರಸ್ಟ್, ಡಾ.ಎ.ಪಿ.ಜೆಅಬ್ದುಲ್ ಕಲಾಂ ಸೇವಾ ಟ್ರಸ್ಟ್ ಹಾಗೂ ನಾರಾಯಣ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಹೃದ್ರೋಗ ತಪಾಸಣೆ ಶಿಬಿರವನ್ನು ಇಂದು ಆಯೋಜಿಸಲಾಗಿತ್ತು.
ಗೌತಮ ಬುದ್ಧ ಸಾಮಾಜಿಕ ಸೇವಾ ಟ್ರಸ್ಟ್ ಅಧ್ಯಕ್ಷ ಅಭಿನಾಗಭೂಷಣ್ ನೇತೃತ್ವದಲ್ಲಿನಂಜನಗೂಡಿನಲ್ಲಿ ಉಚಿತ ಹೃದ್ರೋಗ ತಪಾಸಣಾಶಿಬಿರ ಆಯೋಜಿಸಲಾಗಿತ್ತು. ಶಿಬಿರಕ್ಕೆ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಚಾಲನೆ ನೀಡಿದರು. ವೇದಿಕೆ ಕಾರ್ಯಕ್ರಮವನ್ನು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಉದ್ಘಾಟಿಸಿ ಮಾತನಾಡಿ, ಹೆಸರಾಂತ ಆಸ್ಪತ್ರೆಗಳಿಗೆ ಹೋಗಿ ಆರೋಗ್ಯ ಚಿಕಿತ್ಸೆ ಪಡೆಯಲು ತೊಂದರೆಯಾಗುತ್ತದೆ ಎಂದು ಗೌತಮ್ ಬುದ್ಧ ಸಾಮಾಜಿಕ ಸೇವಾ ಟ್ರಸ್ಟ್ಮತ್ತು ಅಬ್ದುಲ್ ಕಲಾಂ ಸೇವಾ ಟ್ರಸ್ಟ್ ಕಾರ್ಯಕ್ರಮ ಆಯೋಜಿಸಿದ್ದಾರೆ. ಸಾರ್ವಜನಿಕರು ಇದರ ಉಪಯೋಗಪಡಿಸಿಕೊಳ್ಳಬೇಕು. ಇಂತಹ ಆರೋಗ್ಯ ಚಿಕಿತ್ಸೆ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಸಬೇಕು ಎಂದರು.
ಹೃದಯ ಸಂಬ0ಧಿ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಲು ಶಿಬಿರ ಸಹಕಾರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು, ಗೌತಮ ಬುದ್ಧ ಸಾಮಾಜಿಕ ಸೇವಾ ಟ್ರಸ್ಟ್ ಅಧ್ಯಕ್ಷ ಅಭಿನಾಗಭೂಷಣ್, ಅಬ್ದುಲ್ ಕಲಾಂ ಸೇವಾ ಟ್ರಸ್ಟ್ ಅಧ್ಯಕ್ಷ ಸೈಯದ್ ಹುಸೇನ್, ಡಾ.ಪೂಜಾ, ಡಾ.ವನಜಾ, ಪ್ರತಿಧ್ವನಿ ವೇದಿಕೆ ಅಧ್ಯಕ್ಷ ತ್ರಿನೇಶ್, ಜನಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ವಿಜಯಕುಮಾರ್, ಟ್ರಸ್ಟ್ ಸದಸ್ಯ ಪ್ರಶಾಂತ್ ಕುಮಾರ್, ಸ್ಪರ್ಶ, ರಾಜೇಂದ್ರ , ಜಯರಾಮ್, ಮಹೇಶ್, ವಿನಯ್ ಇದ್ದರು.