ರೆಡ್ಡಿಗೊಲ್ಲವಾರಹಳ್ಳಿ ಶಾಲೆಯಲ್ಲಿ ಪೋಷಣ್ ಅಭಿಯಾನ್
1 min readರೆಡ್ಡಿಗೊಲ್ಲವಾರಹಳ್ಳಿ ಶಾಲೆಯಲ್ಲಿ ಪೋಷಣ್ ಅಭಿಯಾನ್
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಚಾಲನೆ
ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ ಸಚಿವ
ಚಿಕ್ಕಬಳ್ಳಾಪುರ ತಾಲ್ಲೂಕಿನ ರೆಡ್ಡಿಗೊಲ್ಲವಾರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಪೋಷಣ್ ಅಭಿಯಾನ್‌ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಉದ್ಘಾಟಿಸಿದರು.
ಅಪೌಷ್ಠಿಕತೆಯಿಂದ ಮಕ್ಕಳು ಬಳಲಬಾರದು ಎಂಬ ಕಾರಣಕ್ಕೆ ಪೋಷಣ್ ಅಭಿಯಾನದ ಅಡಿಯಲ್ಲಿ ಮಕ್ಕಳಿಗೆ ಮೊಟ್ಟೆ, ಬಾಳೇಹಣ್ಣು, ಚುಕ್ಕಿ ತಿನ್ನಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ರಾಜ್ಯ ಸರ್ಕಾರದ ಅಕ್ಷರದಾಸೋಹ ಹಾಗೂ ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಯೋಗದೊಂದಿಗೆ ಶಾಲಾ ಮಕ್ಕಳ ಪೌಷ್ಠಿಕತೆ ಹೆಚ್ಚಿಸಲು ಎಲ್ಲಾ ಸರ್ಕಾರಿ ಹಾಗು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ವಾರದಲ್ಲಿ 6 ದಿನ ಬಿಸಿಯೂಟದ ಜೊತೆಗೆ ಪೂರಕ ಪೌಷ್ಠಿಕ ಆಹಾರಗಳಾದ ಮೊಟ್ಟೆ, ಬಾಳೇಹಣ್ಣು ಹಾಗೂ ಚುಕ್ಕಿಯನ್ನ ಉಚಿತವಾಗಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಡಾ.ಎಂ.ಸಿ. ಸುದಾಕರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬೈಲಾಂಜಿನಪ್ಪ, ಕುಡಾ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಸೇರಿದಂತೆ ಹಲವು ಮುಖಂಡರು ಬಾಗಿಯಾಗಿದ್ದರು. ಈ ವೇಳೆ ಕೋಳಿ ಮೊಟ್ಟೆ ಹೇಗೆ ಬೇಯಿಸಬೇಕು ಎಂದು ಸಚಿವ ಡಾ.ಎಂ.ಸಿ. ಸುದಾಕರ್ ಅಡುಗೆ ಸಹಾಯಕರಿಗೆ ಪ್ರಾಯೋಗಿಕವಾಗಿ ತಿಳಿಸಿದ್ದು ವಿಶೇಷವಾಗಿತ್ತು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್, ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ನಡೆಸಿದರು. ಸಿದ್ದರಾಮಯ್ಯರನ್ನ ಯಾರಿಂದಲೂ ಕಟ್ಟಿಹಾಕಲು ಸಾಧ್ಯವಿಲ್ಲ, ಕಾಂಗ್ರೆಸ್ ವರಿಷ್ಠರು, 7 ಕೋಟಿ ಕನ್ನಡಿಗರ ಬೆಂಬಲ ಅವರಿಗಿದೆ. ಸಿದ್ದರಾಮಯ್ಯ ವಿರುದ್ಧ ದೂರು ಕೊಟ್ಟಿದ್ದಾರೆ, ತನಿಖೆಯಾಗಲಿ ನಾವು ತನಿಖೆಗೆ ಅಡ್ಡಿ ಮಾಡೋದಿಲ್ಲ. ಹೈಕೋರ್ಟ್ ನಲ್ಲಿ ನಡೆದ ವಾದ ಗಮನಿಸಿದ್ದೇನೆ, ಊಹಾಪೋಹಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದರು.
ಹರಿಯಾಣದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿಎಂ ಸಿದ್ದರಾಮಯ್ಯರ ಬಗ್ಗೆ ಮಾತಾನಾಡುತ್ತಾರೆ.
ಮಾಜಿ ಸಿಎಂ ಯಡಿಯೂರಪ್ಪ ಪೋಕ್ಸೋ, ಹಗರಣ, ಭ್ರಷ್ಟಾಚಾರ, ಕುಮಾರಸ್ವಾಮಿ ಅವರ ಡಿ-ನೋಟಿಫೀಕೇಷನ್ ಪ್ರಕರಣ ಯಾಕೆ ಪ್ರಸ್ತಾಪ ಮಾಡಲ್ಲ ಎಂದು ಪ್ರಶ್ನಿಸಿದ ಸಚಿವರು, ಸಿದ್ದರಾಮಯ್ಯ ಎಂದಿಗೂ ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ, ಮಾಡಿಕೊಳ್ಳೋದು ಇಲ್ಲ ಎಂದು ಸ್ಪಷ್ಟಪಡಿಸಿದರು.
ಕುಮಾರಸ್ವಾಮಿ ಅವಕಾಶವಾದಿ, ಸಿಂಗಪೂರ್‌ಗೆ ಹೋದ್ರು, ಕಾಂಗ್ರೆಸ್, ಬಿಜೆಪಿಯವರು ತನ್ನ ಬರಲಿ ಎಂದು, ಆದರೆ ಕೊನೆಗೆ ಗತಿಯಿಲ್ಲದೇ ಮೋದಿ ಕಾಲ ಹತ್ರ ಹೋದ್ರು, ಕೆಳಗೆ ಬಿದ್ರು ಮೀಸೆ ಮಣ್ಣಾಗಲಿಲ್ಲ ಎಂಬ0ತೆ ಕುಮಾರಸ್ವಾಮಿ ವರ್ತಿಸುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.