ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ನಂಜನಗೂಡಿಗೆ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಭೇಟಿ

1 min read

ನಂಜನಗೂಡಿಗೆ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಭೇಟಿ
ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಎಚ್ಚರಿಕೆ ನೀಡಿದ ಅಧ್ಯಕ್ಷರು
ನಂಜನಗೂಡಿಗೆ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಶಾಮ್‌ಭಟ್

ಅಂಗೈಯಲ್ಲಿ ಪ್ರಪಂಚ ಎನ್ನುವ ಕಂಪ್ಯೂಟರ್ ಯುಗದ ಕಾಲಘಟ್ಟದಲ್ಲಿ ಬಹಿಷ್ಕಾರದ ಪಿಡುಗು ಜೀವಂತವಾಗಿರುವುದು ಆಧುನಿಕ ಯುಗವನ್ನು ನಾಚಿಸುವ ಪ್ರಕರಣಕ್ಕೆ ಬ್ರೇಕ್ ಹಾಕಲು ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ  ಶ್ಯಾಮ್ ಭಟ್, ಸದಸ್ಯರಾದ ವಂಟಿಗೋಡಿ ಜೊತೆ ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ತಹಸಿಲ್ದಾರ್ ಶಿವಕುಮಾರ್ ಕಾಸ್ನೂರ್ ಉಪಸ್ಥಿತಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆೆ ನಡೆಸಿದರು.

ಕೆಲ ದಿನಗಳ ಹಿಂದೆ ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದ ರತ್ನಮ್ಮ ಮತ್ತು ಶ್ರೀಕಂಠಯ್ಯ ಎಂಬ ದಂಪತಿ ಗ್ರಾಮದಲ್ಲಿ ನಮಗೆ ಸಾಮಾಜಿಕ ಬಹಿಷ್ಕಾರ ಹಾಕಿ ಕಿರುಕುಳನೀಡುತ್ತಿದ್ದಾರೆ ಎಂದು ಬೆಂಗಳೂರಿನ ರಾಜ್ಯ ಮಾನವ ಹಕ್ಕು ಆಯೋಗದ ಕಚೇರಿಗೆ ತೆರಳಿ ದೂರು ಸಲ್ಲಿಸಿದರು. ಕಂದೇಗಾಲ ಗ್ರಾಮಸ್ಥರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುವ ಜೊತೆಗೆ ದುಬಾರಿ ದಂಡ ವಿಧಿಸಲು ಮುಂದಾಗಿದ್ದಾರೆ ಎಂದು ದೂರು ಪ್ರತಿಯಲ್ಲಿ ಗಂಭೀರವಾಗಿ ಆರೋಪಿಸಿದರು.

ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡು ಕುಲಂಕುಶವಾಗಿ ಪರಿಶೀಲಿಸಲು ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಹಾಗೂ ಆಯೋಗದ ಸದಸ್ಯರು ತಹಸಿಲ್ದಾರ್ ಶಿವಕುಮಾರ್ ಕಾಸ್ನೂರು ಡಿವೈಎಸ್‌ಪಿ ರಘು, ಇಒ ಜೆರಾಲ್ಡ್ ರಾಜೇಶ್ ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಕಂದೇಗಾಲ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರು ಮತ್ತು ದೂರುದಾರರ ನಡುವೆ ನಡೆದಿರುವ ಪ್ರಕರಣದ ಸ್ಪಷ್ಟ ಮಾಹಿತಿ ಕೇಳಿ ತಿಳಿದುಕೊಂಡರು.

ಕAದೇಗಾಲ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ ಹಾಗೂ ಗ್ರಾಮದ ಯಜಮಾನ ದಿವಾಕರ್ ಎಂಬುವರನ್ನು ಸಭೆಯಲ್ಲಿ ಘಟನೆಯ ಬಗ್ಗೆ ಅಧ್ಯಕ್ಷರು ಕೇಳಿದರು. ಕಂದೇಗಾಲ ಗ್ರಾಮದ ಇತಿಹಾಸದಲ್ಲೆ  ಬಹಿಷ್ಕಾರ ಎಂಬ ಸಾಮಾಜಿಕ ಪಿಡುಗು ಸೃಷ್ಟಿಯಾಗಿಲ್ಲ. ಅತಿ ಹೆಚ್ಚು ವಿದ್ಯಾವಂತರು ಮತ್ತು ಬುದ್ಧಿಜೀವಿಗಳು ವಾಸಿಸುವ ತಾಣವಾಗಿದೆ, ಯಾವುದೇ ವರ್ಗದಲ್ಲಿಯೂ ಬಹಿಷ್ಕಾರದ ವಿಚಾರ ಬಂದಿಲ್ಲ ವೈಯಕ್ತಿಕ ವಿಚಾರಗಳನ್ನು ತೆಗೆದುಕೊಂಡು ರತ್ನಮ್ಮ ಮತ್ತು ಶ್ರೀಕಂಠಯ್ಯ ಎಂಬುವರು 1994-95ನೇ ಸಾಲಿನಲ್ಲಿ ಅಂಗನವಾಡಿ ಕೇಂದ್ರದ ವಿಚಾರವಾಗಿ ಸಣ್ಣ ಗಲಾಟೆ ನಡೆದು, ಈಗ ಆ ಪ್ರಕರಣವೆ ನ್ಯಾಯಾಲಯದಿಂದ ವಜಾಗೊಂಡಿದೆ. ಕಂದೇಗಾಲ ಗ್ರಾಮದಲ್ಲಿ ಅಶಾಂತಿ ಸೃಷ್ಟಿಸಲು ಇಲ್ಲಸಲ್ಲದ ಆರೋಪಗಳನ್ನು ಹೇಳಿ ಕಚೇರಿಯಿಂದ ಕಚೇರಿಗಳಿಗೆ ತೆರಳಿ ಇಂತಹ ಅಂತೆ ಕಂತೆ ಪ್ರಕರಣಗಳಿಗೆ ದಾರಿ ಮಾಡಿಕೊಟ್ಟಿದ್ದಾರೆ ಎಂದು ವಿವರಿಸಿದರು.

ಈವರೆಗೂ ಗ್ರಾಮದಲ್ಲಿ ಯಾವುದೇ ಬಹಿಷ್ಕಾರದ ವಿಚಾರಗಳು ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು. ಗ್ರಾಮದಲ್ಲಿ ಸಾಕಷ್ಟು ವರ್ಷಗಳಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ದೂರುದಾರರು ಸಮರ್ಥನೆ ಮಾಡಿಕೊಳ್ಳುತ್ತಿದ್ದರು. ಗ್ರಾಮಸ್ಥರು ಮತ್ತು ದೂರುದಾರರ ಮಾಹಿತಿ ಆಲಿಸಿದ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಶ್ಯಾಮ್  ಭಟ್ ಹಾಗೂ ಸದಸ್ಯರು ನಂಜನಗೂಡಿನ ತಾಶಿಲ್ದಾರ್ ಶಿವಕುಮಾರ್ ಕಾಸ್ನೂರು ಮತ್ತು ಸಂಬ0ಧಪಟ್ಟ ಹುಲ್ಲಹಳ್ಳಿಯ ಪೊಲೀಸ್ ಠಾಣೆ ಪೊಲೀಸರ ಬಳಿ ಮಾಹಿತಿ ತಿಳಿದುಕೊಂಡು ಮುಂದಿನ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಹೇಳಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ  ಭವ್ಯ ಬಳಿ ಅಂಗನವಾಡಿ ಕೇಂದ್ರಗಳ ವಿಚಾರಗಳ ಬಗ್ಗೆ ಕೆಲ ಮಾಹಿತಿಯನ್ನು ಪಡೆದರು. ನಂತರ ಕಂದೇಗಾಲ ಗ್ರಾಮದಿಂದ ನಂಜನಗೂಡು ನಗರದ ಪ್ರವಾಸಿ ಮಂದಿರದ ಸಭೆಗೆ ಕಾಲ್ಕಿತರು.

ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ  ಸಭೆ ನಡೆಸಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ದಂಡ ವಿಧಿಸುವ ಮತ್ತು ಬಹಿಷ್ಕಾರ ಹಾಕುವ ಪ್ರಕರಣಗಳು ನಡೆಯಬಾರದು, ಕೂಡಲೇ ಅಧಿಕಾರಿಗಳು ಅಂತಹ ವಿಚಾರವನ್ನು ಕೇಳಿದ ಸಮಯದಲ್ಲಿ ಆಯ ಪ್ರದೇಶಕ್ಕೆ ಭೇಟಿ ನೀಡಿ ಕುಲಂಕುಶವಾದ ವರದಿ ತಯಾರಿಸಿ ಸಲ್ಲಿಸಬೇಕು ಮತ್ತು ಕ್ರಮಕ್ಕೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ರು ತಿಳಿಸಿದರು. ನಂತರ ಕಂದೇಗಲ ಗ್ರಾಮಕ್ಕೆ  ಭೇಟಿ ನೀಡಿ ಪ್ರವಾಸಿ ಮಂದಿರದಲ್ಲಿ sಸಭೆ ಮುಗಿಸಿದ ಬಳಿಕ ನಂಜುಡೇಶ್ವರನ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ದರ್ಶನ ಮಾಡುವ ಮೂಲಕ ನಂಜುಡೇಶ್ವರನ ಬಳಿ ತೆರಳಿ ಪ್ರಾರ್ಥನೆ ಸಲ್ಲಿಸಿ ಪುನೀತರಾದರು. ನಂಜನಗೂಡಿನ ತಹಸೀಲ್ದಾರ್‌ಶಿವಕುಮಾರ್ ಕಾಸ್ನೂರು, ಇಒ ಜೆರಾಲ್ಡ್ ರಾಜೇಶ್, ಡಿವೈಎಸ್ಪಿ ರಘು, ಸಿಡಿಪಿಓ ಭವ್ಯಶ್ರೀ, ಸಮಾಜ ಕಲ್ಯಾಣಇಲಾಖೆ ಅಧಿಕಾರಿ ಭೀಮ ರಾವ್ ವಡ್ಡರ್, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಈಶ್ವರ್, ಹುಲ್ಲಹಳ್ಳಿ ಪಿಎಸ್‌ಐ ಚೇತನ್ ಕುಮಾರ್ ಇದ್ದರು.

 

About The Author

Leave a Reply

Your email address will not be published. Required fields are marked *