ರಸಗೊಬ್ಬರ ಹೆಚ್ಚಿನ ದಾಸ್ತಾನಿಗೆ ಪ್ರಯತ್ನದ ಭರವಸೆ
1 min read
1.29 ಲಕ್ಷ ಲಾಭಾಂಶದಲ್ಲಿ ಗುಡಿಬಂಡೆ ಟಿಎಪಿಸಿಎಂಎಸ್
ರಸಗೊಬ್ಬರ ಹೆಚ್ಚಿನ ದಾಸ್ತಾನಿಗೆ ಪ್ರಯತ್ನದ ಭರವಸೆ
ಷೇರುದಾರರು ನೂತನ ನಿಯಮ ಪಾಲಿಸಲು ಮನವಿ
ಗುಡಿಬಂಡೆ ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ 2023-24ನೇ ಸಾಲಿನಲ್ಲಿ 1.29 ಲಕ್ಷ ಲಾಭ ಪಡೆದಿದ್ದು, ಇನ್ನಷ್ಟು ಲಾಭಾಂಶಗಳಿಸುವತ್ತ ಸಂಘವನ್ನು ಕೊಂಡೊಯ್ದು, ರೈತರಿಗೆ ಸಹಕಾರಿಯಾಗುವ ರೀತಿಯಲ್ಲಿ ಸಂಘ ಬೆಳಿಯಲಿದೆ ಎಂದು ಕಾರ್ಯದರ್ಶಿ ಅಶ್ವತ್ಥಪ್ಪ ಹೇಳಿದರು.
ಗುಡಿಬಂಡೆ ಪಟ್ಟಣದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಇಂದು ನಡೆದ 2023-24ನೇ ಸಾಲಿನ ವಾರ್ಷಿಕ ಮಹಾಸಭೆೆಯಲ್ಲಿ ಆಡಿಟ್ ವರದಿ ಮಂಡಿಸಿದ ಸಂಘದ ಕಾರ್ಯದರ್ಶಿ ಕಾರ್ಯದರ್ಶಿ ಅಶ್ವತ್ಥಪ್ಪ, ಸಂಘ ಕಳೆದ ಸಾಲಿನಲ್ಲಿ 1.29 ಲಕ್ಷ ಅದಾಯ ಗಳಿಸಿದ್ದು, ರೈತರ ಕೋರಿಕೆಯಂತೆ ಮತ್ತಷ್ಟು ರಸಗೊಬ್ಬರ ದಾಸ್ತಾನು ತರಿಸಿ, ನಿಗಧಿತ ಧರದಲ್ಲಿ ಮಾರಾಟಮಾಡಲು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
ಅಧ್ಯಕ್ಷ ಎಂ.ವಿ.ಶಿವಣ್ಣ ಮಾತನಾಡಿ, ಸುಮಾರು ವರ್ಷಗಳಿಂದ ಸಹಕಾರ ಸಂಘದಿ0ದ ರೈತರಿಗೆ ನಿಗಧಿತ ಧರದಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದು, ಇನ್ನೂ ಹೆಚ್ಚಿನ ಬೇಡಿಕೆ ರೈತರಿಂದ ಬರುತ್ತಿದೆ. ಸಂಘದಲ್ಲಿ ಇನ್ನು ಹೆಚ್ಚಿನ ದಾಸ್ತಾನು ತರಿಸಿ ಮಾರಾಟ ಮಾಡಿ ಎಂದು ಒತ್ತಾಯ ಇರುವುದರಿಂದ ಹೆಚ್ಚಿನ ದಾಸ್ತಾನು ನೀಡಲು ಬೇಡಿಕೆ ನೀಡಿ, ರೈತರಿಗೆ ಅನುಕೂಲ ಮಾಡಿಕೊಡಲಿದ್ದೇವೆ ಎಂದರು.
ಖಾಸಗಿಯವರ ಬಳಿ ಹೆಚ್ಚಿನ ಮೊತ್ತ ನೀಡಿ ರಸಗೊಬ್ಬರ ಖರೀದಿ ಮಾಡುವ ಬದಲು ಸಂಘದಲ್ಲಿ ಕಡಿಮೆ ಬೆಲೆಗೆ ಖರೀದಿ ಮಾಡಿ, ಸಂಘದ ಅಭಿವೃದ್ಧಿಗೆ ಸಹಕಾರ ನೀಡಿ, ಯಾರು ಷೇರು ಮೊತ್ತವನ್ನು ಕಡಿಮೆ ಪಾವತಿ ಮಾಡಿದ್ದಾರೆ, ಅಂತಹ ಷೇರುದಾರರು ಈಗಿನ ನಿಯಮದಂತೆ ಉಳಿದ ಮೊತ್ತವನ್ನು ಪಾವತಿ ಮಾಡಿ, ಹೊಸದಾಗಿ ಸಂಘದಲ್ಲಿ ಷೇರುಖಾತೆಗಳನ್ನು ತೆರೆಯುವಂತೆ ಸಹಕರಿಸಿ ಎಂದರು. ಈ ಸಂಧÀರ್ಬದಲ್ಲಿ ಉಪಾಧ್ಯಕ್ಷ ವೆಂಕಟೇಶಪ್ಪ, ನಿರ್ದೇಶಕರಾದ ಕೆ.ಜೆ.ಆನಂದರೆಡ್ಡಿ, ಪಿ.ಎನ್.ವೇಣುಗೋಪಾಲ್, ಗಂಗಿರೆಡ್ಡಿ, ಹೆಚ್.ವೆಂಕಟೇಶಪ್ಪ, ಎಂ.ಚನ್ನಕೇಶವರೆಡ್ಡಿ, ವೆಂಕಟಲಕ್ಷಮ್ಮ ಇದ್ದರು.