ಬೀದರ್ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಬೆಳೆ ನಾಶ
1 min readಬೀದರ್ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಬೆಳೆ ನಾಶ
ಜಮೀನು ಮಾಲೀಕರ ಬದಲಿಗೆ ಕವಲು ಪಡೆದ ರೈತರಿಗಿಲ್ಲ ಸಹಾಯ
ಜಿಲ್ಲಾ ಉಸ್ತುವಾರಿ ಸಚಿವರು ಈ ಕುರಿತು ಗಮನ ಹರಿಸಲು ಮನವಿ
ಬೀದರ್ ಜಿಲ್ಲೆಯಲ್ಲಿ ಮುಂಗಾರು ಬೆಳೆಗಳಾದ ಉದ್ದು, ಹೆಸರು ನೀರುಪಾಲಾಗಿದ್ದರೂ ಸೋಯಾ, ತೊಗರಿ ಬೆಳೆಯ ಆಸರೆಯಾಗುವ ನಿರೀಕ್ಷೆಯಲ್ಲಿದ್ದ ರೈತರಿಗೆ ಇದೀಗ ತೊಗರಿಯೂ ಅಘಾತ ತಂದಿದೆ. ಇದಕ್ಕೆ ಕಾರಣ ಉತ್ತರೆ ಮಳೆ ಪ್ರಭಾವವಾಗಿದ್ದು, ಕೃಷಿಯನ್ನೇ ನಂಬಿದ್ದ ರೈತರು ತೀವ್ರ ಸಮಸ್ಯೆಗೆ ಗುರಿಯಾಗುವಂತಾಗಿದೆ.
ಮುAಗಾರು ಬೆಳೆಗಳಾದ ಉದ್ದು, ಹೆಸರು ಕೊಯ್ಲಿಗೆ ಬಂದ ಸಮಯದಲ್ಲಿ ಬೀದರ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉದ್ದು, ಹೆಸರು ಬೆಳೆಗಳನ್ನು ಕಳೆದು ಕೊಂಡ ರೈತರಿಗೆ, ಕಳೆದ ನಾಲ್ಕೆದು ದಿನಗಳಿಂದ ಸುರಿಯುತಿರುವ ಮಳೆಯಿಂದ ಬೆಳೆದು ಕೊಯ್ಲಿಗೆ ಬಂದ ಸೋಯಾ ನೀರು ಪಾಲಾಗುವ ಜೊತೆಗೆ ಮುಂಬರುವ ತೊಗರಿ ಬೆಳೆ ಕೂಡ ಒಣಗುತ್ತಿರುವುದನ್ನು ಕಂಡು ರೈತ ಕಂಗಾಲಾಗಿದ್ದಾನೆ.
ಜಿಲ್ಲೆಯಲ್ಲಿ ಬಹುತೇಕ ಕೃಷಿಯಲ್ಲಿ ತೊಡಗಿರುವ ಸಣ್ಣ ಮತ್ತು ಅತಿ ಸಣ್ಣ ರೈತರೇ ಇಧ್ದು ಇವರು ತಮ್ಮ ಜಮೀನಿನ ಜೊತೆಗೆ ಇತರೆ ಭೂಮಿಯನ್ನು ಮೌಖಿಕ ಒಪ್ಪಂದ ಮೇಲೆ ವರ್ಷಕ್ಕೆ ಇಂತಿಷ್ಟು ಹಣ ನಿಗದಿ ಮಾಡಿ, ಅವರ ಭೂಮಿಯನ್ನು ಸಾಗುವಳಿ ಮಾಡುತ್ತಾರೆ. ಇದರಿಂದ ಬೆಳೆ ಸರ್ಕಾರ ನೀಡುವ ಯಾವುದೇ ಪರಿಹಾರ ಅಥವಾ ಬೆಳ ವಿಮೆ ಇಂತಹ ರೈತರಿಗೆ ಸಿಗಲ್ಲ. ಒಂದು ವೇಳೆ ಸಿಕ್ಕರೂ ಜಮೀನು ಮಾಲೀಕರಿಗೆ ಸಿಗುತ್ತೆ ಹೊರತು ಕವಲಿಗೆ ಮಾಡಿದ ರೈತರಿಗೆ ಯಾವುದೇ ಉಪಯೋಗವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಆದರೆ ಜಮೀನು ಮಾಲೀಕರಿಗೆ ಒಪ್ಪಂದ ಮಾಡಿಕೊಂಡ ಹಣವೂ ಸಿಗಲಿದೆ, ಸರ್ಕಾರದ ಪರಿಹಾರ ಮತ್ತು ಬೆಳೆ ವಿಮೆಯೂ ಸಿಗಲಿದೆ. ರೈತನಿಗೆ ಮಾತ್ರ ಬೆಳೆ ಕಳೆದುಕೊಂಡು ನಷ್ಟ ಅನುಭವಿಸಿದ್ದು ಬಿಟ್ಟರೆ ಮತ್ತೇನೂ ಇಲ್ಲ ಎಂಬ ಸ್ಥಿತಿ ಇದೆ. ಬೆಳೆ ಸಾಗುವಳಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ ರೈತನಿಗೆ ಬೆಳೆ ನಷ್ಟವಾದರೆ ಆತ್ಮ ಹತ್ಯೆಯೊಂದೇ ಮಾರ್ಗ. ಜಿಲ್ಲೆಯಲ್ಲಿ ಈವರಗೆ ನಡೆದ ರೈತ ಆತ್ಮ ಹತ್ಯೆ ಗಳಲ್ಲಿ ಶೇಕಡಾವಾರು ಸಣ್ಣ ಮತ್ತು ಅತಿ ಸಣ್ಣ ರೈತರೆ ಆಗಿದ್ದಾರೆ ಎಂಬುದು ವಿಶೇಷ.
ಜಿಲ್ಲಾ ಉಸ್ತುವಾರಿ ಸಚಿವರು ಈಗಲಾದರು ಎಚ್ಚೆತ್ತು, ಕೃಷಿ ಅಧಿಕಾರಿಗಳ ಮೂಲಕ ಇಂತಹ ಭೂ ಮಾಲಿಕನೊಂದಿಗೆ ಮೌಖಿಕ ಒಂಪದದ ಮೇಲೆ ಸಾಗುವಳಿ ಮಾಡುತ್ತಿರುವ ಜಿಲ್ಲೆಯ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಗುರುತಿಸಿ, ಜಿಲ್ಲೆಯಲ್ಲಿ ಸುರಿದ ಮಳೆಗೆ ಬೆಳೆಹಾನಿ ಯಿಂದ ಕಂಗಾಲಾಗಿ ಆತ್ಮ ಹತ್ಯೆ ಮಾಡಿ ಕೊಳ್ಳವ ಮೊದಲೇ ಸೂಕ್ತ ಪರಿಹಾರ ಒದಗಿಸಬೇಕು, ಇಲ್ಲವಾದರೆ ರೈತರು ಸಂಕಷ್ಟಕ್ಕೆ ಸಿಲುಕುವುದರಲ್ಲಿ ಸಂದೇಹವಿಲ್ಲ.