ಹಳ್ಳಿಗಳಿಗೆ ಅಧಿಕಾರಿಗಳನ್ನ ಕರೆದುಕೊಂಡು ಹೋದ ಪ್ರದೀಪ್ ಈಶ್ವರ್
1 min readಪ್ರದೀಪ್ ಈಶ್ವರ್ ರಿಂದ ನಿಮ್ಮ ಊರಿಗೆ ನಿಮ್ಮ ಶಾಸಕ ಕಾರ್ಯಕ್ರಮ.
ಬಸ್ ಮೂಲಕವೇ ಅಧಿಕಾರಿಗಳ ಜೊತೆಯಲ್ಲಿ ಹಳ್ಳಿ ಹಳ್ಳಿಗೆ ಭೇಟಿ
ಹಳ್ಳಿಗಳಿಗೆ ಅಧಿಕಾರಿಗಳನ್ನ ಕರೆದುಕೊಂಡು ಹೋದ ಪ್ರದೀಪ್ ಈಶ್ವರ್.
ಕಾರು ಬೇಡ ಹಾರ ತುರಾಯಿ ಬೇಡ ಆಡಂಬರ ಬೇಡವೇ ಬೇಡ..!
ಹಳ್ಳಿಯ ಅರಳಿಕಟ್ಟೆ ರಸ್ತೆ ಮಧ್ಯೆದಲ್ಲೇ ಕೂತು ಜನರ ಸಮಸ್ಯೆ ಆಲನೆ..!
ಶಾಸಕರಾದ ನಂತರ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಮೂಲಕ ಮನೆ ಮಾತಾಗಿದ್ದ ಶಾಸಕ ಪ್ರದೀಪ್ ಈಶ್ವರ್, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಈಗ ತಾಲೂಕು ಆಡಳಿತವನ್ನೇ… ಮತದಾರರ ಮನೆ ಬಾಗಿಲಿಗೆ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ. ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಮೇತ ಒಂದೆ ಬಸ್ ನಲ್ಲಿ ಹಳ್ಳಿ -ಹಳ್ಳಿ ಗಲ್ಲಿ- ಗಲ್ಲಿಗಳಿಗೆ ತೆರಳಿ ಸಾರ್ವಜನಿಕರ ಕುಂದು ಕೊರತೆ ನಿವಾರಿಸುವ ಕೆಲಸ ಮಾಡಿದ್ದು…ಶಾಸಕರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಈ ಕುರಿತು ಒಂದು ವರದಿ ಇಲ್ಲಿದೆ..
ಹೀಗೆ… ಅರಳಿಕಟ್ಟೆ, ಹಳ್ಳಿಯ ನಡು ರಸ್ತೆ ಮಧ್ಯೆಯೇ ಛಾಪೆ ಕೆಳಗೆ ಕುಳಿತು ಅಧಿಕಾರಿಗಳ ಸಮೇತ ಸಾರ್ವಜನಿಕರ ಕುಂದು ಕೊರತೆ ಆಲಿಸುತ್ತಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್… ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳನ್ನ ಬಸ್ ಮೂಲಕ ಕರೆದುಕೊಂಡು ಸೀದಾ ಹಳ್ಳಿಗೆ ಹೋಗಿ ಜನರ ಸಮಸ್ಯೆ ಆಲಿಸುತ್ತಿರುವ ಶಾಸಕ ಪ್ರದೀಪ್ ಈಶ್ವರ್ ಕ್ಷೇತ್ರ ದ ಜನರ ಸಮಸ್ಯೆ ಆಲಿಸಲು ನಿಮ್ಮ ಊರಿಗೆ ನಿಮ್ಮ ಶಸಕ ಅನ್ನೋ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕಳೆದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಲಾಟರಿ ಹೊಡೆದಂತೆ ನಿರೀಕ್ಷೆಗೂ ಮೀರಿ ಬಹುಮತಗಳಿಂದ ಗೆದ್ದಿರುವ ಪ್ರದೀಪ್ ಈಶ್ವರ್… ಒಂದಿಲ್ಲೊAದು ರೀತಿಯಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಮುಂದಾಗಿದ್ದಾರೆ. ತಾಲೂಕು ಯಂತ್ರಾಗದ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಕರೆದುಕೊಂಡು ಒಂದೆ ಬಸ್ ನಲ್ಲಿ ಮತದಾರರ ಮನೆ ತಲುಪುವ ಕೆಲಸ ಮಾಡ್ತಿದ್ದಾರೆ. ಪ್ರಥಮ ದಿನವಾದ ಇಂದು ಚಿಕ್ಕಬಳಾಪುರ ತಾಲೂಕು ಕಚೇರಿಯಿಂದ ಬಸ್ ವೊಂದರಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆದುಕೊಂಡು ತಮ್ಮ ಕ್ಷೇತ್ರದ ಮುದ್ದೇನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರ್ಲಹಳ್ಳಿ, ಸುಬ್ಬರಾಯನಹಳ್ಳಿ, ಕಂಗಾನಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ತೆರಳಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದ್ರು.
ಇನ್ನೂ ತಮ್ಮೂರಿಗೆ ಬಂದ ಶಾಸಕರು ಹಾಗೂ ಅವರ ಬಸ್ ನ್ನು ಸ್ವಾಗತಿಸಿದ ಸ್ಥಳಿಯರು, ತಮ್ಮೂರಿನ ಸಮಸ್ಯೆಗಳು, ವೈಯಕ್ತಿಕ ಸಮಸ್ಯೆಗಳು, ಜಮೀನು ಮಂಜೂರು, ರಸ್ತೆ, ಕುಡಿಯುವ ನೀರು, ಬಸ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಮಾಡಿದ್ರು. ಮುದ್ದೇನºಳ್ಳಿ ಗ್ರಾಮ ಪಂಚಾಯತಿಯ ಗಂಟಿಗಾನಹಳ್ಳಿ ಸುಬ್ಬರಾಯನಹಳ್ಳಿ ಕಂಗಾನಹಳ್ಳಿ, ಕೊರ್ಲಹಳ್ಳಿ, ಗೌಚೇನಹಳ್ಳಿ, ಸಿ ಎನ್ ಹೊಸೂರು, ಕಂಗಾನಹಳ್ಳಿ, ಚಗಟೇನಹಳ್ಳಿ, ಸೇರಿ ಗ್ರಾ ಮ ಪಂಚಾಯತಿ ವ್ಯಾಪ್ತಿಯ 17 ಹಳ್ಳಿಗಳಿಗೂ ಭೇಟಿ ಮಾಡುತ್ತಿದ್ದಾರೆ. ಈ ವೇಳೆ ಗಂಟಿಗಾನಹಳ್ಳಿ- ಸುಬ್ಬರಾಯನಹಳ್ಳಿಗೆ ಸೂಕ್ತ ರಸ್ತೆ ಇಲ್ಲದಿರುವುದನ್ನು ಕಣ್ಣಾರೆ ಕಂಡ ಶಾಸಕರು ಸ್ವಾತಂತ್ರ‍್ಯ ಬಂದು ಇಷ್ಟು ವರ್ಷವಾದರೂ ಈ ಗ್ರಾಮಗಳಿಗೆ ರಸ್ತೆಯೇ ಇಲ್ಲದೆ ಇರುವುದು ಬೇಸರ ತಂದಿದ್ದು…. ತಮ್ಮ ಶಕ್ತಿ ಮೀರಿ ರಸ್ತೆ ಮಾಡಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದ್ರು.
ಕಚೇರಿಗೆ ಬರುವ ಸಾರ್ವಜನಿಕರ ಜೊತೆ ಅಧಿಕಾರಿಗಳು ಮಾತನಾಡುವುದೆ ಕಷ್ಟ, ಇಂಥದರಲ್ಲಿ ಶಾಸಕರು ಅಧಿಕಾರಿಗಳ ಕಿವಿ ಹಿಂಡಿ, ಮತದಾರರ ಮನೆ ಬಾಗಿಲಿಗೆ ಕರೆದುಕೊಂಡು ಹೋಗುವುದರ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಂದು ಮುದ್ದೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ೧೭ ಹಳ್ಳಿಗಳಿಗೂ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಹಂತ ಹಂತವಾಗಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಇದೇ ರೀತಿ ಬಸ್ ಮೂಲಕವೇ ತೆರಳಿ ಜನರ ಸಮಸ್ಯೆ ಅಲಿಸುವುದಾಗಿ