ಬಾಡಿಗೆ ನೀಡದ ಅಂಗಡಿ ಮಳಿಗೆಗಳಿಗೆ ಬೀಗ ಜಡಿದ ಸದಸ್ಯರು
1 min readಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ
ಬಾಡಿಗೆ ನೀಡದ ಅಂಗಡಿ ಮಳಿಗೆಗಳಿಗೆ ಬೀಗ ಜಡಿದ ಸದಸ್ಯರು
ಇಂದು ನಂಜನಗೂಡಿನಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆೆಯಲ್ಲಿ ಸಹಕಾರ ಸಂಘದ ಆಡಳಿತ ಮಂಡಳಿಯ ವಿರುದ್ಧ ರೊಚ್ಚಿಗೆದ್ದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ನಂಜನಗೂಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಇಂದು ನಡೆಯುತ್ತಿರುವಾಗಲೇ ಸಭೆಯನ್ನು ಸ್ಥಗಿತಗೊಳಿಸಿ, ಬಾಡಿಗೆ ಹಣ ಪಾವತಿಸದ ಅಂಗಡಿ ಮಳಿಗೆಗಳಿಗೆ ಬೀಗ ಜಡಿದು, ನಂತರ ಸಭೆ ನಡೆಸುವಂತೆ ಸದಸ್ಯರು ಆಗ್ರಹ ಪಡಿಸಿದರು. ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಘಟನೆ ನಡೆದಿದ್ದು, ಕಳೆದ ೮ ವರ್ಷಗಳಿಂದ ಎಂಟು ಅಂಗಡಿ ಮಳಿಗೆಗಳನ್ನು ಸಹಕಾರಿ ಸಂಘದ ನಿಯಮದಂತೆ ಬಾಡಿಗೆ ನೀಡಲಾಗಿದೆ.
ಕಳೆದ ಆರೇಳು ವರ್ಷಗಳಿಂದ ಬರೋಬರಿ 25 ಲಕ್ಷ ಅಂಗಡಿ ಮಳಿಗೆಯ ಬಾಡಿಗೆದಾರರು ಪಾವತಿಸಬೇಕಿದ್ದು, ಅಂಗಡಿ ಮಳಿಗೆಗಳಿಂದ ಬಾಡಿಗೆ ಹಣ ಪಾವತಿಸದ ಕಾರಣ ಪ್ರಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಷ್ಟದಲ್ಲಿದೆ ಎಂದು ಸದಸ್ಯರು ಆರೋಪಿಸಿದರು. ಬಾಡಿಗೆ ಹಣ ಪಾವತಿಸದ ಸಹಕಾರಿ ಸಂಘದ ಅಂಗಡಿ ಮಳಿಗೆಗಳಿಗೆ ಸದಸ್ಯರೇ ಬೀಗ ಜಡಿದರು. ಸಹಕಾರಿ ಸಂಘಕ್ಕೆ ಮಳಿಗೆ ದಾರ ಮಾಲೀಕರು ಬಾಡಿಗೆ ಹಣ ಪಾವತಿಸುವ ತನಕ ಬೀಗ ತೆಗೆಯುವುದು ಬೇಡ ಎಂದು ತೀರ್ಮಾನ ಮಾಡಲಾಯಿತು.
ವ್ಯಾಪಾರ ವಹಿವಾಟು ನಡೆದರು ಸಹಕಾರಿ ಸಂಘದ ನಿಯಮದಂತೆ ಬಾಡಿಗೆ ಹಣ ಪಾವತಿಸದ ಅಂಗಡಿ ಮಳಿಗೆಗಳ ಮಾಲೀಕರಿಗೆ ಸಹಕಾರ ಸಂಘದ ಸದಸ್ಯರು ಶಾಕ್ ನೀಡಿದರು. ಅಂಗಡಿ ಮಳಿಗೆಗಳಿಗೆ ಬೀಗ ಜಡಿದ ನಂತರ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಹಕಾರಿ ಸಂಘದ ಅಧ್ಯಕ್ಷ ಎಚ್ ಟಿ ನಾಗೇಶ್ ನೇತೃತ್ವದಲ್ಲಿ ನಡೆಸಲಾಯಿತು. ಸಭೆಯಲ್ಲಿ ಹಾಜರಿದ್ದ ಸಹಕಾರ ಸಂಘದ ಸರ್ವ ಸದಸ್ಯರು ಸಾಕಷ್ಟು ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಸಹಕಾರ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ನಂಜುಡಸ್ವಾಮಿ ಆಡಳಿತ ಕಾರ್ಯವೈಖರಿಯನ್ನು ಸರಿಪಡಿಸಿಕೊಳ್ಳಲು ಸದಸ್ಯರು ಎಚ್ಚರಿಸಿದರು. ಮುಂಬರುವ ದಿನಗಳಲ್ಲಿ ರೈತರಿಗೆ ಬೇಕಾಗಿರುವ ಕೃಷಿ ಸಲಕರಣೆಗಳು ಮತ್ತು ಸಂಘದ ಅಭಿವೃದ್ಧಿಗೆ ಮುಂದಾಗುತ್ತೇವೆ ಎಂದು ಸಂಘದ ಅಧ್ಯಕ್ಷ ನಾಗೇಶ್ ಹೇಳಿದರು.