ಚೇಳೂರು ತಾಲೂಕಿನಲ್ಲಿ ಮತ್ತೆ ವಕ್ಕರಿಸಿದ ಬರ
1 min readಚೇಳೂರು ತಾಲೂಕಿನಲ್ಲಿ ಮತ್ತೆ ವಕ್ಕರಿಸಿದ ಬರ
ಒಣಗುತ್ತಿರುವ ಶೇಗಾ ಬೆಳೆ ರೈತ ಕಂಗಾಲು
ಆಕಾಶದತ್ತ ಮುಖ ಮಾಡಿರುವ ರೈತನಿಗೆ ವರುಣನ ಕೃಪೆ ಇಲ್ಲ
ವರುಣ ಮತ್ತೆ ಮುನಿಸಿಕೊಂಡಿದ್ದಾನೆ. ಪರಿಣಾಮ ಚೇಳೂರು ತಾಲೂಕಿನಾದ್ಯಂತ ಮಳೆಯಾಆಧಾರಿತವಾಗಿ ಬಿತ್ತನೆ ಮಾಡಿದ್ದ ಬೆಳೆಗಳು ಒಣಗುತ್ತಿದ್ದು, ರೈತರು ದಿಕ್ಕು ಕಾಣದೆ ಆಕಾಶದತ್ತ ಮುಖ ಮಾಡಿ, ವರುಣನಿಗಾಗಿ ಕಾಯುತ್ತಿದ್ದಾರೆ. ಮೊದಲೇ ಬರಪಡೀತ ಪ್ರದೇಶವಾಗಿದ್ದ ಚೇಳೂರಿನಲ್ಲಿ ಈ ಬಾರಿ ವರುಣ ಮಾಡಿದ ಅವಾಂತರಕ್ಕೆ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಚೇಳೂರು ತಾಲ್ಲೂಕಿನಲ್ಲಿ ಶೇಂಗಾ ಬೆಳೆ ಪ್ರಮುಖವಾಗಿದ್ದು, ಈ ಭಾಗದ ರೈತರು ಶೇಂಗಾ ಬೆಳೆಯನ್ನೆ ನಂಬಿ ಜೀವನ ನಡೆಸುತ್ತಿದ್ದಾರೆ. ಈ ವರ್ಷ ಮುಂಗಾರು ಮಳೆ ಅಲ್ಪ ಸ್ವಲ್ಪ ಬಿದ್ದಿದ್ದು, ರೈತರಲ್ಲಿ ಅಸಮಧಾನ ಮೂಡಿಸಿದೆ. ಬಿತ್ತನೆ ಬೀಜ ಹಾಕಬೇಕೊ ಬಿಡಬೇಕೊ ಎಂಬ ಗೊಂದಲದಲ್ಲಿ ರೈತ ಬಿತ್ತನೆ ಮಾಡಿದ್ದು, ಶೇಂಗಾ ಬೆಳೆ ಕೊನೆಗಳಿಗೆಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತಿದೆ.
ಮಳೆ ಮುನಿಸುಕೊಂಡಿದ್ದರಿ0ದ ಚೇಳೂರು ತಾಲ್ಲೂಕಿನ ಸುತ್ತಮುತ್ತಲಿನಲ್ಲಿ ಶೇಂಗಾ ಗಿಡಗಳು ಒಣಗಿ ಹೋಗಿವೆ. ಉತ್ತಮ ಮಳೆಯಾಗದೆ ಅಲ್ಪಸ್ವಲ್ಪ ಬಿದ್ದಿರುವ ಮಳೆಗೆ ರೈತರಿಗೆ ಅಸಮಧಾನ ತಂದಿದೆ. ಭೂಮಿ ತೇವಾಂಶ ಕಡಿಮೆ ಇದೆ ಪ್ರಸ್ಥುತ ವರ್ಷವಾದರೂ ಸಮಯಕ್ಕೆ ಮಳೆ ಬೀಳದೇ ಇದ್ದು ಮುಂಗಾರಿನಲ್ಲಿ ಮಳೆ ಬರುತ್ತೆ ಎಂದು ಮಳೆಯನ್ನ ನಂಬಿ ಬಿತ್ತನೆ ಮಾಡಿದ್ದ ಬೆಳೆ ಇದೀಗ ಬಿಸಿಲಿಗೆ ಸೊರಗುತ್ತಿದ್ದು, ರೈತ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕಾಗಿದೆ, ರಾಜ್ಯದಲ್ಲೆ ಹಿಂದುಳಿದ ತಾಲ್ಲೂಕು ಬಾಗೇಪಲ್ಲಿ ಎಂದು ನಂಜುಡಪ್ಪ ವರದಿ ಇದ್ದು, ಅದರಲ್ಲಿ ಅತೀ ಹಿಂದುಳಿದ ಹೊಸ ತಾಲ್ಲೂಕೆಂದು ಹೆಸರಿನ ಹಣೆಪಟ್ಟಿ ಚೇಳೂರು ತಾಲೂಕು ವಹಿಸುವಂತಾಗಿದೆ. ಅಲ್ಪ ಸ್ವಲ್ಪ ಮಳೆ ಬಿದ್ದರೂ ಭೂಮಿ ತಂಪಾಗದೆ ಭೂಮಿ ಬಾಯಿ ತೆರೆದುಕೊಂಡಿದೆ. ರೈತರು ಆಕಾಶದತ್ತ ಎದುರು ನೋಡುತ್ತಿದ್ದಾರೆ. ಮಳೆ ಬರದೆ ಬಿಸಿಲು ಹೊಡೆಯುತ್ತಿದೆ.
ಈ ಭಾಗದಲ್ಲಿ ಶಾಶ್ವತ ನೀರಾವರಿ ಯೋಜನೆಗಳಿಲ್ಲ, ನದಿ ನಾಲೆಗಳಿಲ್ಲ, ಕೈಗಾರಿಕಾ ಪ್ರದೇಶವಿಲ್ಲ, ಕೂಲಿ ಮಾಡಿದರೆ ಜೀವನ ಇಲ್ಲವಾದರೆ ಹೊಟ್ಟೆಗೆ ಹಿಟ್ಟಿರುವುದಿಲ್ಲ. ಸರ್ಕಾರ ನೀಡುವ ೩ ಕೆಜಿ ಅಕ್ಕಿ, ೨ ಕೆಜಿ ರಾಗಿ ತಿಂದು ಜೀವಿಸಬೇಕಾಗುತ್ತಿದೆ. ಜಿಲ್ಲಾಧಿಕಾರಿಗಳು
ಗ್ರಾಮಗಳಿಗೆ ಭೇಟಿ ನೀಡಿ ರೈತರ ಸ್ಥಿತಿಗತಿಗಳನ್ನ ಗಮನ ಹರಿಸದೆ ಇರುವುದರಿಂದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಗಡಿ ತಾಲ್ಲೂಕು ಹಾಗೂ ಕೊನೆ ತಾಲ್ಲೂಕು ಬಾಗೇಪಲ್ಲಿ ಆಗಿದ್ದು, ಈ ತಾಲ್ಲೂಕಿನಲ್ಲಿ ಬೇರ್ಪಡೆಯಾದ ಚೇಳೂರು ತಾಲ್ಲೂಕಿನಲ್ಲಿ 205 ಹಳ್ಳಿಗಳು ಸದಾ ಬರಗಾಲಕ್ಕೆ ಹೆಸರುವಾಸಿಯಾಗಿವೆ. ಉತ್ತಮ ಮಳೆಗಳಾಗದೆ ಅಲ್ಪ ಸ್ವಲ್ಪ ಮಳೆಗೆ ಬೆಳೆ ಒಣಗಿ ಹೋಗಿ ಬೆಳೆಗಳು ನಷ್ಠವಾಗಿವೆ.