ಕೊಲೆ ಮಾಡಿ ಸಂಪಿನಡಿ ಗುಂಡಿ ತೋಡಿ ಹೂತು ಹಾಕಿದ ಸ್ನೇಹಿತ
1 min readಕುಡಿದ ಅಮಲಿನಲ್ಲಿ ಸ್ನೇಹಿತರಿಬ್ಬರ ನಡುವೆ ಗಲಾಟೆ-ಕೊಲೆ
ಬಿಹಾರದಿಂದ ಕೆಲಸ ಮಾಡಲು ಬಂದವ ರಾಜ್ಯದಲ್ಲಿ ಹೆಣವಾದ..!
ಕೊಲೆ ಮಾಡಿ ಸಂಪಿನಡಿ ಗುಂಡಿ ತೋಡಿ ಹೂತು ಹಾಕಿದ ಸ್ನೇಹಿತ
ಅವರಿಬ್ರು ಒಂದೇ ಊರಿನವರು, ಎದುರು ಬದುರು ಮನೆಯವರು ಸಾಲದು ಅಂತ ಸಂಬ0ಧಿಕರು ಸಹ…ಇಬ್ರು ದುಡಿಯೋಣ ಅಂತ ಸಾವಿರಾರು ಕಿಲೋಮೀಟರ್ ದೂರದ ಬಿಹಾರದಿಂದ ಬಂದು ರಾಜ್ಯದಲ್ಲಿ ಬದುಕು ಕಟ್ಟಿಕೊಳ್ಳುವ ಕೆಲಸ ಮಾಡಿದ್ರು…ಈದ್ ಮಿಲಾದ್ ಹಬ್ಬಕ್ಕೆ ಅಂತ ಊರಿಗೆ ಒಬ್ಬ ವಾಪಾಸ್ ಹೋದ್ರೆ ಮತ್ತೊರ್ವ ಹೋಗಿರಲಿಲ್ಲ..ಅರೇ ಅವನೇಲ್ಲಿ ಅಂತ ಮನೆಯವರು ಪ್ರಶ್ನೆ ಮಾಡಿದಾಗ ಅದೊಂದು ಬೆಚ್ಚಿಬೀಳೋ ಘಟನೆ ಬಯಲಾಗಿದೆ..ಅರೇ ಅದೇನ್ ಆ ಘಟನೆ ಅಂದ್ರಾ ಈ ಸ್ಟೋರಿ ನೋಡಿ..
ಹೀಗೆ…ತನ್ನ ಜೊತೆಯಲ್ಲಿ ಬಿಹಾರದಿಂದ ಕೆಲಸ ಮಾಡಲು ಬಂದವನನ್ನೇ ಕೊಲೆ ಮಾಡಿ ಹೂತು ಹಾಕಿರುವ ಜಾಗ ತೋರಿಸುತ್ತಿರುವ ಆರೋಪಿ….ಜಾಗ ತೋರಿಸುತ್ತಿದ್ದಂತೆ ಜೆಸಿಬಿ ಮೂಲಕ ಗುಂಡಿ ತೋಡಿ ಮೃತದೇಹ ಹೊರತೆಗೆದ ಪೊಲೀಸರು…ಅಂದಹಾಗೆ ಈ ಘಟನೆ ನಡೆದಿದ್ದು ಚಿಕ್ಕಬಳ್ಳಾಪುರ ತಾಲೂಕಿನ ತೌಡನಹಳ್ಳಿ ಗ್ರಾಮದಲ್ಲಿ… ಇನ್ನೂ ತನ್ನ ಸ್ನೇಹಿತನ ಕೈಯಲ್ಲೆ ಕೊಲೆಯಾಗಿರೋದು ಬಿಹಾರ ಮೂಲದ ರೆಹಾನ್ ಅಂತ, ಇನ್ನೂ ಈತನನ್ನೇ ಹತ್ಯೆ ಮಾಡಿರೋದು ಸಾಜಿದ್ ಅಂತ…ಮೃತ ರೆಹಾನ್ ಹಾಗೂ ಸಾಜಿದ್ ಇಬ್ಬರು ಸಹ ಬಿಹಾರದ ಕುರಸೆಲ್ ಗ್ರಾಮದವರು….ಇಬ್ರು ಸಹ ಜೊತೆಯಲ್ಲೇ ಗಾರೆ ಕೆಲಸ ಮಾಡಲು ಅಂತ ರಾಜ್ಯಕ್ಕೆ ಬಂದಿದ್ದರು. ಬೆಂಗಳೂರಿನ ಕಂಟ್ರ‍್ಯಾಕ್ಟರ್ ಮಂಜುನಾಥ್ ಎಂಬುವವರು ಸಾಜಿದ್, ರೆಹಾನ್ ಹಾಗೂ ಅಲಂ ಮೂವರನ್ನ ಕೆಲಸಕ್ಕೆ ಕರೆದುಕೊಂಡು ಬಂದು….ತೌಡನಹಳ್ಳಿ ಗ್ರಾಮದ ಬಳಿ ಗಾಣದ ಎಣ್ಣೆ ಫ್ಯಾಕ್ಟರಿ ನಿರ್ಮಾಣ ಸಂಬ0ದ ಕಟ್ಟಡ ಕಾಮಗಾರಿ ಮಾಡಲು ಬಿಟ್ಟಿದ್ರು….ಆದ್ರೆ 20 ದಿನಗಳಿಂದ ಕೆಲಸ ಮಾಡುತ್ತಿದ್ದ ಮೂವರು ಈದ್ ಮಿಲಾದ್ ಹಬ್ಬದ ದಿನದಿಂದ ನಾಪತ್ತೆಯಾಗಿದ್ರು…ಹಬ್ಬ ಅಂತ ಊರಿಗೆ ಹೋಗಿರಬಹುದು ಅಂತ ಅಂದುಕೊ0ಡ ಕಂಟ್ರಾಕ್ಟರ್ ಹಾಗೂ ಜಾಗದ ಮಾಲೀಕರಿಗೆ ಪೊಲೀಸರ ಹೇಳಿದಾಗ ಅಸಲಿ ವಿಷಯ ಗೊತ್ತಾಗಿದೆ.
ಹೌದು…ಜ್ಞಾನೇಶ್ ಅವರು ೫ ಗುಂಟೆ ಜಾಗದಲ್ಲಿ ಕಂಟ್ರಾಕ್ಟರ್ ಮಂಜುನಾಥ್ ಅವರು ಕಟ್ಟಡ ಕಾಮಗಾರಿ ಆರಂಭಿಸಿದ್ರು. ಮೂವರು ಕೆಲಸಗಾರರು 20 ದಿನ ಕೆಲಸ ಮಾಡಿದ್ದ ಕಾರಣ ಈದ್ ಮಿಲಾದ್ ಹಬ್ಬದ ಹಿಂದಿನ ದಿನ ಕಂಟ್ರಾಕ್ಟರ್ ಹಬಬ್ಕಕೆ ಅಂತ ದುಡ್ಡು ಕೊಟ್ಟು ಹೋಗಿದ್ರು.. ಅದೇ ಖುಷಿಯಲ್ಲಿ ಚಿಕನ್ ಮಟನ್ ತಂದು ಆಡುಗೆ ಮಾಡಿ ಸಂಜೆ ಮೂವರು ಎಣ್ಣೆ ಪಾರ್ಟಿ ನಡೆಸಿದ್ದಾರೆ. ಪುಲ್ ಬಾಟಲಿ ಖಾಲಿ ಮಾಡಿ ಮತ್ತೆ ಮತ್ತೊಂದು ಆಫ್ ಬಾಟಲಿ ಎಣ್ಣೆ ತಂದು ನಶೆ ಏರಿಸಿಕೊಂಡಿದ್ದಾರೆ. ಈ ವೇಳೆ ದುಡ್ಡಿನ ವಿಚಾರದಲ್ಲಿ ಇಬ್ಬರ ಸಾಜಿದ್ ಹಾಗೂ ರೆಹಾನ್ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಊಟ ಮಾಡಿ ಕೈ ತೊಳೆಯುತ್ತಿದ್ದ ರೆಹಾನ್ ತಲೆ ಮೇಲೆ ಸಾಜಿದ್ ಅಲ್ಲೇ ಇದ್ದ ದೊಡ್ಡ ಸಿಮೆಂಟ್ ಇಟ್ಟಿಗೆ ತಗೊಂಡು ಹಾಕಿದ್ದು ಇದ್ರಿಂದ ರೆಹಾನ್ ಅಲ್ಲೇ ಮೃತಪಟ್ಟಿದ್ದಾನೆ.. ಏನು ಮಾಡಬೇಕು ಅಂತ ದಿಕ್ಕು ತೋಚದ ಸಾಜಿದ್ ಮೃಥ ರೆಹಾನ್ ನನ್ನ ಸಂಪಿಗಾಗಿ ತೋಡಿದ್ದ ಗುಂಡಿಯಲ್ಲಿ ಮೃತದೇಹ ಹಾಕಿ ಮುಚ್ಚಿ ಹಾಕಿ ಅಲ್ಲಿಂದ ಮತ್ತೊರ್ವ ಸ್ನೇಹಿತ ಅಲಂ ಜೊತೆ ಬಿಹಾರಕ್ಕೆ ಎಸ್ಕೇಪ್ ಆಗಿದ್ದ.
ಇನ್ನೂ ಜಮೀನು ಮಾಲೀಕ ಹಾಗೂ ಕಂಟ್ರಾಕ್ಟರ್ ಕೆಲಸದವರು ಊರಿಗೆ ಹೋಗಿರಬೇಕು ಅಂತ ಅಂದುಕೊ0ಡಿದ್ರು.. ಆದ್ರೆ ಅತ್ತ ಬಿಹಾರಕ್ಕೆ ಹೋದ ಕೊಲೆಗಾರ ಊರಲ್ಲೇ ಕೊಲೆ ವಿಷಯ ಬಾಯ್ಬಿಟ್ಟಾಗ ಅಲ್ಲಿನ ಪೋಲಿಸರು ಚಿಕ್ಕಬಳ್ಳಾಪುರ ಪೊಲೀಸರಿಗೆ ಮಾಹಿತಿ ನೀಡಿದ್ರು… ಸದ್ಯ ಕೊಲೆಗಾರನನ್ನ ಬಂಧಿಸಿರುವ ನಂದಿಗಿರಿಧಾಮ ಪೊಲೀಸರು ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕಾನೂನು ಪ್ರಕ್ರಿಯೆಗಳನ್ನ ಮುಂದುವೆರೆಸಿದ್ದಾರೆ.