ರಾತ್ರೀ ವೇಳೆ ಒಂಟಿ ಮಹಿಳೆ ಹೊರ ಬಂದರೆ ಅನಾಹುತ ಗ್ಯಾರಂಟಿ
1 min readಕತ್ತಲಾದರೆ ಈ ಗ್ರಾಮದಲ್ಲಿ ಆರಂಭವಾಗಲಿದೆ ಆತಂಕ
ರಾತ್ರೀ ವೇಳೆ ಒಂಟಿ ಮಹಿಳೆ ಹೊರ ಬಂದರೆ ಅನಾಹುತ ಗ್ಯಾರಂಟಿ
ಹೊರ ಮಹಿಳೆಯ ಸರ ಕದಿಯಲು ಯತ್ನಿಸಿದ ಪುಂಡರು
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮನೆಯಲ್ಲಿ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ. ಮನೆಯ ಹೊರಗೆ ಶೌಚಾಲಯ ನಿರ್ಮಿಸುವವರೇ ಹೆಚ್ಚು. ರಾತ್ರಿ ವೇಳೆ ಶೌಚಕ್ಕೆಂದು ಮಹಿಳೆಯರು ಒಂಟಿಯಾಗಿ ಹೊರ ಬಂದರೆ ಆಗಬಾರದ ಅನಾಹುತ ನಡೆದೇ ಹೋಗುವಂತ ಪರಿಸ್ಥಿತಿ. ಹಾಗಾಗಿಯೇ ಈ ಗ್ರಾಮದಲ್ಲಿ ಕತ್ತಲಾದರೆ ಸಾಕು ಮಹಿಳೆಯರು ಮನೆಯಿಂದ ಹೊರ ಬರಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾದರೆ ಅಲ್ಲಿರುವ ಸಮಸ್ಯೆ ಏನು ಅಂತೀರಾ, ಈ ಸ್ಟೋರಿ ನೋಡಿ.
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ನರಗನಹಳ್ಳಿ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಪುಂಡರ ಹಾವಳಿ ಹೆಚ್ಚಾಗಿದೆ. ದಿನಪೂರ್ತಿ ಹೊಲದಲ್ಲಿ ಕೆಲಸ ಮಾಡಿ ಜಾನುವಾರುಗಳ ಹಾರೈಕೆ ಮಾಡಿ ಮನೆಗೆ ಬರುವ ಜನರು, ನಿದ್ದಗೆ ಜಾರುತ್ತಿದ್ದಂತೆ ಮನೆ ಬಳಿಗೆ ಬರುವ ಪುಂಡರು ಮನೆ ಬಾಗಿಲುಗಳನ್ನ ಬಡಿದು ಪರಾರಿಯಾಗುತ್ತಿದ್ದಾರೆ.
ತಡರಾತ್ರಿ ಶೌಚಕ್ಕಾಗಿ ಮನೆಯಿಂದ ಹೊರಗೆ ಬಂದ ಮಹಿಳೆಯರನ್ನು ಹಿಂಬಾಲಿಸಿ ಹಿಂದಿನಿAದ ಬರುವ ಕಿಡಿಗೇಡಿಗಳು ಆಕೆಯ ಬಾಯಿ ಮುಚ್ಚಿಕೊಂಡು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಮಹಿಳೆಯ ಸರಗಳ್ಳತನಕ್ಕೆ ಯತ್ನಿಸಿದ್ದಾರೆ. ಆದರೆ, ಈ ವೇಳೆ ಮಹಿಳೆ ಸರಗಳ್ಳತನ ಮಾಡಲು ಬಿಡದ ಕಾರಣ ಆಕೆಯ ಮೇಲೆ ಹ¯್ಲÉ ನಡೆಸಿದ ಖದೀಮರು ನಂತರ ಆಕೆಯ ಬಟ್ಟೆಗಳನ್ನ ಹರಿದು ಪ್ರಜ್ಞೆ ತಪ್ಪಿಸಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ನಿರ್ಜನ ಪ್ರದೇಶದಲ್ಲಿ ಪ್ರe್ಞÁಹೀನವಾಗಿ ಬಿದ್ದಿದ್ದ ಮಹಿಳೆಯನ್ನ ಕುಟುಂಬಸ್ಥರು ಆಸ್ವತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು, ನಂತರ ಕಿಡಿಗೇಡಿಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆದರೆ ಗ್ರಾಮದಲ್ಲಿ ರಾತ್ರಿ ವೇಳೆ ಬೀದಿ ದೀಪಗಳಿಲ್ಲದ ಕಾರಣ ಅಪರಿಚಿತರು ಯಾರು ಎಂಬುದು ಗೊತ್ತಾಗದೆ ಗ್ರಾಮಸ್ಥರು ರಾತ್ರಿ ವೇಳೆ ಗ್ರಾಮದಲ್ಲಿ ಬಾಗಿಲು ಬಡಿಯುವ ಖದೀಮರನ್ನು ಹಿಡಿಯಲು ಮುಂದಾಗಿದ್ದಾರೆ. ಹೀಗಾಗಿ ಕಳೆದ ರಾತ್ರಿ ಗ್ರಾಮಕ್ಕೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಬಾಗಿಲು ಬಡಿಯುತ್ತಿದ್ದಂತೆ ಗ್ರಾಮಸ್ಥರು ಅವರನ್ನು ಹಿಡಿಯಲು ಮುಂದಾಗಿದ್ದಾರೆ.
ಈ ವೇಳೆ ಕಿಡಿಹೇಡಿಗಳು ದ್ವಿಚಕ್ರ ವಾಹನ ಅಲ್ಲಾ ಬಿಟ್ಟು ಪರಾರಿಯಾಗಿದ್ದಾರೆ. ಆರೋಪಿಗಳು ತಂದಿದ್ದ ಬೈಕ್‌ನ ಒಂದು ಚಕ್ರವನ್ನು ಮುರಿದು ಹಾಕಿದ ಗ್ರಾಮಸ್ಥರು ಬೈಕ್ ಸಮೇತ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿ ದೂರು ನೀಡಿದ್ದಾರೆ ಒಟ್ಟಾರೆ ರಾತ್ರಿಯಾಗುತ್ತಲೇ ಗ್ರಾಮಕ್ಕೆ ಎಂಟ್ರಿಕೊಡುವ ಕಿಡಿಗೇಡಿಗಳು ಮಾಡುತ್ತಿರುವ ಪುಂಡಾಟಿಕೆಗೆ ಮಹಿಳೆಯರು ಸೇರಿದಂತೆ ಮಕ್ಕಳು ಬೆಚ್ಚಿ ಬಿದ್ದಿz್ದÁರೆ. ಪೊಲೀಸರು ಪುಂಡರ ಎಡೆಮುರಿಕಟ್ಟಿ ಗ್ರಾಮಸ್ಥರ ಆತಂಕ ದೂರ ಮಾಡಬೇಕಿದೆ.