ಭಾರತೀಯ ರೆಡ್ ಕ್ರಾಸ್ ವಾಕಥಾನ್ ಜತೆ ನೂರಾರು ಜನರ ಹೆಜ್ಜೆ
1 min read
ಮಾನವೀಯತೆ ಕಡೆ ನಮ್ಮನಡೆ ವಿಶ್ವಸಂಸ್ಥೆ ಶಾಂತಿ ದಿನದ ದ್ಯೇಯವಾಕ್ಯ
ಭಾರತೀಯ ರೆಡ್ ಕ್ರಾಸ್ ವಾಕಥಾನ್ ಜತೆ ನೂರಾರು ಜನರ ಹೆಜ್ಜೆ
ಇಂದು ವಿಶ್ವಸಂಸ್ಥೆ ಶಾಂತಿ ದಿನ ಭಾರತೀಯ ರೆಡ್ ಕ್ರಾಸ್ ಚಿಕ್ಕಬಳ್ಳಾಪುರ ಶಾಖೆಯಿಂದ ಹಮ್ಮಿಕೊಂಡಿದ್ದ ಮಾನವೀಯತೆ ಕಡೆ ನಮ್ಮ ನಡೆ ವಾಕಾಥಾನ್ ಗೆ ನೂರಾರು ವಿದ್ಯಾರ್ಥಿಗಳು ಸಂಘಸ0ಸ್ಥೆ ಮುಖಂಡರು ಅಧಿಕಾರಿ ವರ್ಗ ಬಾಗವಹಿಸಿದ್ದರು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಶಾಂತಿಮೆರವಣಿಗೆಯನ್ನ ಸಾರ್ವಜನಿಕರು ಶಾಂತಚಿತ್ತರಾಗಿ ವೀಕ್ಷಿಸಿದರು.
ಇಂದು ವಿಶ್ವ ಶಾಂತಿ ದಿನಾಚರಣೆ ಎರಡನೆ ಮಹಾಯುದ್ದದಲ್ಲಿ ಆದ ರಕ್ತಪಾತವೇ ಈ ಶಾಂತಿ ದಿನಾಚರಣೆಗೆ ಕಾರಣವಾಗಿದ್ದು ಚಿಕ್ಕಬಳ್ಳಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಆಯೋಜಿಸಿದ್ದ ಮಾನವೀಯತೆ ಕಡೆ ನಮ್ಮ ನಡೆ ವಾಕಾಥಾನ್ ನಲ್ಲಿ ನೂರಾರು ವಿದ್ಯಾರ್ಥಿಗಳು ಸಂಘಸ0ಸ್ಥೆ ಮುಖಂಡರು ಪೊಲೀಸರು,ನಗರಸಭೆ ಅಧಿಕಾರಿಗಳು ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು ಎಲ್ಲರ ಮೈಮೇಲೂ ಬಿಳಿ ಶರ್ಟ್ ಕೆಂಪು ಟೋಪಿ ರಾರಾಜಿಸುತಿತ್ತು.
ಎಂ ಜಿ ರಸ್ಥೆ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದಿಂದ ಜಿಲ್ಲಾಧಿಕಾರಿ ರವೀಂದ್ರರವರು ವಾಕಾಥಾನ್ ಗೆ ಚಾಲನೆ ನೀಡಿದರು ಎಂ ಜಿ ರಸ್ತೆ ಮೂಲಕ ಸಾಗಿದ ವಾಕಾಥಾನ್ ಪಿಳ್ಳಪ್ಪ ವೃತ್ತ ಕೋರ್ಟ್ ರಸ್ತೆ ಶಿಡ್ಲಘಟ್ಟ ವೃತ್ತದ ಮೂಲಕ ಬಿಬಿ ರಸ್ತೆಯುದ್ದಕ್ಕೂ ಸಾಗಿ ಜೂನಿಯರ್ ಕಾಲೇಜು ರಂಗಮ0ದಿರದಲ್ಲಿ ಮುಕ್ತಾಯಗೊಂಡಿತು. ನಂದಿರ0ಗಮ0ದಿರದಲ್ಲಿ ವಾಕಥಾನ್ ನಲ್ಲಿ ಬಾಗವಹಿಸದ್ದ ಡಿ ಸಿ ರವೀಂದ್ರ ಮಾತನಾಡಿ,2012 ರಲ್ಲಿ ಚಿಕ್ಕಬಳ್ಳಾಪುರ ರೆಡ್ ಕ್ರಾಸ್ ಸಂಸ್ಥೆ ಪ್ರಾರಂಬವಾಗಿದ್ದು ಇಂದಿಗೆ 12 ವರ್ಷವಾಗಿದೆ 16 ಜನ ಸಿಬ್ಬಂದಿಯನ್ನು ಹೊಂದಿರುವ ಸಂಸ್ಥೆ 24 ಗಂಟೆ ಕಾರ್ಯನಿರ್ವಹಿಸುತ್ತಿದೆ, ಈ ಸಂಸ್ಥೆ ಇದುವರೆಗೂ 1045ರಕ್ತಧಾನ ಶಿಬಿರಗಳನ್ನ ಆಯೋಜಿಸಿದ್ದು ೭,೪೪೫೨ ಯೂನಿಟ್ ರಕ್ತ ಸಂಗ್ರಹಿಸಿದೆ ಆ ಪೈಕಿ 73,976 ಯೂನಿಟ್ ರಕ್ತವನ್ನ ಫಲಾನುಭವಿಗಳಿಗೆ ನೀಡಿದ್ದು ರಾಜ್ಯದ 31 ಜಿಲ್ಲೆಗಳ ಪೈಕಿ ಕಡಿಮೆ ದರ ಅಂದ್ರೆ 650 ರೂಗಳಿಗೆ ರಕ್ತ ನೀಡಲಾಗುತ್ತಿದೆ ಎನ್ ಆರ್ ಹೆಚ್ ಎಂ ಅಡಿಯಲ್ಲಿ ಬಡರೋಗಿಗಳಿಗೆ ಹಾಗು ಗರ್ಬಿಣಿ ಸ್ತ್ರೀಯರಿಗೆ ರಿಯಾಯಿತಿ ಧರದಲ್ಲಿಯೂ ಹೆಚ್ ಐ ವಿ ಹಾಗು ಡಯಾಲಿಸೀಸ್ ರೋಗಿಗಳಿಗೆ ಉಚಿತವಾಗಿಯೂ ರಕ್ತ ನೀಡಲಾಗುತಿದ್ದು ಇದುವರೆಗೂ 1,252 ಯೂನಿಟ್ ರಕ್ಷ ಉಚಿತವಾಗಿ ಹಂಚಿಕೆ ಮಾಡಲಾಗಿದೆ ರೆಡ್ ಕ್ರಾಸ್ ಸಂಸ್ಥೆ ಕೇವಲ ರಕ್ತ ಸಂಗ್ರಹ ಮಾಡುವುದರಲ್ಲೆ ನಿರತವಾಗದೆ ಆರೋಗ್ಯ ತಪಾಸಣಾ ಶಿಬಿರಗಳು,ಗಿಡನೆಡುವ ಕಾರ್ಯಕ್ರಮ,ಬಡವರ ಬದುಕಿಗೆ ಬೇಕಾದ ಸಾಮಗ್ರಿಗಳು ಉಚಿತವಾಗಿ ನೀಡಿದೆ.
ಚಿಕ್ಕಬಳ್ಳಾಪುರ ಶಾಖೆ ಅತ್ಯತ್ತಮ ಕೆಲಸ ನಿರ್ವಹಿಸಿದ ಕಾರಣ 2014-15ನೇ ಸಾಲಿನಲ್ಲಿ ಎರಡು ಭಾರಿ ಪ್ರಶಶ್ತ್ರಿಗೆ ಬಾಜನವಾಗಿದ್ದು 2016-17 ರಲ್ಲೂ ದೇಶದಲ್ಲಿ ಮೂರನೆ ಅತ್ಯುತ್ಮ ಶಾಖೆ ಎಂದು ಬಹುಮಾನ ಪಡೆದಿದೆ 2023-24 ನೇ ಸಾಲಿನಲ್ಲಿ ಅತಿ ಹೆಚ್ಚು ಕ್ಯಾನ್ಸರ್ ತಪಾಸಣಾ ಶಿಬಿರಗಳು ಆಯೋಜಿಸದ್ದಕ್ಕಾಗಿ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ರಿಂದ ಪ್ರಶಸ್ತಿ ಸ್ವೀಕರಿಸಿದ ಹೆಮ್ಮೆಯ ಸಂಸ್ಥೆಯಾಗಿ ಹೊರಹೊಮ್ಮಿದೆ ಅಂತಹ ಸಂಸ್ಥೆ ನಡೆಸಿದ ಶಾಂತಿ ದಿನಾಚರಣೆ ಅಂಗವಾಗಿ ಅಭಿಮಾನದಿಂದ ನೂರಾರು ಜನ ಪಾಲ್ಗೊಂಡಿದ್ದ ಸಂತೋಷದ ಸಂಗತಿ ಎಂದರು
ಈ ವೇಳೆ ಸಂಸ್ಥೆ ಉಪಾಧ್ಯಕ್ಷ ಡಾ ಕೋಡಿರಂಗಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಡಿವೈ ಎಸ್ ಪಿ ಶಿವಕುಮಾರ್, ರೆಡ್ ಕ್ರಾಸ್ ಸಂಸ್ಥೆ ಖಜಾಂಚಿ ಎಂ ಜಯರಾಮ್, ನಗರಸಭೆ ಅಧ್ಯಕ್ಷ ಎ.ಗಜೇಂದ್ರ, ಉಪಾಧ್ಯಕ್ಷ ಜೆ ನಾಗರಾಜ್ ತಹಶೀಲ್ದಾರ್ ಅನಿಲ್, ನಗರಸಭೆ ಕಮೀಷನರ್ ಉಮಾಶಂಕರ್ ವಿವಿದ ಕಾಲೇಜುಗಳ ಮುಖ್ಯಸ್ಥರು ಸಂಘ ಸಂಸ್ಥೆ ಪ್ರಮುಖರು ಪಾಲ್ಗೊಂಡಿದ್ದರು.