ಕೆ ವಿ ಇಂಗ್ಲೀಷ್ ಶಾಲೆಯಲ್ಲಿ ನಡೆದ ವಿವಿದ ಸ್ಪರ್ದೆಗಳು
1 min readರ‍್ಯಾಂಪ್ ವಾಕ್ ಮೂಲಕ ಗಮನ ಸೆಳೆದಮಕ್ಕಳು
ಪ್ಲವರ್ ಡೆಕೋರೇಷನ್ ಮಾಡಿಕೊಂಡುಬ0ದಮಕ್ಕಳು
ಪುಟಾಣಿ ವೈಧ್ಯರಿಂದ ಹೆಲ್ತ್ ಚೆಕಪ್ ಮಾಡಿಸಿಕೊಂಡ ನವೀನ್ ಕಿರಣ್
ಕೆ ವಿ ಇಂಗ್ಲೀಷ್ ಶಾಲೆಯಲ್ಲಿ ನಡೆದ ವಿವಿದ ಸ್ಪರ್ದೆಗಳು
ಪುಟಾಣಿ ಮಕ್ಕಳಿಗೆ ಇಂದು ವಿವಿಧ ಸ್ಪರ್ದೆಗಳನ್ನು ನಡೆಸಲಾಯಿತು. ಪುಟಾಣಿ ಮಕ್ಕಳ ರ‍್ಯಾಂಪ್ ವಾಕ್ ಹಾಗೂ ವಿವಿಧ ರೀತಿಯ ಸ್ಪರ್ದೆಗಳಿಗೆ ಫಿದಾ ಆಗುವ ಜೊತೆಗೆ ವೈದರಾಗಿರುವ ಪುಟಾಣಿಗಳಿಂದ ಹೆಲ್ತ್ ಚೆಕಪ್ ಮಾಡಿಸಿಕೊಂಡ ಸಿವಿವಿ ಕ್ಯಾಪಾಸ್ ಅಧ್ಯಕ್ಷ ಕೆ.ವಿ. ನವೀನ್ ಕಿರಣ್.
ಹೀಗೆ ಡ್ರೆಸ್ ಕಾಂಪಿಟೇಷನ್ , ರ‍್ಯಾಂಪ್ ವಾಕ್ , ಸಿಹಿ ತಿಂಡಿಗಳ ಸ್ಪರ್ದೆ ವೈದ್ಯರಾದ ಪುಟಾಣಿಗಳು, ರೈತರಾಗಿ ಉಳುಮೆ ಮಾಡಲು ಏನೆಲ್ಲಾ ಮಾಡಬೇಕು ರೈತ ಅಂದ ಮೇಲೆ ಹೇಗೆ ಇರಬೇಕು, ಎನೆಲ್ಲಾ ಬೇಕು ಅಂತಾ ತೋರಿಸುವ ವಿಭಿನ್ನ ಸ್ಪರ್ದೆಗಳಲ್ಲಿ ಭಾಗಿಯಾಗಿರುವ ಪುಟಾಣಿ ಮಕ್ಕಳು. ಈ ದೃಶ್ಯ ಕಂಡುಬ0ದಿದ್ದು ಚಿಕ್ಕಬಳ್ಳಾಪುರ ಹೊರ ವಲಯದ ಸಿ ವಿ ವಿ ಕ್ಯಾಂಪಾಸ್‌ನ ಕೆ ವಿ ಇಂಗ್ಲೀಷ್ ಶಾಲೆನಲ್ಲಿ.
ಇಂದು ಮೊದಲಿಗೆ ಪುಟಾಣಿ ಮಕ್ಕಳ ರ‍್ಯಾಂಪ್ ವಾಕ್ ಸ್ಪರ್ದೆಗಳು ನಡೆಯಿತು. ಸ್ಥಳದಲ್ಲೇ ಇದ್ದ ಅಧ್ಯಕ್ಷ ಕೆವಿ ನವೀನ್ ಕಿರಣ್, ಪ್ರಿನ್ಸಿಪಲ್ ಹಾಗೂ ಶಾಲೆಯ ಶಿಕ್ಷಕಿಯರು ರ‍್ಯಾಂಪ್ ವಾಕ್ ವೀಕ್ಷಿಸಿ ಫಿದಾ ಆದರು. ಮಕ್ಕಳ ಡ್ರೆಸ್ ಕೋಡ್‌ಗೆ ಬಹುಮಾನ ವಿತರಣೆ ಮಾಡಿದ ಪ್ರಾಂಶುಪಾಲರು, ಚೆಂದ ಚೆಂದವಾಗಿ ಡ್ರೆಸ್ ಹಾಕಿಕೊಂಡು ಬಂದಮಕ್ಕಳು ಓಂದು ಕಡೆ, ಸಿಹಿ ತಿನಿಸು ಮಾಡಿಕೊಂಡು ಬಂದ ಮಕ್ಕಳು ಮತ್ತೊಂದು ಕಡೆ. ಸಿಹಿ ತಿನಿಸು ರುಚಿ ಸವಿದ ಅಧ್ಯಕ್ಷ ನವೀನ್ ಕಿರಣ್ ಹಾಗೂ ಪ್ರಿನ್ಸಿಪಾಲ್ ಮಕ್ಕಳಿಗೆ ಶಹಬ್ಬಾಶ್‌ಗಿರಿ ನೀಡಿದರು.
ವಾ.ಓ- ಕೈ ಕೆಸರಾದರೆ ಬಾಯಿ ಮೊಸರು ರೈತರಿಗೆ ಎಷ್ಡು ಕಷ್ಟ ಇರುತ್ತೆ ಅಂತಾ ರೈತರಿಗೆ ಏನೆಲ್ಲಾ ಬೇಕು ಹೇಗೆ ಕಷ್ಟ ಪಡುತ್ತಾರೆ ಅಂತಾ ನೇರವಾಗಿ ಚಿತ್ರಗಳು ಹಾಗೂ ರೈತ ಉಳುಮೆಮಾಡಲು ಏನೆಲ್ಲ ಬೇಕು ಅಂತಾ ತೋರಿಸಿ ಕೊಟ್ಟ ಅದರ ಬಗ್ಗೆ ಮಾಹಿತಿ ನೀಡಿದ ಪುಟಾಣಿ ಮಕ್ಕಳು…
ಚಿತ್ರಕಲೆ ಬಿಡಿಸುವುದು ಹೇಗೆ, ಅದಕ್ಕೆಏನೆಲ್ಲಾ ಬೇಕು ಅಂತಾ ಮಕ್ಕಳು ತೊರಿಸಿದರು. ಚಿತ್ರಗಳಿಗೆ ಬಣ್ಣ ಹಾಕುವ ಮೂಲಕ ಗಮನ ಸೆಳೆದ ಮಕ್ಕಳು ಮತ್ತೊಂದೆಡೆ. ಎಲ್ಲಾ ಮಕ್ಕಳು ಈ ಕಾಂಪಿಟೇಶನ್ ನಲ್ಲಿ ವೈದರಾಗಿ ಪೋಷಕರ ಗಮನ ಸೆಳೆದರು. ಪ್ರತಿ ಮಕ್ಕಳು ವೈದ್ಯರಾಗಿ ಪೇಶೆಂಟ್ ಬಂದಾಗಾ ಹೇಗೆ ಮಾತಾಡಬೇಕು, ಹೇಗೆ ಚಿಕಿತ್ಸೆ ಕೊಡಬೇಕು ಅಂತಾ ಮಾಹಿತಿ ನೀಡಿದರೆ ನವೀನ್ ಕಿರಣ್ ಹಾಗೂ ಪ್ರಾಂಶುಪಾಲರು ಡಾಕ್ಟರ್ ಅಗಿರುವ ಮಕ್ಕಳಿಗೆ ಪ್ರಶ್ನೆ ಹಾಕಿದರು. ಸರಿಯಾದ ಉತ್ತರ ಕೊಟ್ಟ ಮಕ್ಕಳ ಕೈನಲ್ಲಿ ಬಾಡಿ ಚೆಕಪ್ ಮಾಡಿಸುವ ಮೂಲಕ ಪುಟಾಣಿ ಮಕ್ಕಳ ಈ ಕೆಲಸಕ್ಕೆ ಶ್ಲಾಘಿಸಿದರು.
ಒಟ್ಟನಲ್ಲಿ ಇಂದು ನಡೆದ ಪುಟಾಣಿ ಮಕ್ಕಳ ಈ ಸ್ಪರ್ದೆಗಳಿಗೆ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಿಸಿದರು. ಮಕ್ಕಳ ಜೊತೆ ಬಂದ ಪೋಷಕರಿಗೆ ಇಂದು ಉತ್ತಮ ಮನರಂಜನೆಯಾಗಿತ್ತು.