ಕೆಆರ್‌ಎಸ್ ನೂತನ ಪದಾಧಿಕಾರಿಗಳ ಪದಗ್ರಹಣ.
1 min read
ಕೆಆರ್‌ಎಸ್ ನೂತನ ಪದಾಧಿಕಾರಿಗಳ ಪದಗ್ರಹಣ.
ಸ್ವಚ್ಛ ಆಡಳಿತಕ್ಕೆ ಕೆಆರ್‌ಎಸ್ ಸೇರಲು ಮನವಿ
ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ನಮ್ಮನ್ನು ಬೆಂಬಲಿಸಿ, ಸಾವಿರಾರು ನೂತನ ಸದಸ್ಯರು ಕೆಆರ್‌ಎಸ್ ಪಕ್ಷ ಸೇರುತ್ತಿದ್ದಾರೆ. ಇಂದು ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇದ್ದು, ನೂತನ ಪದಾಧಿಕಾರಿಗಳ ಬರುವಿಕೆಯಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವಶಂಕರ್ ತಿಳಿಸಿದರು.
ಕರ್ನಾಟಕ ರಾಷ್ಟ ಸಮಿತಿ ಪಕ್ಷ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದಿಂದ ತಾಲ್ಲೂಕಿನ ಕೆಆರ್‌ಎಸ್ ಕೇಂದ್ರ ಕಚೇರಿಯಲ್ಲಿ ನೆಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕಾರಣ ಎಂದರೆ ಕೇವಲ ಮೋಸ ಸುಳ್ಳು ವಂಚನೆ ಎಂಬುದೇ ಆಗಿದೆ. ಈ ದೃಷ್ಟಿಕೋನ ಬದಲಿಸಬೇಕೆಂಬ ಮುಖ್ಯ ಉದ್ದೆಶದಿಂದ ಕೆಆರ್‌ಎಸ್ ಪಕ್ಷ ಕಾರ್ಯನಿರ್ವಹಿಸುತ್ತದೆ. ಈಗಾಗಲೇ ಪಕ್ಷದ ಶಕ್ತಿ ಏನೆಂಬುದು ರಾಜ್ಯದ ಉದ್ದಗಲಕ್ಕೂ ತಿಳಿದಿದೆ ಎಂದರು.
ಬೆ0ಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಸಲಹೆ ಮೇರೆಗೆ ದೊಡ್ಡಬಳ್ಳಾಪುರ ತಾಲೂಕು ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಚನೆ ಮಾಡಲಾಗಿದೆ. ತಾಲೂಕು ಸಮಿತಿಯ ಕಾಲಾವಧಿ ಮೂರು ವರ್ಷ ಅಥಾವ ಜಿಲ್ಲಾ ಕಾರ್ಯಕಾರಿ ಸಮಿತಿಯ ವಿಶ್ವಾಸ ಇರುವ ತನಕ ಆಗಿರುತ್ತದೆ. ನಮ್ಮ ಕನಸು ಬ್ರಷ್ಟಾಚಾರ ರಹಿತ ಸಮಾಜ ಈ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಶ್ರಮಿಸಲಿ ಎಂಬುದೇ ಆಶಯ ಎಂದರು.