ಪತಿಯಿಂದಲೇ ಪತ್ನಿಯ ಕೊಲೆ ಆರೋಪ
1 min readಪತಿಯಿಂದಲೇ ಪತ್ನಿಯ ಕೊಲೆ ಆರೋಪ
ಪತ್ನಿಯನ್ನು ಥಳಿಸಿ ಕೊಲೆಗೈದು, ನೇಣು ಹಾಕಿದ ಪತಿ
ಚಿಕ್ಕಬಳ್ಳಾಪುರದ¯್ಲೆÆಂದು ಹೃದಯ ವಿದ್ರಾವಕ ಘಟನೆ
ಕುಡುಕ ಗಂಡನೊಬ್ಬ ಪ್ರತಿನಿತ್ಯ ಪತ್ನಿಗೆ ಮನಸೋಇಚ್ಚೆ ಹ¯್ಲÉ ಮಾಡುವ ಜೊತೆಗೆ ತೀವ್ರ ಚಿತ್ರಹಿಂಸೆ ನೀಡುತ್ತಿದ್ದನಂತೆ. ಕುಡುಕ ಪತಿಯ ವಿಕೃತಿ ಗುರುವಾರ ರಾತ್ರಿ ಮತ್ತಷ್ಟು ತೀವ್ರ ರೂಪ ಪಡೆದಿದ್ದು, ಇಂದು ಬೆಳಗ್ಗೆ ಆಕೆಯ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಪತಿಯಿಂದಲೇ ನಡೆದಿರುವ ಕೊಲೆ ಎಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಹೆಚ್ ಎಸ್ ಗಾರ್ಡನ್ ನಿವಾಸಿ ೪೭ ವರ್ಷದ ಶೋಭಾ ಮೃತ ಮಹಿಳೆಯಾಗಿದ್ದು. ಚಿಕ್ಕಬಳ್ಳಾಪುರ ತಾಲ್ಲೂಕಿನ ಮರಳಕುಂಟೆ ಗ್ರಾಮದ ಶೋಭಾ ಎಂಬುವರನ್ನ ೨೦ ವರ್ಷಗಳ ಹಿಂದೆ ನಗರದ ಹೆಚ್ ಎಸ್ ಗಾರ್ಡನ್ ನಿವಾಸಿ ಶ್ರೀನಿವಾಸ್ ಎಂಬುವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆದರೆ ಕುಡಿತ ಅಭ್ಯಾಸ ಮಾಡಿಕೊಂಡಿದ್ದ ಶ್ರೀನಿವಾಸ್ ಯಾವುದೇ ಕೆಲಸ ಮಾಡದೆ ಉಂಡಾಡಿ ಗುಂಡನAತೆ ಓಡಾಡಿಕೊಂಡಿದ್ದ ಎನ್ನಲಾಗಿದೆ.
ಮೃತ ಮಹಿಳೆಗೆ ಇಬ್ಬರು ಹೆಣ್ಣು ಮತ್ತು ಒಬ್ಬ ಗಂಡು ಮಗು ಇದ್ದು, ಬೆಳೆದು ನಿಂತಿರುವ ಮೂವರು ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದ ಶೋಭಾ ತರಕಾರಿ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದಳು. ಕ್ಷುಲ್ಲುಕ ವಿಚಾರಕ್ಕೆ ಪ್ರತಿ ನಿತ್ಯ ಜಗಳ ನಡೆಯುತ್ತಿತ್ತಂತೆ. ಪತಿಯ ಕುಡಿತದ ಚಟ ಬಿಡಿಸೋಕೆ ದೊಡ್ಡಬಳ್ಳಾಪುರ ಸಮೀಪದ ಮದ್ಯವರ್ಜನ ಕೇಂದ್ರಕ್ಕೆ ಸೇರಿಸಿದ್ದರಂತೆ.. ಇತ್ತೀಚೆಗಷ್ಟೇ ಅಲ್ಲಿಂದ ಬಂದಿದ್ದ ಸೀನಪ್ಪ ಗುರುವಾರ ರಾತ್ರಿ ಪತ್ನಿ ಜೊತೆ ಜಗಳವಾಡಿ ಹ¯್ಲÉ ನಡೆಸಿದ್ದನಂತೆ.
ಇAದು ಬೆಳಿಗ್ಗೆ ಮನೆಯಲ್ಲಿ ಶೋಭಾ ಮೇಲೆ ಹ¯್ಲÉ ನಡೆಸಿ, ಆಕೆಯನ್ನು ಕೊಲೆ ಮಾಡಿ ನಂತರ ಸೀರೆಯಿಂದ ನೇಣು ಹಾಕಿ ಪರಾರಿಯಾಗಿz್ದÁನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸ್ಥಳದಲ್ಲಿ ಮೃತ ಶೋಭಾಳ ತಾಯಿ, ಸಹೋದರಿಯರು ಹಾಗೂ ಆಕೆಯ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಹಾಗೂ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.