ಮಾನವೀಯತೆ ತೋರಲು ಹೋಗಿ ಅಪಘಾತದಲ್ಲಿ ಸಾವು
1 min readಮಾನವೀಯತೆ ತೋರಲು ಹೋಗಿ ಅಪಘಾತದಲ್ಲಿ ಸಾವು
ಸತ್ತ ನಾಯಿ ಎತ್ತಿಹಾಕಲು ಹೋಗಿ ಭೀಕರ ಅಪಘಾತ
ಅಪಘಾತದಲ್ಲಿ ಒಬ್ಬರ ಸಾವು, ಮತ್ತೊಬ್ಬರಿಗೆ ಗಾಯ
ಮಾನವೀಯತೆ ಎಂಬುದು ಎಲ್ಲರಿಗೂ ಇರಬೇಕಾದ ಒಂದು ಗುಣ. ಪ್ರತಿ ವಿಚಾರದಲ್ಲಿಯೂ ಮಾನವೀಯತೆ ಥಳಕು ಹಾಕಿಕೊಂಡಿರುತ್ತದೆ. ಆದರೆ ಇಲ್ಲೊಬ್ಬರು ಮಾನವೀಯತೆ ತೋರಲು ಹೋಗಿ ಜೀವ ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಹಾಗಾದರೆ ಏನು ಆ ವಿಚಾರ ಅಂತೀರಾ, ಈ ಸ್ಟೋರಿ ನೋಡಿ.
ವೀಕ್ಷಕರೇ, ಇದು ಮನ ಕಲಕೋ ಸ್ಟೋರಿ. ಕಲ್ಲು ಹೃದಯದವನು, ಮಾನವೀಯತೆ ಇಲ್ಲದವನು ಅಂತ ಯಾರಿಗಾದರೂ ನಾವು ಛೇಡಿಸುತ್ತೇವೆ. ಇದಕ್ಕೆ ಕಾರಣ ಸಣ್ಣ ವಿಚಾರದಲ್ಲಿಯೂ ಸ್ವಾರ್ಥ ತೋರುತ್ತಾನೆ ಎಂಬುದೇ ಆಗಿದೆ. ಆದರೆ ಇಲ್ಲೊಬ್ಬರು ಅದೇ ಮಾನವೀಯತೆ ತೋರಲು ಹೋಗಿ ಜಿವ ಕಳೆದುಕೊಂಡಿದ್ದಾರೆ. ಸತ್ತ ನಾಯಿಯನ್ನು ಪಕ್ಕಕ್ಕೆ ಸರಿಸುವ ವೇಳೆ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಒಬ್ಬರು ಮೃತಪಟ್ಟು ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿ ಆಸ್ಪತರೆ ಸೇರಿದ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ಹೊರವಲಯದ ರಾಷ್ಟಿçÃಯ ಹೆದ್ದಾರಿ ೪೪ಯಲ್ಲಿ ಘಟನೆ ನಡೆದಿದ್ದು, ಬಾಗೇಪಲ್ಲಿ ಬೆಂಗಳೂರು ಮಾರ್ಗದ ಹುನೇಗಲ್ ಗ್ರಾಮದ ಬಳಿ ಅಪಘಾತ ನಡೆದಿದೆ. ಮೃತ ಯುವಕನನ್ನು ಸಾಮಸೇನಹಳ್ಳಿಯ ಪ್ರಭು (30) ಎಂದು ಗುರುತಿಸಲಾಗಿದೆ. ಸತ್ತ ನಾಯಿಯನ್ನು ಪಕ್ಕ ಇಡಲು ಮುಂದಾದ ವೇಳೆ ಹಿಂಬದಿಯಿAದ ಬಂದ ಸ್ಕಾರ್ಪಿಯೋ ಕಾರಿಗೆ ಟಿಪ್ಪರ್ ಡಿಕ್ಕಿ ಹೊಡೆದ ಕಾರಣಕ್ಕೆ ಅಪಘಾತ ಸಂಭವಿಸಿದೆ.
ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಮತ್ತು ಬೈಕ್ ಅಪಘಾತಕ್ಕೆ ಒಳಗಾಗಿವೆ. ಈ ಅಘಾತದಲ್ಲಿ ಪ್ರಭು ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬ ಯುವಕನಿಗೆ ಗಂಭೀರ ಗಾಯಗಳಾಗಿವೆ. ಈ ಅಪಘಾತ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.