ಸಾರ್ವಜನಿಕ ಸಮಸ್ಯೆಗೆ ಅಧಿಕಾರಿಗಳು ತ್ವರಿತವಾಗಿ ಸ್ಫಂದಿಸಿ
1 min readಸಾರ್ವಜನಿಕ ಸಮಸ್ಯೆಗೆ ಅಧಿಕಾರಿಗಳು ತ್ವರಿತವಾಗಿ ಸ್ಫಂದಿಸಿ
ಕುಅದು ಕೊರೆತೆ ಸಭೆಯಲ್ಲಿ ದೂರುಗಳ ಸುರಿಮಳೆ
ಗೌರಿಬಿದನೂರಿನಲ್ಲಿ ಕುಂದುಕೊರತೆ ಸಭೆ
ಸಾರ್ವಜನಿಕ ಕುಂದು ಕೊರತೆಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಫಂದಿಸಬೇಕು. ಸಾರ್ವಜನಿಕರು ಲೋಕಾಯುಕ್ತ ಇಲಾಖೆಯನ್ನು ಸದುಪಯೋಗ ಪಡಿಸಿಕೊಂಡು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ಪೊಲೀಸ್ ಆದಿಕ್ಷಕ ವೀರೇಂದ್ರಕುಮಾರ್ ತಿಳಿಸಿದರು.
ಗೌರಿಬಿದನೂರು ತಾಲೂಕು ಕಛೇರಿ ಸಭಾಭವನದಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಆಂಟನಿ ಜಾನ್ ಅವರ ಮಾರ್ಗದರ್ಶನದಲ್ಲಿ ನಡೆದ ಲೋಕಾಯುಕ್ತರ ಕುಂದು ಕೊರತೆ ಅರ್ಜಿಸ್ವೀಕಾರ ಸಮಾವೇಶದಲ್ಲಿ ಮಾತನಾಡಿ, ಅಧಿಕಾರಿಗಳು ನಿಮಗೆ ಬಂದ ಅರ್ಜಿಗಳನ್ನು ವಿಲೇವಾರಿ ಮಾಡಲು ನಿಮಗೆ ಸರ್ಕಾರಿ ನಿಯಮ ಅಡ್ಡಿ ಇದ್ದರೇ ಅಥವಾ ಅರ್ಜಿದಾರನಿಂದ ಸರಿಯಾದ ಮಾಹಿತಿ ಇಲ್ಲದಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತರಬೇಕಾಗಿದ್ದರೇ ನೀವು ಅರ್ಜಿಯ ಹಿಂಬರಹವನ್ನು ಬರದು ಕೊಡಿ ಎಂದರು.
ಅನವಶ್ಯಕವಾಗಿ ಜನರನ್ನು ಕಾರ್ಯಾಲಯಗಳ ಸುತ್ತ ತಿರುಗಾಡಿಸಬೇಡಿ, ಲೋಕಾಯುಕ್ತ ಮೂರು ನಿಯಮಗಳನುಸಾರ ಕಾರ್ಯ ನಿರ್ವಹಿಸುತ್ತಿದೆ. ಮುಕ್ತವಾಗಿ ಜನರಿಂದ ಅರ್ಜಿ ಸ್ವೀಕರಿಸುವುದು, ಸರ್ಕಾರಿ ಅಧಿಕಾರಿಗಳು ಕೆಲಸ ಸರಿಯಾಗಿ ಮಾಡಲು ನಿಗಾ ವಹಿಸುವುದು. ಸರ್ಕಾರೀ ಅಧಿಕಾರಿಗಳು ತಮ್ಮ ವೇತನಕ್ಕಿಂತಲೂ ಹೆಚ್ಚು ಚರ, ಸ್ಥಿರಾಸ್ತಿ ಹೊಂದಿದ್ದರೇ ಕಾರ್ಯಾಚರಣೆ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಈ ಇಲಾಖೆ ಶ್ರಮಿಸುತ್ತಿದೆ ಎಂದು ತಿಳಿಸಿದರು. ಅಧಿಕಾರಿಗಳು ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯ ನೀಡಲು ಅಮಿಷಗಳಿಗೆ ಒಳಗಾಗಬೇಡಿ ಎಂದರು.
ಮಹಿಳಾ ಮತ್ತು ಮಕ್ಕಳ ಆಸ್ಪೆತ್ರೆ ವೈಧ್ಯಾಕಾರಿಗಳ ವಿರುದ್ದ ಹರಿಹಾಯ್ದ ಲೋಕಾಯುಕ್ತರು, ಕೇವಲ ಬಡವರು ಬರುವ ಸರ್ಕಾರಿ ಅಸ್ಪೆತ್ರೆಗೆ ವೈದ್ಯರು ಸಮರ್ಪಕವಾದ ಸೇವೆ ಒದಗಿಸುತ್ತಿಲ್ಲ ಏಕೆ ಎಂದು ಕಿಡಿಕಾರಿದರು. ಉದ್ದೇಶ ಪೂರ್ವಕವಾಗಿ ಔಷಧಿಗಳನ್ನು ಖಾಸಗಿ ಮೆಡಿಕಲ್ ಅಂಗಡಿಗೆ ಏಕೆ ಬರದುಕೊಡಬೇಕು, ಅಸ್ಪೆತ್ರೆಯಲ್ಲಿ ಔಷಧಿಗಳು ಸಾಕಷ್ಟು ಇವೆ, ಅದಕ್ಕೆ ಸರ್ಕಾರ ಕೋಟ್ಯಂತರ ಹಣ ಬಿಡುಗಡೆ ಮಾಡಿದೆ, ಅದರೂ ನೀವು ಕರ್ತವ್ಯ ಲೋಪ ಎಸೆಗಿದ್ದಿರಿ ಎಂದು ಖಾರವಾಗಿ ಪ್ರಶ್ನೆ ಮಾಡಿದರು. ಬಡಜನರ ಶಾಪ ನಿಮಗೆ ತಟ್ಟುತ್ತದೆ ಎಂದರು.
ಕು0ದುಕೊರತೆ ಸಭೆಯಲ್ಲಿ ನಗರಸಭೆ ಸರ್ವೆ ಇಲಾಖೆ ಕಂದಾಯ ಅರೋಗ್ಯ ಮಹಿಳಾ ಮತ್ತು ಮಕ್ಕಳ ಅಸ್ಪೆತ್ರೆ ಪೊಲೀಸ್ ಇಲಾಖೆ ಜನನ ಮತ್ತು ಮರಣಗಳ ಇಲಾಖೆ ಹೀಗೆ 62 ದೂರುಗಳ ಸುರಿಮಳೆ ಹರಿದು ಬಂದಿರುವುದು ವಿಶೇಷವಾಗಿದೆ. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಹೇಶ್ ಎಸ್ ಪತ್ರಿ, ಲೋಕಾಯುಕ್ತ ನಿರೀಕ್ಷಕ ಶಿವಪ್ರಸಾದ್ ಮಹೇಶ್, ಪೌರಾಯುಕ್ತೆ ಗೀತ, ಇಒ ಹೊನ್ನಯ್ಯ, ಬಿಇಒ ಶ್ರೀನಿವಾಸಮೂರ್ತಿ, ಪರಿಸರವಾದಿ ಚೌಡಪ್ಪ ಇದ್ದರು.