ಪಿಎಂ ಆವಾಸ್ ಯೋಜನೆಯಲ್ಲಿ ಫಲಾನುಭವಿಗಳ ಹೆಸರು ನಾಪತ್ತೆ
1 min readಪಿಎಂ ಆವಾಸ್ ಯೋಜನೆಯಲ್ಲಿ ಫಲಾನುಭವಿಗಳ ಹೆಸರು ನಾಪತ್ತೆ
ನಲ್ಲಿತಾಳಪುರ ಗ್ರಾಮ ಪಂಚಾಯಿತಿಯಲ್ಲಿ ಪ್ರಕರಣ ಬೆಳಕಿಗೆ
ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಆಯ್ಕೆಯಾಗಿದ್ದ ಫಲಾನುಭವಿಗಳ ಹೆಸರು ನಾಪತ್ತೆಯಾಗಿದೆ ಎಂದು ಆರೋಪಿಸಿ ಫಲಾನುಭವಿಗಳು ನಂಜನಗೂಡು ತಾಲೂಕಿನ ನಲ್ಲಿತಾಳಪುರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆಯಿತು.
ನಂಜನಗೂಡು ತಾಲ್ಲೂಕಿನ ನಲ್ಲಿತಾಳಪುರ ಗ್ರಾಮ ಪಂಚಾಯಿತಿಯಲ್ಲಿ ಮನೆಗಳ ಆಯ್ಕೆ ಪಟ್ಟಿಯಲ್ಲಿ ಕೆಲ ಫಲಾನುಭವಿಗಳ ಹೆಸರನ್ನು ಕೈ ಬಿಡಲಾಗಿದೆ ಎಂದು ನಿವಾಸಿಗಳು ಗಂಭೀರವಾಗಿ ಆರೋಪಿಸಿದ್ದಾರೆ. ಕಳೆದ ವರ್ಷ 2023-24ನೇ ಸಾಲಿನಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಅರ್ಜಿ ಹಾಕಲಾಗಿತ್ತು. ನಲ್ಲಿತಾಳಪುರ ಗ್ರಾಮ ಪಂಚಾಯಿತಿಗೆ ಸುಮಾರು ೩೬ ಮನೆಗಳು ಮಂಜೂರಾಗಿದ್ದು, ಇದರಲ್ಲಿ 10 ಮನೆಗಳು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ನೀಡಲಾಗಿದೆ.
ಆಯ್ಕೆ ಪಟ್ಟಿಯಲ್ಲಿ ಚಿಕ್ಕದೇವಮ್ಮ, ತೊಪಮ್ಮ, ದೊಡ್ಡಮ್ಮ, ಜ್ಯೋತಿ, ಚಿಕ್ಕಮ್ಮ ಅವರನ್ನು ಆಯ್ಕೆಮಾಡಲಾಗಿತ್ತು. ಆದರೆ, ಈ ಐವರು ಫಲಾನುಭವಿಗಳ ಹೆಸರನ್ನು ಕೈಬಿಟ್ಟು, ಗ್ರಾಮ ಪಂಚಾಯಿತಿ ಸದಸ್ಯರಿಗೆ ಬೇಕಾದವರಿಗೆ ಮನೆ ನೀಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ನೀಡಿಲ್ಲ. ಹಣದ ಆಮಿಷಕ್ಕೆ ಒಳಗಾಗಿ ಮನೆಗಳನ್ನು ಉಳ್ಳವರಿಗೆ ನೀಡಿದ್ದಾರೆ. ಸೂರಿಲ್ಲದೆ ಪರದಾಡುತ್ತಿರುವ ನಿವಾಸಿಗಳಿಗೆ ಮನೆಗಳನ್ನು ನೀಡದೆ ಕಾನೂನು ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿಯಲ್ಲಿ ಕಾಮಗಾರಿ ನಡೆಸಿಲ್ಲ ಆದರೂ ಬಿಲ್ ಮಾಡಿಕೊಂಡಿದ್ದಾರೆ. ನರೇಗಾ ಯೋಜನೆಯಲ್ಲಿ ಅಕ್ರಮ ನಡೆದಿದೆ. 15ನೇ ಹಣಕಾಸು ಯೋಜನೆಯಲ್ಲಿ ಬರುವ ಗ್ರಾಮಗಳ ಚರಂಡಿ ಸ್ವಚ್ಛತೆ ಹಾಗೂ ಕಾಮಗಾರಿಗಳನ್ನು ಮಾಡಿಲ್ಲ. ಆದರೂ ಬಿಲ್ ಮಾಡಿಕೊಂಡಿದ್ದಾರೆ ಈ ಬಗ್ಗೆ ಸಂಬ0ಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಗ್ರಾಮದ ಪ್ರಕಾಶ್, ಮಹದೇವನಾಯಕ, ಸಿದ್ದನಾಯಕ, ಧರ್ಮೇಶ್, ತಿಮ್ಮನಾಯಕ, ಗೋವಿಂದನಾಯಕ, ಸಿದ್ದನಾಯಕ, ಮಹೇಶ್, ಕುಮಾರ್, ಜವರನಾಯಕ ಒತ್ತಾಯಿಸಿದ್ದಾರೆ.