ಬಾಗೇಪಲ್ಲಿ ಕರವೇ ಪದಾಧಿಕಾರಿಗಳ ಸಭೆ
1 min readಬಾಗೇಪಲ್ಲಿ ಕರವೇ ಪದಾಧಿಕಾರಿಗಳ ಸಭೆ
ಗಡಿಯಲ್ಲಿ ಕನ್ನಡ ಪರ ಹೋರಾಟಗಳಿಗೆ ಶ್ರಮ
ಕರವೇ ತಾಲೂಕು ನೂತನ ಗೌರವಾಧ್ಯಕ್ಷರ ಆಯ್ಕೆ
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಆದೇಶದಂತೆ ಕರವೇ ತಾಲ್ಲೂಕು ಅಧ್ಯಕ್ಷ ಕೆ.ಎನ್ ಹರೀಶ್ ಇಂದು ಕಸಾಪ ಕಚೇರಿಯಲ್ಲಿ ನಡೆದ ತಾಲ್ಲೂಕು ಪದಾಧಿಕಾರಿಗಳ ಸಭೆ ನಡೆಸಿ, ತಾಲ್ಲೂಕು ಘಟಕದ ನೂತನ ಗೌರಾಧ್ಯಕ್ಷರಾಗಿ ವೆಂಕಟೇಶ್ ಅವರನ್ನು ಆಯ್ಕೆ ಮಾಡಿದರು.
ಕರವೇ ತಾಲೂಕು ಘಟಕದ ಸಭೆಯಲ್ಲಿ ಮಾತನಾಡಿದ ತಾಲ್ಲೂಕು ಅಧ್ಯಕ್ಷ ಕೆ.ಎನ್ ಹರೀಶ್, ಇತ್ತೀಚೆಗೆ ಕರವೇ ಸಂಘಟನೆ ತಾಲ್ಲೂಕಿನಾದ್ಯಂತ ಬಲಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಸಜ್ಜನರು, ಕನ್ನಡ ಮೇಲಿನ ಅಭಿಮಾನವಿರುವ ವೆಂಕಟೇಶ್ ಅವರನ್ನು ತಾಲೂಕು ಘಟಕದ ಗೌರವಾಧ್ಯಕ್ಷರನ್ನಾಗಿ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡರವರು ಆದೇಶಿಸಿರುವುದು ಸಂತಸ ತಂದಿದೆ. ವೆಂಕಟೇಶ್ ಅವರು ಸಂಘಟನೆಗೆ ಬಂದಿದ್ದರಿ0ದ ಗಡಿ ಭಾಗದಲ್ಲಿ ಮತ್ತಷ್ಟು ಕನ್ನಡಪರ ಚಟುವಟಿಕೆಗಳನ್ನು ಕೈಗೊಂಡು, ಕನ್ನಡ ಭಾಷೆ ಬಲಿಷ್ಟಗೊಳಿಸಬಹುದು ಎಂದರು.
ಕರವೇ ಗೌರವಾಧ್ಯಕ್ಷ ವೆಂಕಟೇಶ್ ಮಾತನಾಡಿ, ಈ ಭಾಗದಲ್ಲಿ ಕರವೇ ಮಾಡುತ್ತಿರುವ ಕನ್ನಡ ಕೆಲಸಗಳು ಅಭಿನಂದನೀಯ. ತಮಗೆ ಕೊಟ್ಟಿರುವ ಜವಾಬ್ದಾರಿಯನ್ನು ನಿಷ್ಟೆಯಿಂದ ನಿಭಾಯಿಸುತ್ತೇನೆ. ಸಂಘಟನೆ ಜೊತೆ ಕನ್ನಡ ಉಳಿಸಿ, ಬೆಳೆಸಲು ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಮಹಿಳಾಧ್ಯಕ್ಷ ಗಂಗರತ್ನಮ್ಮ , ಪ್ರಧಾನ ಕಾರ್ಯದರ್ಶಿ ರಿಯಾಜ್ ಉಲ್ಲಾ , ತಾಲೂಕು ಸಂಚಾಲಕ ಶಿವಕುಮಾರ್,ಪ್ರಧಾನ ಸಂಚಾಲಕ ಅಶೋಕ್, ಖಜಾಂಚಿ ನಾರಾಯಣ ಸ್ವಾಮಿ, ವಕ್ತಾರ ಕೃಷ್ಣ ನಾಯಕ್, ನಗರ ಘಟಕದ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಶಂಕರ್, ಕಾರ್ಮಿಕ ಘಟಕದ ಸಂಚಾಲಕ ಕೃಷ್ಣಪ್ಪ ಇದ್ದರು.