ವಿಶ್ವಕರ್ಮ ಸಮುದಾಯ ಶೈಕ್ಷಣಿಕ ಅಭಿವೃದ್ಧಿ ಹೊಂದಲಿ
1 min readವಿಶ್ವಕರ್ಮ ಸಮುದಾಯ ಶೈಕ್ಷಣಿಕ ಅಭಿವೃದ್ಧಿ ಹೊಂದಲಿ
ಗೌರಿಬಿದನೂರು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಸಲಹೆ
ಶತಮಾನಗಳಿಂದಲೂ ಸಮಾಜದಲ್ಲಿನ ಪ್ರತಿ ವರ್ಗದ ಜನತೆ ವಿಶ್ವಕರ್ಮ ಸಮುದಾಯದ ಮೇಲೆ ಅವಲಂಭಿತವಾಗಿದ್ದು, ಐತಿಹಾಸಿಕ ಮತ್ತು ಪುರಾಣ ಪ್ರಸಿದ್ದ ದೇವಾಲಯಗಳ ನಿರ್ಮಾಣದಲ್ಲಿ ಪಂಚಕುಲ ಕಸುಬುಗಳಲ್ಲಿ ವಿಶ್ವಕರ್ಮರ ಪಾತ್ರ ಅನನ್ಯವಾಗಿದೆ ಎಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಹೇಳಿದರು.
ಗೌರಿಬಿದನೂರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ಮತ್ತು ವಿಶ್ವಕರ್ಮ ಸಂಘದಿ0ದ ಇಂದು ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿಯಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಶಾಸಕ ಪುಟ್ಟಸ್ವಾಮಿಗೌಡ, ಅನಾದಿ ಕಾಲದಿಂದಲೂ ಯಾವುದೇ ತಂತ್ರಜ್ಞಾನ ಮತ್ತು ವಿಶ್ವ ವಿದ್ಯಾಲಯಗಳ ಸಹಕಾರವಿಲ್ಲದೆ ಕಲೆ ಮತ್ತು ಕರಕುಶಲತೆಯನ್ನು ಮೈಗೂಡಿಸಿಕೊಂಡು ದೇಶಾಧ್ಯಂತ ಕಾಲಾಕೃತಿಗಳನ್ನು ವಿಶ್ವಕರ್ಮರು ನಿರ್ಮಾಣ ಮಾಡಿದ್ದಾರೆ ಎಂದರು.
ವಿಶ್ವಕರ್ಮ ಸಮುದಾಯ ಜನಸಂಖ್ಯೆಯಲ್ಲಿ ವಿರಳವಾಗಿದ್ದರೂ ಕೌಶಲ್ಯ ನಿಪುಣತೆಯಿಂದ ವಿಶ್ವವಿಖ್ಯಾತರಾಗಿದ್ದಾರೆ. ವಿಶ್ವಕರ್ಮ ಸಮುದಾಯದವರು ತಮ್ಮ ವೃತ್ತಿ ಕೌಶಲ್ಯದ ಜೊತೆಗೆ ತಮ್ಮ ಮಕ್ಕಳಿಗೆ ಶೈಕ್ಷಣಿಕವಾಗಿ ಒತ್ತು ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು, ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡುತ್ತಿರುವುದಾಗಿ ಈ ಸಂದರ್ಭದಲ್ಲಿ ಶಾಸಕರು ತಿಳಿಸಿದರು.
ತಹಸೀಲ್ದಾರ್ ಮಹೇಶ್ ಎಸ್. ಪತ್ರಿ ಮಾತನಾಡಿ, ವಿಶ್ವಕರ್ಮ ಎಂದರೆ ಋಗ್ವೇದದಲ್ಲಿ ದೇವರ ನಿರ್ಮಾತೃ ಎಂದರ್ಥ, ಮಹಾರತದಲ್ಲಿಯೂ ವಿಶ್ವಕರ್ಮದ ಬಗ್ಗೆ ಉಖವಿದೆ, ಕಬ್ಬಿಣ, ಇಟ್ಟಿಗೆ, ತಾಮ್ರ, ಕಂಚು, ಚಿನ್ನ ಸೇರಿದಂತೆ ಪಂಚ ಕಸುಬುಗಳ ನಿರ್ಮಾತೃಗಳು ಈ ವಿಶ್ವಕರ್ಮ ಸಮುದಾಯದವರಾಗಿದ್ದಾರೆ. ವಿಶ್ವದ ಪ್ರಪ್ರಥಮ ಎಂಜಿನಿಯರ್ ವಿಶ್ವಕರ್ಮ ಸಮುದಾಯದವರಾಗಿದ್ದಾರೆ. ಈ ಸಮುದಾಯದವರು ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದುವ0ತೆ ತಿಳಿಸಿದರು.
ವಿಶ್ವಕರ್ಮ ಸಮುದಾಯದ ತಾಲೂಕು ಅಧ್ಯಕ್ಷ ಎಂ.ಎನ್. ರಾಧಾಕೃಷ್ಣ ಮಾತನಡಿ, ವಿಶ್ವಕರ್ಮ ಜಯಂತಿ ಎಲ್ಲ ವರ್ಗಗಳ ಜನತೆಗೆ ಸಂಬ0ಧಿಸಿದ್ದು, ಪಂಚ ಕಸುಬುಗಳ ನಿರ್ಮಾತೃಗಳು ಮತ್ತು ಸೃಷ್ಟಿಕರ್ತರಾದ ವಿಶ್ವಕರ್ಮ ಎಲ್ಲಾ ರೀತಿಯ ವಸ್ತುಧಳ ನಿರ್ಮಾಣಕ್ಕೆ ಖ್ಯಾತಿ ಪಡೆದಿದ್ದಾರೆ, ಈ ಸಮುದಾಯ ಸಂಘಟಿತರಾಗಿ ಆರ್ಥಿಕ , ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಮುನ್ನೆಲೆಗೆ ಬರಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರನ್ನು ಶಾಸಕರು ಗೌರವಿಸಿದರು. ನಗರಸಭೆ ಪೌರಾಯುಕ್ತೆ ಡಿ.ಎಂ.ಗೀತಾ, ಬಿಇಒ ಶ್ರೀನಿವಾಸಮೂರ್ತಿ, ನಗರಸಭೆ ಅಧ್ಯಕ್ಷ ಲಕ್ಷಿನಾರಾಯಣ್, ಉಪಾಧ್ಯಕ್ಷ ಫರೀದ್, ಸದಸ್ಯರಾದ ಮಂಜುಳ, ಪ್ರಮೀಳಾ ರಾಧಾಕೃಷ್ಣ, ಮುಖಂಡರಾದ ಆಕಾಶ್, ಮಹೇಂದ್ರ, ಪವನ್ ಇದ್ದರು.