ವಿಜಯಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ
1 min readವಿಜಯಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ
ಸಾರ್ವಜನಿಕರಿಗೆ ಉಚಿತ ಟೀ ವಿತರಿಸಿ ಹುಟ್ಟುಹಬ್ಬ ಆಚರಣೆ
ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜಿ ಅವರ 75 ಜನ್ಮದಿನಾಚರಣೆ ಪ್ರಯುಕ್ತ ಬಿಜೆಪಿಯಿಂದ ಉಚಿತ ಟೀ ವಿತರಣೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಒಬಿಸಿ ಅಧ್ಯಕ್ಷ ಕನಕರಾಜು ಹೇಳಿದರು.
ವಿಜಯಪುರ ಪಟ್ಟಣದ ಶಿವ ಗಣೇಶ ಸರ್ಕಲ್‌ನಲ್ಲಿ ವಿಜಯಪುರ ಟೌನ್ ಬಿಜೆಪಿ ಹಾಗೂ ಜಿಲ್ಲಾ ಒಬಿಸಿಯಿಂದ ಚಾಯ್ ವಾಲಾ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಟೀ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಒಬಿಸಿ ಅಧ್ಯಕ್ಷ ಕನಕರಾಜು, ದೇಶದ ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆ ಆರೋಗ್ಯ ಮತ್ತು ಐಶ್ವರ್ಯ ನೀಡಿ ದೇಶ ಸೇವೆ ಮಾಡಲಿ ಎಂದು ಅವರ ಹುಟ್ಟು ಹಬ್ಬದ ಪ್ರಯುಕ್ತ ಟೀ ವಿತರಣಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಸಾರ್ವಜನಿಕರು ಮೋದಿಜಿಗೆ ಆಶೀರ್ವಾದ ಮಾಡಬೇಕೆಂದು ಕೋರಿದರು.
ವಿಶ್ವನಾಥಪುರ ಗ್ರಾಮ ಪಂಚಾಯತಿ ಸದಸ್ಯ ವಿನಯ್ ಮಾತನಾಡಿ, ದೇಶದ ಪ್ರಧಾನಿ ನರೇಂದ್ರ ಮೋದಿಜಿ ಅವರು ಛಾಯ್‌ವಾಲಾ ಎಂದೇ ಪ್ರಖ್ಯಾತಿಯಾಗಿದ್ದರು. ಅವರ ಪ್ರಖ್ಯಾತಿಯನ್ನು ಎಲ್ಲರೂ ಸ್ಮರಿಸಬೇಕು, ಅವರು ಇನ್ನು ಹೆಚ್ಚು ಕಾಲ ಬದುಕಿ ಬಾಳಲಿ ಎಂದು ಹಾರೈಸುತ್ತಾ ಅವರ ಹುಟ್ಟು ಹಬ್ಬದ ಪ್ರಯುಕ್ತ ಟೀ ವಿತರಣಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಟೌನ್ ಬಿಜೆಪಿ ಅಧ್ಯಕ್ಷ ಆರ್.ಸಿ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಹೆಗಡೆ, ಸೊನ್ನೇ ಗೌಡ, ಸುರೇಶ, ಮನೆ ಕೃಷ್ಣಪ್ಪ, ಶಾಮಣ್ಣ ಇದ್ದರು.