ನಂಜನಗೂಡು ನಗರ ಸಭೆಯಲ್ಲಿ ಸವಲತ್ತು ವಿತರಣೆ
1 min readನಂಜನಗೂಡು ನಗರ ಸಭೆಯಲ್ಲಿ ಸವಲತ್ತು ವಿತರಣೆ
ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣೆ
ನಂಜನಗೂಡು ನಗರಸಭೆಯಿಂದ ೨೦೨೦-೨೧ನೇ ಸಾಲಿನ ನಗರಸಭಾ ನಿಧಿಯಿಂದ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ಸಲಕರಣೆಗಳನ್ನು ಇಂದು ವಿತರಣೆ ಮಾಡಲಾಯಿತು.
ನಂಜನಗೂಡು ನಗರಸಭಾ ಆವರಣದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಸುಮಾರು ೧೫ ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ನೂರಾರು ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಐರನ್ ಬಾಕ್ಸ್, ಮರಗೆಲಸ ಹಾಗೂ ಕ್ಷೌರಿಕರಿಗೆ ಬೇಕಾದ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು. ಶಾಸಕ ದರ್ಶನ್ ಧ್ರ‍್ರುವ ನಾರಾಯಣ್, ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಸಾಂಕೇತಿಕವಾಗಿ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ಸಲಕರಣೆಗಳನ್ನು ವಿತರಣೆ ಮಾಡಿದರು.
ಸವಲತ್ತು ವಿತರಣೆ ಮಾಡಿ ಶಾಸಕ ದರ್ಶನ್ ದ್ರುವ ನಾರಾಯಣ್ ಹಾಗೂ ನಗರಸಭಾ ನೂತನ ಅಧ್ಯಕ್ಷ ಶ್ರೀಕಂಠ ಸ್ವಾಮಿ ಮಾತನಾಡಿ, ಬಡವರು ಹಾಗೂ ಮಹಿಳೆಯರು ಬದುಕು ಕಟ್ಟಿಕೊಳ್ಳಲು ನಗರಸಭೆಯಿಂದ ಹಲವು ಸವಲತ್ತುಗಳನ್ನು ವಿತರಣೆ ಮಾಡಲಾಗುತ್ತಿದೆ. ಫಲಾನುಭವಿಗಳು ಇದರ ಸದುಪಯೋಗ ಪಡೆದು ಆರ್ಥಿಕವಾಗಿ ಮುಂದೆ ಬನ್ನಿ ಎಂದರು. ಅಲ್ಲದೆ ಮುಂದೆಯೂ ಫಲಾನುಭವಿಗಳನ್ನು ಗುರುತಿಸಿ ಇನ್ನಷ್ಟು ಸವಲತ್ತುಗಳನ್ನು ನೀಡಲಾಗುತ್ತದೆ, ಫಲಾನುಭವಿಗಳ ಪಟ್ಟಿ ಮಾಡುವಂತೆ ಸದಸ್ಯರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭಾ ಉಪಾಧ್ಯಕ್ಷೆ ರಿಯಾನ ಬಾನು, ಪೌರಾಯುಕ್ತ ನಂಜು0ಡಸ್ವಾಮಿ ಸೇರಿದಂತೆ ನಗರಸಭಾ ಸದಸ್ಯರು ಇದ್ದರು.