ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿ ವಿಶ್ವಕರ್ಮ ಜಯಂತ್ಯುತ್ಸವ
1 min readಚಿಕ್ಕಬಳ್ಳಾಪುರದಲ್ಲಿ ಅದ್ಧೂರಿ ವಿಶ್ವಕರ್ಮ ಜಯಂತ್ಯುತ್ಸವ
ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಕಲಾ ತಂಡಗಳ ಮೆರವಣಿಗೆ
ಜಿಲ್ಲಾಡಳಿತದಿಂದಲೂ ವಿಶ್ವಕರ್ಮ ಜಯಂತಿ ಆಚರಣೆ
ವಿಶ್ವ ಬ್ರಹ್ಮ ವಿಶ್ಕರ್ಮ ಅವರ ಜಯಂತ್ಯುತ್ಸವ ಇಂದು ಜಿಲ್ಲಾದ್ಯಂತ ಅದ್ಧೂರಿಯಾಗಿ ಆಚರಿಸಲಾಯಿತು. ವಿಶ್ವ ಕರ್ಮ ಸಮುದಾಯದ ಮುಖಂಡರು ಮಹಿಳೆಯರು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಜಗತ್ತಿನ ಮೊದಲ ಎಂಜಿನಿಯರ್ ವಿಶ್ವಕರ್ಮರ ಜಯಂತಿಗೆ ಮೆರುಗು ನೀಡಿದರು.
ಇಂದು ವಿಶ್ವಕರ್ಮ ಜಯಂತ್ಯುತ್ಸವ. ಜಿಲ್ಲೆಯಾದ್ಯಂತ ಸರ್ಕಾರಿ ಕಾರ್ಯಕ್ರಮವಾಗಿ ವಿಶ್ವಕರ್ಮ ಜಯಂತಿಯನ್ನು ಆಚರಿಸಿದ್ದು, ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾಕರಿಗಳ ಅಧ್ಯಕ್ಷತೆಯಲ್ಲಿ ವಿಶ್ವಕರ್ಮ ಜಯಂತಿಯನ್ನು ದ್ಧೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಅಧಿಕಾರಿಗಳು ಭಾಗವಹಿಸಿದ್ದರು.
ಇನ್ನು ಪೆರೇಸಂದ್ರದ ಸೇತುವೆಯ ಮೇಲೆ ಇಂದು ಅದ್ಧೂರಿಯಾಗಿ ವಿಶ್ವಕರ್ಮ ಜಯಂತ್ಯುತ್ಸವವನ್ನು ವಿಶ್ವಕರ್ಮ ಸಮುದಾಯದ ಯುವಕರಿಂದ ಆಯೋಜಿಸಲಾಗಿತ್ತು. ಪೆರೇಸಂದ್ರ ಸೇತುವೆಯ ಮೇಲೆ ಆಯೋಜಿಸಿದ್ದ ಜಯಂತಿಯಲ್ಲಿ ವಿಶ್ವಕರ್ಮ ಅವರ ಭಾವಚಿತ್ರವನ್ನು ಇಟ್ಟು ಪುಷ್ಪಾರ್ಚನೆ ಮಾಡುವ ಮೂಲಕ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಪೆರೇಸಂದ್ರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ವಿಶ್ವಕರ್ಮ ಸಮುದಾಯದ ಯುವಕರಿಂದ ಇಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇನ್ನು ಚಿಕ್ಕಬಳ್ಳಾಪುರ ವಿಶ್ವಕರ್ಮ ಉತ್ಸವ ಸಮಿತಿಯಿಂದ ಚಿಕ್ಕಬಳ್ಳಾಪುರದಲ್ಲಿ ವಿಶ್ವಕರ್ಮ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ನಗರದ ಕಂದವಾರಪೇಟೆಯಲ್ಲಿರುವ ಕಾಳಿಕಾಂಬ ಕಮ್ಮಟೇಶ್ವರ ದೇವಾಲಯದಲ್ಲಿ ಇಂದು ವಿಶ್ವಕರ್ಮ ಜಯಂತಿ ಪ್ರಯುಕ್ತ ಮಹಿಳಾ ಸಮಿತಿಯಿಂದ ಹೋಮ ಆಯೋಜಿಸಲಾಗಿತ್ತು. ಲೋಕ ಕಲ್ಯಾಣಕ್ಕಾಗಿ ನಡೆದ ಈ ಹೋಮದಲ್ಲಿ ವಿಶ್ವ ಕರ್ಮ ಸಮುದಾಯದ ಮಹಿಳಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.
ನಗರದ ಕನ್ಯಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಅನ್ನದಾಸೋಹ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೆಳಗ್ಗೆಯಿಂದ ಸಂಜೆಯವರೆಗೂ ಈ ಅನ್ನದಾಸೋಹ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಸಂಜೆ ೪ ಗಂಟೆ ಸುಮಾರಿಗೆ ವಿಶ್ವಕರ್ಮ ಮಹರ್ಷಿಗಳ ಮೆರವಣಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ಕಂದವಾರಪೇಟೆಯ ಕಾಳಿಕಾಂಬ ಕಮ್ಮಟೇಶ್ವರ ದೇವಾಲಯದಿಂದ ಆರಂಭವಾದ ಮೆರವಣಿಗೆ ನಗರ್ತರಪೇಟೆ, ಗಂಗಮ್ಮಗುಡಿ ರಸ್ತೆ ಬಜಾರ್ ರಸ್ತೆ ಮೂಲಕ ಬಿಬಿ ರಸ್ತೆ ಸೇರಿ ನಂತರ ಬಜಾರ್ ರಸ್ತೆ ಮೂಲಕ ಕಂದವಾರ ಪೇಟೆಯ ಕಾಳಿಕಾಂಬ ಕಮ್ಮಟೇಶ್ವರ ದೇವಾಲಯದ ಬಳಿಯೇ ಮೆರವಣಿಗೆ ಮುಕ್ತಾಯವಾಯಿತು.
ಚಿಕ್ಕಬಳ್ಳಾಪುರದಲ್ಲಿ ನಡೆದ ವಿಶ್ವ ಕರ್ಮ ಜಯಂತ್ಯುತ್ಸವದಲ್ಲಿ ವಿಶ್ವಕರ್ಮ ಉತ್ಸವ ಸಮಿತಿ ಅಧ್ಯಕ್ಷ ಸಿ.ಬಿ. ನವೀನ್ ಕುಮಾರ್, ಗೌರವಾಧ್ಯಕ್ಷ ರಾಮಕೃಷ್ಣಾಚಾರಿ, ನಂಜು0ಡಾಚಾರಿ, ಉಪಾಧ್ಯಕ್ಷ ಎ. ನಂಜು0ಡಾಚಾರಿ, ಆರ್. ಬ್ರಹ್ಮಚಾರಿ, ಹರೀಶ್ ಕುಮಾರ್, ಮುರಳೀಧರ, ನರೇಂದ್ರಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು.