ಗಣೇಶನ ವಿಸರ್ಜನೆ ಸಂಭ್ರಮದಲ್ಲಿ ಮಿಂದೆದ್ದ ಜನ
1 min readಅದ್ಧೂರಿ ಗೌರಿ ಗಣೇಶನ ಮೆರವಣಿಗೆ
ಗಣೇಶನ ವಿಸರ್ಜನೆ ಸಂಭ್ರಮದಲ್ಲಿ ಮಿಂದೆದ್ದ ಜನ
ನಂಜನಗೂಡಿನಲ್ಲಿ ವಿನಾಯಕ ವಿಸರ್ಜನೆ
ಗಣೇಶನ ವಿಸರ್ಜನೆ ಸಂಭ್ರಮದಲ್ಲಿ ಗ್ರಾಮಸ್ಥರು ಮಿಂದೆದ್ದಿದ್ದಾರೆ. ನಂಜನಗೂಡು ತಾಲ್ಲೂಕಿನ ಹರತಲೆ ಗ್ರಾಮದಲ್ಲಿ ಗೌರಿ ಗಣೇಶನ ಮೆರವಣಿಗೆ ವಿಜೃಂಭಣೆಯಿ0ದ ಜರಗಿತು. ಮಹರ್ಷಿ ವಾಲ್ಮೀಕಿ ಯುವಕರ ಸಂಘ ಮತ್ತು ಚಿಕ್ಕರಂಗನಾಯಕ ಅಭಿಮಾನಿಗಳ ಬಳಗದಿಂದ ಗೌರಿ ಗಣೇಶನ ಮೂರ್ತಿಯನ್ನು ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು.
ಗಣೇಶನ ವಿಸರ್ಜನೆ ಸಂಭ್ರಮದಲ್ಲಿ ಗ್ರಾಮಸ್ಥರು ಮಿಂದೆದ್ದಿದ್ದಾರೆ. ನಂಜನಗೂಡು ತಾಲ್ಲೂಕಿನ ಹರತಲೆ ಗ್ರಾಮದಲ್ಲಿ ಗೌರಿ ಗಣೇಶನ ಮೆರವಣಿಗೆ ವಿಜೃಂಭಣೆಯಿ0ದ ಜರಗಿತು. ಗೌರಿ-ಗಣೇಶನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಿ.ಚಿಕ್ಕರಂಗನಾಯಕ ಗಣೇಶನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆಗೆ ಅದ್ದೂರಿಯಾಗಿ ಚಾಲನೆ ನೀಡಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಉದ್ದಕ್ಕೂ ಪಟಾಕಿ ಸಿಡಿಸಿ, ಯುವಕರು ಕುಣಿದು ಕುಪ್ಪಳಿಸಿದರು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿ, ಮತ್ತಷ್ಟು ಮೆರಗು ತಂದವು. ನಂಜನಗೂಡು ಗ್ರಾಮಾಂತರ ಪೊಲೀಸರ ಬಿಗಿ ಬಂದೋಬಸ್ತ್ ವ್ಯವಸ್ಥೆಯಲ್ಲಿ ಗ್ರಾಮದ ಕೆರೆಯಲ್ಲಿ ಗಣೇಶನನ್ನು ವಿಸರ್ಜನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಿಕ್ಕರಂಗದಾಯಕ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಂತರಾಜ್, ಸದಸ್ಯರಾದ ಗೋವಿಂದರಾಜು, ಚಿನ್ನಸ್ವಾಮಿ ನಾಯಕ, ರಾಜು, ಮರಿಗಂಡ ನಾಯಕ ಇದ್ದರು.