ಸರ್ಕಲ್ ಮಾರಮ್ಮ ದೇವರ ಜಾತ್ರಾ ಮಹೋತ್ಸವ ಅದ್ದೂರಿ
1 min readಸರ್ಕಲ್ ಮಾರಮ್ಮ ದೇವರ ಜಾತ್ರಾ ಮಹೋತ್ಸವ ಅದ್ದೂರಿ
68 ವರ್ಷದಿಂದ ಸರ್ಕಲ್ ಮಾರಮ್ಮ ಸೇವಾ ಸಮಿತಿ ಕಾರ್ಯಕ್ರಮ
ಸತತ ೧೧ ದಿನಗಳ ಕಾಲ ನಡೆಯುವ ಸರ್ಕಲ್ ಮಾರಮ್ಮ ದೇವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆದು, ಮಂಡಳಿಯಿ0ದ ಸಾವಿರ ಸುಮಂಗಳಿಯರಿಗೆ ಅರಿಶಿನ ಕುಂಕುಮ ನೀಡಿ ದೇವತೆಗಳ ದರ್ಶನ ಪಡೆದ ಘಟನೆ ಇಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಜೂನಿಯರ್ ಕಾಲೇಜು ಮುಂಬಾಗ ಸತತ ೬೮ ವರ್ಷಗಳಿಂದ ಶ್ರೀ ಸರ್ಕಲ್ ಮಾರಮ್ಮ ಸೇವಾ ಸಮಿತಿಯಿಂದ ಶ್ರೀ ಜಾಲಾರಿ ಗಂಗಮ್ಮ, ಶ್ರೀ ಸಪಲಮ್ಮ, ಶ್ರೀ ಮುತ್ಯಾಲಮ್ಮ, ಶ್ರೀ ಪಟಾಲಮ್ಮ ದೇವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದ್ದು, ಈ ವರ್ಷ ಕಾರ್ಯಕ್ರಮ ಸಂಪನ್ನವಾಯಿತು. ಸತತ 11 ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವ ಬಿಬಿ ರಸ್ತೆಯ ಪಕ್ಕದ¯್ಲೆ ಬೃಹತ್ ದೇವಾಲಯದ ರೀತಿ ನಿರ್ಮಾಣ ಮಾಡಿ ದೇವರನ್ನು ಪಟ್ಟಕ್ಕೆ ಕೂರಿಸಿ ಪ್ರತಿನಿತ್ಯ ಒಂದೊ0ದು ಪೂಜೆ ಮಾಡಲಾಗುತ್ತದೆ.
ಇಂದು ೧೦ನೇ ದಿನವಾಗಿದ್ದು, ಪ್ರತಿಷ್ಠಿತ ರಾಯಲುಪಾಡು ಶ್ರೀ ವೆಲ್ಲಾಲ ಸತ್ಯನಾರಾಯಣ ಶಾಸ್ತಿಗಳು ದೇವರ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ವಿಶೇಷವಾಗಿ ಸುಮಂಗಳಿಯರಿಗೆ ಅರಿಶಿನ ಕುಂಕುಮ ನೀಡಿದ್ದು, ಸ್ವಾಮಿಗಳು ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸಾವಿರಾರು ಸುಮಂಗಳಿಯರಿಗೆ ಶ್ರೀ ಸರ್ಕಲ್ ಮಾರಮ್ಮ ಸೇವಾ ಸಮಿತಿಯಿಂದ ಅರಿಶಿನ ಕುಂಕುಮ ಕೊಟ್ಟು ಹಾರೈಸಲಾಯಿತು.