ಎಂಜಿ ರಸ್ತೆಯಲ್ಲಿ ಘರ್ಜಿಸಿದ ಇಟಾಚಿ, ಜೆಸಿಬಿಗಳು
1 min readಎಂಜಿ ರಸ್ತೆ ತೆರುವು ಕಾರ್ಯಾಚರಣೆ ಆರಂಭ
ಬೆಳ್ಳ0 ಬೆಳಗ್ಗೆ ಸರ್ಕಾರಿ ಕಟ್ಟಡಗಳ ಮೇಲೆ ಜೆಸಿಬಿಗಳ ದಾಳಿ
ಎಂಜಿ ರಸ್ತೆಯಲ್ಲಿ ಘರ್ಜಿಸಿದ ಇಟಾಚಿ, ಜೆಸಿಬಿಗಳು
ಅಂತೂ ಇಂತೂ ಚಿಕ್ಕಬಳ್ಳಾಪುರ ಮುಖ್ಯರಸ್ತೆ ತೆರುವು ಕಾರ್ಯಾಚರಣೆಗೆ ಮುಹೋರ್ತ ಕೂಡಿ ಬಂದಿದೆ. ಬೆಳ್ಳಂ ಬೆಳಗ್ಗೆ ಇಟಾಚಿ, ಜೆಸಿಬಿಗಳು ಎಂಜಿ ರಸ್ತೆಯಲ್ಲಿ ಘರ್ಜಿಸುತ್ತಿವೆ. ತೆರುವು ಕಾರ್ಯಾಚರಣೆಯ ಮೊದಲ ದಿನವಾದ ಇಂದು ಸರ್ಕಾರಿ ಕಟ್ಟಡಗಳ ಒತ್ತುವರಿ ತೆರುವು ಮಾಡುವ ಕಾರ್ಯ ನಡೆಯಿತ್ತಿದೆ.
ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ಒತ್ತುವರಿ ತೆರುವು ಕಾರ್ಯಾಚರಣೆಗೆ ಮುಹೂರ್ತ ಆರಂಭವಾಗಿದೆ. ಇಂದು ಬೆಳಗ್ಗೆ ಎಂಜಿ ರಸ್ತೆಯಲ್ಲಿರುವ ಸರ್ಕಾರಿ ಕಟ್ಟಡಗಳ ತೆರುವು ನಡೆಯುತ್ತಿದೆ. ಇಂದು ತೆರುವು ಕಾರ್ಯಾಚರಣೆ ಆರಂಭಿಸುವ ಬಗ್ಗೆ ನೆನ್ನೆಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು. ಇಂದು ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದಾರೆ.
ಮೂರು ದಿನಗಳ ಮೊದಲೇ ರಸ್ತೆ ಒತ್ತುವರಿ ತೆರುವು ಕಾರ್ಯಾಚರಣೆಗೆ ಭದ್ರತೆ ಒದಗಿಸುವಂತೆ ಕೋರಿ ಪೊಲೀಸ್ ಇಲಾಖೆಗೆ ಹೆದ್ದಾರಿ ಪ್ರಾಧಿಕಾರದಿಂದ ಮನವಿ ಮಾಡಲಾಗಿತ್ತು. ಎರಡು ದಿನಗಳ ಹಿಂದೆಯೇ ಎಂಜಿ ರಸ್ತೆಯಲ್ಲಿರುವ ವಿದ್ಯುತ್ ಕಂಬಗಳ ತೆರವಿನ ಬಗ್ಗೆ ಬೆಸ್ಕಾಂಗೆ ಅದೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮನವಿ ಮಾಡಿದ್ದರು. ಇನ್ನು ಶುಕ್ರವಾರ ಸಂಜೆ ಅದೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ, ಖಾಸಗಿ ಕಟ್ಟಡಗಳ ಮಾಲೀಕರ ಸಹಕಾರ ಕೋರಿದ್ದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಸರಿಗಳು ಕಳೆದ ಎರಡು ತಿಂಗಳ ಹಿಂದಿನಿ0ದಲೇ ರಸ್ತೆ ಒತ್ತುವರಿ ತೆರುವು ಮಾಡುವ ಸಿದ್ಧತೆ ಕೈಗೊಂಡಿದ್ದರು. ಪೂರ್ವ ಸಿದ್ಧತೆಗಳ ನಡುವೆಯೇ ಇಂದು ತೆರುವು ಕಾರ್ಯಾಚರಣೆ ಆರಂಭಿಸಲಾಗಿದೆ. ಎಂಜಿ ರಸ್ತೆಯಲ್ಲಿ ಡಿವೈಎಸ್ ಪಿ ಕಚೇರಿ ಮುಂದಿ ಕಾಂಪೌ0ಡ್, ಅರಣ್ಯ ಇಲಾಖೆ ಕಚೇರಿ ಕಾಂಪೌ0ಡ್ ಸೇರಿದಂತೆ ಇತರೆ ಸರ್ಕಾರಿ ಕಚೇರಿಗಳ ಒತ್ತುವರಿ ತೆರುವುಗೊಳಿಸಲಾಗುತ್ತಿದೆ.
ನಾಳೆಯಿಂದ ಖಾಸಗಿ ಕಟ್ಟಡಗಳ ತೆರುವು ಆರಂಭವಾಗಲಿದೆ. ಈಗಾಗಲೇ ಹಲವು ಖಾಸಗಿ ಕಟ್ಟಡಗಳ ಮಾಲೀಕರು ಸ್ವಯಂ ಪ್ರೇರಿತವಾಗಿ ತಮ್ಮ ಕಟ್ಟಡಗಳ ತೆರುವು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗುರ್ತಿಸಿದ್ದ ವರೆಗೂ ಕಟ್ಟಡಗಳ ತೆರುವು ಮಾಡಿಕೊಳ್ಳುತ್ತಿದ್ದು, ತೆರುವು ಮಾಡದ ಕಟ್ಟಡಗಳನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೆ ನಾಳೆಯಿಂದ ತೆರುವು ಮಾಡಲಿದ್ದಾರೆ.