ಬೆಳ್ಳಂಬೆಳಿಗ್ಗೆ ನಗರಸಭೆ ವಾರ್ಡ್ಗಳಿಗೆ ಶಾಸಕರ ಭೇಟಿ
1 min readಬೆಳ್ಳಂಬೆಳಿಗ್ಗೆ ನಗರಸಭೆ ವಾರ್ಡ್ಗಳಿಗೆ ಶಾಸಕರ ಭೇಟಿ
ಶಾಸಕ ದರ್ಶನ್ ಧ್ರುವನಾರಾಯಣ್ ದಿಢೀರ್ ಭೇಟಿ
ಇಂದು ಬೆಳ್ಳಂಬೆಳಿಗ್ಗೆ ನಂಜನಗೂಡು ನಗರಸಭಾ ವ್ಯಾಪ್ತಿಯ ವಾರ್ಡ್ ಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ನಂಜನಗೂಡಿನ ಶ್ರೀರಾಂಪುರ, ಶಂಕರಪುರ, ಆನಂದಪುರ, ನೀಲಕಂಠ ನಗರ ಬಡಾವಣೆಗಳಿಗೆ ಮುಂಜಾನೆಯೇ ಭೇಟಿ ನೀಡಿದ ಶಾಸಕ ದರ್ಶನ್ ಧ್ರುವನಾರಾಯಣ್, ಜನರ ಸಮಸ್ಯೆ ಆಲಿಸಿದ್ದಾರೆ. ವಾರ್ಡ್ ಗಳಲ್ಲಿರುವ ಚರಂಡಿ ಸಮಸ್ಯೆ, ಯುಜಿಡಿ, ಮನೆ ಖಾತೆಗಳು, ಕುಡಿಯುವ ನೀರಿನ ಬಿಲ್ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂದವು. ನಂತರ ಪಾರ್ಕ್ ಒಳ ಆವರಣದಲ್ಲಿರುವ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಭಿವೃದ್ಧಿಯಾಗದ ಗ್ರಂಥಾಲಯ ಬಗ್ಗೆ ಅಧಿಕಾರಿಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ತರಾಟೆ ತೆಗೆದುಕೊಂಡರು. ಬಳಿಕ ಮಾತನಾಡಿದ ಅವರು, ಸಾಕಷ್ಟು ಯುವಕರಿಗೆ ನಿರುದ್ಯೋಗ ಸಮಸ್ಯೆ ಕಾಡುತ್ತಿದ್ದು, ಅವರಿಗೆ ಉದ್ಯೋಗ ಕಲ್ಪಿಸಲಾಗುವುದು. ಬಡಾವಣೆಗಳಲ್ಲಿರುವ ಯುಜಿಡಿ ಸಮಸ್ಯೆ ಆದಷ್ಟು ಬೇಗ ಬಗೆಹರಿಸಲಾಗುವುದು. ಏನೇ ಸಮಸ್ಯೆಗಳಿದ್ದರೂ ದೂರವಾಣಿ ಮೂಲಕ ಸಂಪರ್ಕಿಸಿ, ಗಮನಕ್ಕೆ ತರುವಂತೆ ಶಾಸಕರು ಮನವಿ ಮಡಿದರು. ಈ ಸಂದರ್ಭದಲ್ಲಿ ಆಯುಕ್ತ ನಂಜುAಡಸ್ವಾಮಿ, ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ, ಉಪಾಧ್ಯಕ್ಷೆ ರಿಹಾನ ಬಾನು, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಇದ್ದರು.