ಸಂಸ್ಕೃತ ಕಲಿಕೆಗೆ ಮುಂದಾಗಲು ಸದಾಶಿವ ಕೆ ಭಟ್ ಸಲಹೆ
1 min readಸಂಸ್ಕೃತ ಭಾಷೆ ಕಲಿಕೆಯಿಂದ ಜ್ಞಾನ ವಿಸ್ತಾರ
ಸಂಸ್ಕೃತ ಕಲಿಕೆಗೆ ಮುಂದಾಗಲು ಸದಾಶಿವ ಕೆ ಭಟ್ ಸಲಹೆ
ಸಂಸ್ಕೃತ ಭಾಷೆ ಕಲಿಕೆ ಮನುಷ್ಯನನ್ನು ಸುಸಂಸ್ಕೃತನನ್ನಾಗಿಸುತ್ತದೆ. ಎಲ್ಲ ವಿದ್ಯಾರ್ಥಿಗಳು ಸಂಸ್ಕೃತವನ್ನು ಹೆಚ್ಚು ಓದುವ ಮೂಲಕ ಸಂಸ್ಕೃತ ಭಾಷೆ ನಮ್ಮದಾಗಿಸಿಕೊಳ್ಳಬೇಕು, ಇತರರಿಗೂ ಈ ವಿದ್ಯೆ ಮುಟ್ಟಿಸಬೇಕು ಎಂದು ನಿವೃತ್ತ ಸಂಸ್ಕೃತ ಶಿಕ್ಷಕ ಸದಾಶಿವ ಕೆ ಭಟ್ ತಿಳಿಸಿದರು.
ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ಹಾಗೂ ಶ್ರೀ ಶಂಕರ ಭಾರತಿ ಸಂಸ್ಕೃತ ಪಾಠಶಾಲೆ ಸಹಯೋಗದಲ್ಲಿ ಆಯೋಜಿಸಿದ್ದ ಅಸ್ಮಾಕಂ ಸಂಸ್ಕೃತ ಕಾರ್ಯಕ್ರಮದಲ್ಲಿ ಭು ನಿವೃತ್ತ ಸಂಸ್ಕೃತ ಶಿಕ್ಷಕ ಸದಾಶಿವ ಕೆ ಭಟ್ ಮಾತನಾಡಿ, ಸಂಸ್ಕೃತದಿ0ದ ಸಾಕಷ್ಟು ಪ್ರಯೋಜನಗಳು ಇವೆ. ಸಂಸ್ಕೃತ ಅತ್ಯಂತ ಸಮೃದ್ಧವಾದ ಭಾಷೆ. ಅದರ ಆಳವಾದ ಅಧ್ಯಯನದಿಂದ ನಮ್ಮ ಜ್ಞಾನ ವಿಸ್ತಾರವಾಗುತ್ತದೆ. ಅನೇಕ ಭಾಷೆಗಳಿಗೆ ಸಂಸ್ಕೃತ ವೇ ಮೂಲ ಎಂದು ವಿವರವಾಗಿ ತಿಳಿಸಿದರು.
ಶಂಕರ ಭಾರತಿ ಸಂಸ್ಕೃತ ಪಾಠಶಾಲೆ ಮುಖ್ಯ ಶಿಕ್ಷಕ ಬಾಲಸುಬ್ರಹ್ಮಣ್ಯಂ ಮಾತನಾಡಿ, ದೇಶದಲ್ಲಿ ಪರಕೀಯರು ಬರುವ ಮೊದಲು ಎಲ್ಲರಿಗೂ ಸಂಸ್ಕೃತ ಭಾಷೆಯನ್ನು ಮಾತನಾಡುತ್ತಿದ್ದರು. ಪಾಶ್ಚಿಮಾತ್ಯ ಸಂಸ್ಕೃತಿ ಬಂದಮೇಲೆ ಸಂಸ್ಕೃತ ಭಾಷೆ ಮರೆತು ಹೋಗಿದ್ದಾರೆ. ಪುರಾತನ ಸಾವಿರಾರು ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿ ಇವೆ ಇವುಗಳನ್ನು ಗಣಿತ, ವಿಜ್ಞಾನ, ಬಾಹ್ಯಾಕಾಶ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಬಳಸುತ್ತಿದ್ದಾರೆ. ಸೋಮೇನಹಳ್ಳಿ ಸಂಸ್ಕೃತ ಶಾಲೆಗೆ ರಾಜ್ಯಮಟ್ಟದ ಉತ್ತಮ ಶಾಲೆ ಪ್ರಶಸ್ತಿಯನ್ನು ಎರಡು ಬಾರಿ ಪಡೆದುಕೊಂಡ ಹೆಮ್ಮೆ ಇದೆ. ಎಲ್ಲರೂ ಸಂಸ್ಕೃತ ಭಾಷೆಯನ್ನು ಅದ್ಯಯನ ಮಾಡಬೇಕು ಎಂದು ತಿಳಿಸಿದರು.
ಸೋಮೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಿಂದ ಮುಖ್ಯರಸ್ತೆಯಲ್ಲಿ ಭಿತ್ತಿ ಪತ್ರಗಳು ಹಿಡಿದು ಸಂಸ್ಕೃತ ಘೋಷಣೆಗಳನ್ನು ಕೂಗುತ್ತಾ ಜಾಥಾ ನಡೆಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಮಂಜುನಾಥ, ಸೋಮೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಮ್ ಮೋಹನ್, ಪಿ.ಎಂ ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಾಗಲಿಂಗಪ್ಪ ಇದ್ದರು.