ಕಾರ್ಮಿಕರಿಗೆ ಅಂಬೇಡ್ಕರ್ ಸಹಾಯಸ್ತ ಯೋಜನೆ
1 min readಕಾರ್ಮಿಕರಿಗೆ ಅಂಬೇಡ್ಕರ್ ಸಹಾಯಸ್ತ ಯೋಜನೆ
ಯೋಜನೆ ಪ್ರಾರಂಭಿಸಿದ ಕಾರಮಿಕ ಸಚಿವ ಸಂತೋಷ್ ಲಾಡ್
ಸಚಿವ ಲಾಡ್‌ಗೆ ಅಸಂಘಟಿತ ಕಾರ್ಮಿಕರಿಂದ ಅಭಿನಂದನೆ
ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಅಸಂಘಟಿತ ವಲಯದ ಕಾರ್ಮಿಕರಿಗೆ ಅಂಬೇಡ್ಕರ್ ಸಹಾಯಸ್ಥ ಯೋಜನೆ ಪ್ರಾರಂಭಿಸಿದ್ದು, 23 ಅಸಂಘಟಿತ ವಲಯದ ಕಾರ್ಮಿಕರಿಗೆ ಅಪಘಾತ ವಿಮೆ ಘೋಷಿಸಿದ ಸಚಿವ ಸಂತೋಷ್ ಲಾಡ್ ಅವರಿಗೆ ಅಸಂಘಟಿತ ಕಾರ್ಮಿಕರಿಂದ ಅಭಿನಂದನೆ ಸಲ್ಲಿಸಲಾಯಿತು.
ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಸಂಘಟಿತ ಕಾರ್ಮಿಕರ ಮುಖಂಡರು, ಪ್ರಸ್ತುತ ರಾಜ್ಯ ಕಾರ್ಮಿಕ ಸಚಿವ ಅನಿಲ್ ಅವರು ಘೋಷಿಸಿರುವ ಯೋಜನೆಯನ್ನು ಎಲ್ಲಾ ಅಸಂಘಟಿತ ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಅಸಂಘಟಿತ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಪಿ ದ್ವಾರಕೇಶ್ ಮತ್ತು ಇತರೆ ಪದಾಧಿಕಾರಿಗಳು, ಸುದ್ದಿಗೋಷ್ಟಿಯಲ್ಲಿ ಇದ್ದರು.
ಕಾರ್ಮಿಕರ ಹೋರಾಟಕ್ಕೆ ಮಾನ್ಯತೆ ನೀಡಿ ಸರ್ಕಾರ, ಅಸಂಘಟಿತ ಕಾರ್ಮಿಕರ 23 ವಲಯಕ್ಕೆ ಪ್ರಥಮವಾಗಿ ಅಪಘಾತದಲ್ಲಿ ಮೃತಪಟ್ಟರೆ ವಿಮೆ ಒಂದು ಲಕ್ಷ, ಆಸ್ಪತ್ರೆ ವೆಚ್ಚ ೫೦ ಸಾವಿರ ಹಾಗೂ ಸಹಜ ಸಾವಿಗೆ 10 ಸಾವಿರ ನೀಡಲು ಸರ್ಕಾರ ನಿರ್ಧರಿಸಿದ್ದು, ರಾಜ್ಯ ಅಸಂಘಟಿತ ಕಾರ್ಮಿಕರು ಈ ನಿರ್ಣಯವನ್ನು ಸ್ವಾಗತಿಸಿದ್ದಾರೆ. ಹಮಾಲರು, ಚಿಂದಿ ಆಯುವರು, ಅಗಸರು, ಕ್ಷೌರಿಕರು, ಕುಂಬಾರರು, ಪಟ್ಟಿ ಕಾರ್ಮಿಕರು, ಗೃಹ ಕಾರ್ಮಿಕರು ಸೇರಿದಂತೆ ಹಲವು ಅಸಂಘಟಿತ ಕಾರ್ಮಿಕರು ಈ ಸೌಲಭ್ಯ ಪಡೆಯಬಹುದಾಗಿದೆ. ಇದರ ಸೌಲಭ್ಯ ಸಂಘಟಿತ ಕಾರ್ಮಿಕರು ಪಡೆಯಲು ಅವರು ಕೋರಿದರು. ಕಳೆದ ಹಲವು ವರ್ಷಗಳಿಂದ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ಮೋಟರ್ ಸಾರಿಗೆ ಸಂಬ0ಧಿಸಿದ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ರಚಿಸಲು ಹೋರಾಟ ಮಾಡಿದ್ದು, ಸರ್ಕಾರ ಮಂಡಳಿ ರಚನೆ ಮಾಡಿ ರಾಜ್ಯಪತ್ರದಲ್ಲಿ ಹೊರಡಿಸಲಾಗಿದೆ. ಮಂಡಳಿ ರಚನೆ ಮತ್ತು ಕಾರ್ಮಿಕ ಕಾರ್ಡುಗಳನ್ನು ವಿತರಣೆ ಮಾನದಂಡ ಹಾಗೂ ಸಂಬ0ಧಿಸಿದ ಜಿಲ್ಲೆಗಳ ಅಧಿಕಾರಿಗಳ ಕ್ರಮ ವಹಿಸಲು ಸುತ್ತೋಲೆ ಹೊರಡಿಸಲು ಸಂಘ ಇದೇ ಸಂದರ್ಭದಲ್ಲಿ ಆಗ್ರಹಿಸಿದೆ.
ಸುದ್ದಿಗೋಷ್ಟಿಯಲ್ಲಿ ಮುನಿರಾಜು, ಸೀತಾ ಬೈರ ರೆಡ್ಡಿ, ಪ್ರಕಾಶ, ಬಚ್ಚೆಗೌಡ, ರಮೇಶ್, ಮೀನಾಕು ಮಾರಿ, ಧನಂಜಯ್ ಮೂರ್ತಿ, ಮಲ್ಲೇಶ್ ಇದ್ದರು.