ಸರ್ಕಾರಿ ಬಾಲಕೀಯರ ಪ್ರೌಡಶಾಲೆಗೆ ಉಚಿತ ಕಂಪ್ಯೂಟರ್ ವಿತರಣೆ
1 min readಹೆಣ್ಣು ಮಕ್ಕಳ ರಕ್ಷಣೆಗೆ ಸಂಘಟನೆ ಮುಖ್ಯ, ವಿ ಗೀತಾ
ಸರ್ಕಾರಿ ಬಾಲಕೀಯರ ಪ್ರೌಡಶಾಲೆಗೆ ಉಚಿತ ಕಂಪ್ಯೂಟರ್ ವಿತರಣೆ
ಸ್ವತಂತ್ರ ಭಾರತದಲ್ಲಿಯೂ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಂತಿಲ್ಲ, ಪ್ರೇಮ ಅನ್ನೋ ಪಾಶಕ್ಕೆ ಬಿದ್ದು ಮೋಹದ ಗೊಂಬೆಗಳಾಗಿ ಹೀನಾಯ ಬದುಕು ಕಾಣುವಂತಾಗಿದೆ ಅದೆಲ್ಲವನ್ನೂ ಶಿಕ್ಷಣದಿಂದ ಎದುರಿಸಬಹುದು ಅದಕ್ಕಾಗಿ ಮೊದಲು ನಿಮ್ಮ ಲಕ್ಷö್ಯ ಶಿಕ್ಷಣ ಪಡೆಯಲು ಮಾತ್ರ ಇರಲಿ ಎಂದು ಜನವಾದಿ ಮಹಿಳಾ ಸಂಘಟನೆ ಮುಖಂಡೆ ವಿ ಗೀತಾ ಹೇಳಿದರು.
ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಸರ್ಕಾರಿ ಬಾಲಕೀಯ ಪ್ರೌಡಶಾಲೆಯಲ್ಲಿ ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ಹಾಗು ಸೋನೊ ವಿಷನ್ ಟೆಕ್ನಿಕಲ್ ಸರ್ವೀಸ್‌ನಿಂದ ಉಚಿತ ಕಂಪ್ಯೂಟರ್ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆ ರಾಜ್ಯ ನಾಯಕಿ ವಿ. ಗೀತಾ, ದೇಶಕ್ಕೆ ಸ್ವಾತಂತ್ರ ಬರುವ ಮೊದಲು ಹಾಗು ಬಂದ ಮೇಲೂ ಮಹಿಳೆ ಮೇಲೆ ದೌರ್ಜನ್ಯಗಳು ನಡೆಯುತ್ತಲೆ ಇದೆ. ಇತ್ತೀಚಿನ ಅಪಾಯಕರ ಬೆಳವಣಿಗೆ ನೆನೆಸಿಕೊಂಡರೆ ಹಣ್ಣುಮಕ್ಕಳನ್ನ ಹೊರ ಕಳುಹಿಸಲು ಭಯ ಆಗುತ್ತೆ. ಪ್ರೌಡಶಾಲಾ ಮಟ್ಟದ ವಿದ್ಯಾರ್ಥಿನೀಯರು ಗರ್ಬಿಣಿಯಾಗುತಿದ್ದಾರೆ, ಪ್ರೀತಿ ಪ್ರೇಮ ಅನ್ನೋ ಮೋಹಕ್ಕೆ ಬಿದ್ದು ತಮ್ಮ ಜೀವನ ಹಾಳು ಮಾಡಿಕೊಳ್ಳುತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಎಲ್ಲ ಅನಿಷ್ಟಗಳನ್ನ ಹೊಡೆದೋಡಿಸುವ ಏಕೈಕ ಅಸ್ತ ಶಿಕ್ಷಣ. ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಕಲಿಯಬೇಕು, ತ0ತ್ರಜ್ಞಾನ ಕಲಿಯಬೇಕು, ಕಂಪ್ಯೂಟರ್ ಜ್ಞಾನ ಈಗಲಿಂದಲೆ ಅಭ್ಯಾಸ ಮಾಡಬೇಕು ಎಂದು ಕರೆ ನೀಡಿದರು.
ನಗರಸಭೆ ಪೌರಾಯುಕ್ತ ಉಮಾಶಂಕರ್ ಮಾತನಾಡಿ, ಪರಿಸರ ಸಂರಕ್ಷಣೆ ವೇದಿಕೆ ಕರೆಯಂತೆ ಎಲ್ಲರೂ ಪರಿಸರ ರಕ್ಷಣೆಗಾಗಿ ಪ್ಲಾಸ್ಟಿಕ್ ತ್ಯಜಿಸೋಣ, ಬಟ್ಟೆ ಮತ್ತು ಪೇಪರ್ ಮಾತ್ರ ಬಳಸೋಣ, ನಾವು ಬಳಸುವ ವಸ್ತುಗಳು ಮರಬಳಕೆಯಾಗುವಂತಿರಬೇಕು ಮತ್ತು ಕೊಳೆಯುವಂತಿರಬೇಕು. ಇಲ್ಲವಾದರೆ ಉಸಿರಾಟದ ತೊಂದರೆ ಅನಾರೋಗ್ಯ ಎದುರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು
ವೇದಿಕೆಯಲ್ಲಿ ಸಮಾಜ ಸೇವಕ ಹೋಟೆಲ್ ರಾಮಣ್ಣ, ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಅಭಿಲಾಶ್, ಸೆಂಟ್ ಜಾನ್ಸ್ ಶಾಲೆಯ ಚೇರ್ಮನ್ ಹೆನ್ರಿ ಪ್ರಸನ್ನಕುಮಾರ್, ಗುಂಪುಮರದ ಆನಂದ್, ಮುಖ್ಯೋಪಾದ್ಯಾಯನಿ ಕೃಷ್ಣಕುಮಾರಿ, ಕಾರ್ಮಿಕ ಮುಖಂಡ ಎಂ ಪಿ ಮುನಿವೆಂಕಟಪ್ಪ, ಚನ್ನರಾಯಪ್ಪ ಇದ್ದರು.