ನಾಳೆ ಸಾರಿಗೆ ನೌಕರರಿಂದ ಪ್ರತಿಭಟನೆ! ಬಸ್ ಸೇವೆ ಇರುತ್ತಾ? ಇಲ್ವಾ?
1 min readಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ (KSRTC) ಕಾರ್ಯನಿರ್ವಹಿಸುತ್ತಿರುವ ನೌಕರರು, ಇದೀಗ ಸರ್ಕಾರದ ವಿರುದ್ದ ಮತ್ತೆ ಸಮರ ಸಾರಲು ಸಿದ್ಧರಾಗಿದ್ದಾರೆ. ಈ ಹಿನ್ನೆಲೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನೌಕರರು ನಾಳೆ (ಸೆ.04) ರಂದು ಪ್ರತಿಭಟನೆ ಮಾಡುವುದಾಗಿ ಕರ್ನಾಟಕ ರಾಜ್ಯ ಸಾರಿಗೆ ಮಜ್ದೂರ್ ಸಂಘ ಕರೆ ನೀಡಿದೆ.
ನಾಳೆ ಸಾರಿಗೆ ನೌಕರರ ಪ್ರತಿಭಟನೆ!
ಸಾರಿಗೆ ನೌಕರರಿಗೆ 38 ತಿಂಗಳ ವೇತನ ನೀಡಲು ಬಾಕಿ ಇರುವ ಕಾರಣ ಇದನ್ನು ಖಂಡಿಸಿ ನಾಳೆ ಫ್ರೀಡಂಪಾರ್ಕ್ ನಲ್ಲಿ ಸಾರಿಗೆ ನೌಕರರಿಂದ ಧರಣಿ ಸತ್ಯಾಗ್ರಹ ನಡೆಸುವುದಾಗಿ ಕರ್ನಾಟಕ ರಾಜ್ಯ ಸಾರಿಗೆ ಮಜ್ದೂರ್ ಸಂಘ ತಿಳಿಸಿದೆ. ಇನ್ನು ಈ ಧರಣಿ ಸತ್ಯಾಗ್ರಹ ಬೆಳಿಗ್ಗೆ 11 ಗಂಟೆಗೆ ಶುರುವಾಗಲಿದೆ.
ಸಾರಿಗೆ ನೌಕರರ ಬೇಡಿಕೆಗಳು?
- 38 ತಿಂಗಳ ವೇತನ ಬಾಕಿ ಹಣ ನೀಡಬೇಕು
- ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನ ವೇತನ ನೀಡಬೇಕು.
- ಖಾಸಗೀಕರಣ ಭ್ರಷ್ಟಾಚಾರ ಕಾರ್ಮಿಕರ ಕಿರುಕುಳ ನಿಲ್ಲಬೇಕು.
- ನಗದು ರಹಿತ ವೈದ್ಯಕೀಯ ಸೌಲಭ್ಯ
- ನಮ್ಮ ಹಕ್ಕಿನ ರಜೆ.
- 1-1-2024 ರಿಂದ ವೇತನ ಜಾರಿಗೊಳಿಸುವುದು.
- ಉತ್ತಮ ಕ್ಯಾಂಟೀನ್ ವ್ಯವಸ್ಥೆ
ಈ ಎಲ್ಲಾ ಬೇಡಿಕೆಳಿಗಾಗಿ ನಾಳೆ ಫ್ರೀಡಂ ಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದ್ದು, ಈ ಹಿನ್ನೆಲೆ ಸರ್ಕಾರಿ ಬಸ್ ಸೌಲಭ್ಯ ಇರಲಿದೆಯೇ? ಇಲ್ಲವೇ? ಎಂಬುದರ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ.
ನಾಳೆ ಸಾರಿಗೆ ನೌಕರರ ಪ್ರತಿಭಟನೆ!
ಬೆಂಗಳೂರು: ರಾಜ್ಯ ರಾಜಧಾನಿಯ ನಾಗರಿಕರೇ ಗಮನಿಸಿ, ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಿದ್ದೀರಾ? ಹಾಗಿದ್ದರೆ ಇನ್ಮೇಲೆ ನೀವು ಎಚ್ಚರಿಕೆ ವಹಿಸಲೇಬೇಕು! ಹೌದು, ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಆರಂಭವಾಗಿದೆ.
ಆದ್ಯತೆ ಮೇರೆಗೆ ಮೆಜೆಸ್ಟಿಕ್ ಏರಿಯಾದಲ್ಲಿ ಮಾತ್ರ ಟೋಯಿಂಗ್ ನಡೆಸಲು ಅನುಮತಿ ನೀಡಲಾಗಿದೆ. ಎಲ್ಲೆಂದರಲ್ಲಿ ವೆಹಿಕಲ್ ಪಾರ್ಕಿಂಗ್ ಮಾಡುತ್ತಿದ್ದ ಹಿನ್ನಲೆಯಲ್ಲಿ ಟೋಯಿಂಗ್‌ಗೆ ಅನುಮತಿ ನೀಡಲಾಗಿದೆ.
ಮೈಕ್ ಮೂಲಕ ಅನೌನ್ಸ್, ನಂತರ ಟೋಯಿಂಗ್
ಕಳೆದ ಎರಡು ದಿನಗಳಿಂದ ಪೊಲೀಸರು ಟೋಯಿಂಗ್ ನಡೆಸುತ್ತಿದ್ದಾರೆ. ಎಎಸ್‌ಐ ನೇತೃತ್ವದಲ್ಲಿ ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲ್ಲಿಸಿದವರಿಗೆ ದಂಡ ವಿಧಿಸಲಾಗುತ್ತಿದೆ. ಮೊದಲಿಗೆ ಮೈಕ್ ಮೂಲಕ ಅನೌನ್ಸ್ ಮಾಡಿ ಆ ಬಳಿಕ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಬಿವಿಎಂಪಿಯಿಂದ ಎರಡು ಟೋಯಿಂಗ್ ವೆಹಿಕಲ್ ನೀಡಲಾಗಿದ್ದು, ನೋ ಪಾರ್ಕಿಂಗ್ ದಂಡವನ್ನಷ್ಟೇ ಪೊಲೀಸರು ಹಾಕುತ್ತಿದ್ದಾರೆ. (ವರದಿ: ಮಂಜುನಾಥ್, ನ್ಯೂಸ್ 18 ಕನ್ನಡ ಬೆಂಗಳೂರು)
ಕೆಆರ್ ಮಾರುಕಟ್ಟೆಯಿಂದ ಈ ಭಾಗಕ್ಕೆ ಬಸ್ ಸೇವೆ ಆರಂಭಿಸಿದ ಬಿಎಂಟಿಸಿ, ವಿವರ ಗಮನಿಸಿ
ರಾಜ್ಯ ರಾಜಧಾನಿಯ ನಾಗರಿಕರೇ ಗಮನಿಸಿ, ಪ್ರತಿದಿನ ಸಾವಿರಾರು ಪ್ರಯಾಣಿಕರ ಪಾಲಿನ ಒಡನಾಡಿಯಾದ ಬಿಎಂಟಿಸಿ ಶುಭಸುದ್ದಿ ನೀಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಹೊಸ ಮಾರ್ಗದಲ್ಲಿ ನಾನ್-ಎಸಿ ಬಸ್‌ಗಳನ್ನು ಪರಿಚಯಿಸಿದೆ. 251 ಕೆ ಮಾರ್ಗದ ಬಸ್ ಆರ್ ಮಾರುಕಟ್ಟೆಯಿಂದ ಶಿವಕೋಟೆಗೆ ಸೇವೆ ನೀಡಲಿದೆ.
ಯಶವಂತಪುರ, ಜಾಲಹಳ್ಳಿ ಕ್ರಾಸ್, ಚಿಕ್ಕಬಾಣಾವರ, ಹೆಸರಘಟ್ಟ ಟಿ ಬಿ ಕ್ರಾಸ್, ಮುತ್ಕೂರು ಕ್ರಾಸ್ ಮೂಲಕ ಬಸ್ ಸೇವೆ ನೀಡಲಿದೆ. ಮಾರ್ಗವಾರು ವೇಳಾಪಟ್ಟಿ ಹೀಗಿದೆ: ಕೆ ಆರ್ ಮಾರುಕಟ್ಟೆ/ ಯಶವಂತಪುರ ನಿರ್ಗಮನ ಸಮಯ 0600, 1410, 1710, 2030. ಶಿವಕೋಟೆ ನಿರ್ಗಮನ ಸಮಯ 0425, 0740, 1555, 1850 ಆಗಿರುತ್ತದೆ. ಈ ಮಾರ್ಗದಲ್ಲಿ 1 ಬಸ್ ಒಟ್ಟು 8 ಟ್ರಿಪ್ ಸೇವೆ ನೀಡಲಿದ್ದು, ಪ್ರಯಾಣಿಕರು ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಬಿಎಂಟಿಸಿ ಮನವಿ ಮಾಡಿದೆ.
#ctvnews #ctvNews #ctv
Top News: Latest Trending in India, Buzz, World Trending News, Hot on Social Media, What is Trending in the World, Trending on Social Media.
►Watch LIVE: https://shashwatha.com/player.php?url=https://shashwatha.com/hls/shashwatha/ctvnews.m3u8
►CTV News : https://ctvnewskannada.com/
►Subscribe to Ctv News: https://www.youtube.com/channel/UCHtq26kA5D5anCbPD3HoURw
►Big News Big Update : https://ctvnewskannada.com/
► Download CTV Android App: https://play.google.com/store/apps/details?id=com.ctv.ctvnews
► Like us on Facebook: https://www.facebook.com/ctvnewschikkaballapura
► Follow us on Instagram: https://www.instagram.com/ctvnewschikkaballapura/
► Follow us on Twitter: https://twitter.com/ctvnewscbpura
-news #ctv #ctvnewskannada #ctvchikkaballapura #ctvnewsmedia #ctvlive#ctvnewsupdate #todaynews #latestnewstoday