ಜಾಲಿ ರೈಡ್ ಗೆ ಗುಡಿಬಂಡೆ ಕಡೆಗೆ ಬಂದವನಿಗೆ ಅಪಘಾತ
1 min readಜಾಲಿ ರೈಡ್ ಗೆ ಗುಡಿಬಂಡೆ ಕಡೆಗೆ ಬಂದವನಿಗೆ ಅಪಘಾತ
ಲಾಂಗ್ ಡ್ರೆವ್ ಬಂದಿದ್ದ ಯುವಕ ಆಸ್ಪತ್ರೆಯಲ್ಲಿ ಸಾವು
ಸರಣಿ ಸಾವುಗಳಿಂದಲೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು
ಮುಂದುವರಿದ ಆರ್‌ಟಿಒ, ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್
ಜಾಲಿ ರೈಡ್ ಗೆ ಎಂದು ಬೆಂಗಳೂರಿನಿ0ದ ಗುಡಿಬಂಡೆ ವಾಟದಹೊಸಹಳ್ಳಿ ಕಡೆಗೆ ಹೊರಟಿದ್ದ ಯುವಕರು ಗುಡಿಬಂಡೆ ಹೊರ ವಲಯದ ಮ್ಯಾಕಲಹಳ್ಳಿ ತಿರುವಿನಲ್ಲಿ ಅಪಘಾತಕ್ಕೀಡಾಗಿ, ತೀವ್ರ ಗಾಯಗೊಂಡು ಬೆಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಯುವಕ ಎಂಬಿಎ ಪದವೀಧರ, ಬೆಂಗಳೂರಿನ ಗಾಂಧಿನಗರದ ಮನಿಶ್ ಜೈನ್ ಎಂಬುವರ ಮಗ ಚಿರಾಯು(24) ಎಂದು ತಿಳಿದು ಬಂದಿದೆ. ಗುಡಿಬಂಡೆ ಹೊರವಲಯದ ಮ್ಯಾಕಲಹಳ್ಳಿ ತಿರುವಿನಲ್ಲಿ ಗುಡಿಬಂಡೆ ಕಡೆಯಿಂದ ಕ್ವಾರಿಗೆ ಹೊರಟಿದ್ದ ಟಿಪ್ಪರ್ ಲಾರಿ ಬೆಂಗಳೂರು ಕಡೆಯಿಂದ ಗುಡಿಬಂಡೆಗೆ ಬರುತ್ತಿದ್ದ ಬೈಕ್ ಮುಖಾಮುಖಿ ಡಿಕ್ಕಿ ಯಾಗಿದ್ದು, ಬೈಕ್ ಸವಾರನಿಗೆ ಕೈ, ಕಾಲು ಮುರಿದು ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು ಎನ್ನಲಾಗಿದೆ.
ಗಾಯಗೊಂಡ ಯುವಕನಿಗೆ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟಿದ್ದಾನೆ. ಟಿಪ್ಪರ್ ಚಾಲಕ ಪರಾರಿಯಾಗಿದ್ದು, ಈ ಸಂಬ0ಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೀಕೆಂಡ್ ಬಂದರೆ ಗುಡಿಬಂಡೆ ಕೆರೆ, ಬೆಟ್ಟ ಹಾಗೂ ವಾಟದಹೊಸಹಳ್ಳಿ ಕೆರೆ ವೀಕ್ಷಿಸಲು ನೂರಾರು ಬೈಕ್ ಗಳಲ್ಲಿ ಜಾಲಿರೈಡ್ ಗೆ ಪ್ರವಾಸಿಗರು ವಿವಿಧ ಜಿಲ್ಲೆ, ರಾಜ್ಯ ಗಳಿಂದ ಬರುತ್ತಾರೆ.
ಒಂದು ತಿಂಗಳ ಹಿಂದೆಯೂ ಒಬ್ಬ ಯುವಕ ಮೃತಪಟ್ಟದ್ದು ಈಗ ಮತ್ತೊಂದು ಯುವಕ ಮೃತಪಟ್ಟಿದಾನೆ.
ಗುಡಿಬಂಡೆ ತಾಲ್ಲೂಕಿನಲ್ಲಿ ಗಣಿಗಾರಿಕೆ ಹೆಚ್ಚಾಗಿದ್ದು, ಪ್ರಮುಖ ಬೆಟ್ಟಗಳನ್ನು ಪುಡಿ ಮಡಾಉವ ಕೆಲಸದಲ್ಲಿ ಗಣಿ ಮಾಲೀಕರು ನಿರತರಾಗಿದ್ದಾರೆ. ಪರಿಸರಗದ ಮೇಲೆ ಕಾಳಜಿ ಇಲ್ಲದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಭಾಗದಲ್ಲಿರುವ ಅಸಂಖ್ಯ ಶಿಲಾ ಪರ್ವತಗಳಲ್ಲಿ ಕಲ್ಲು ಗಣಿಗಾರಿಕೆ ಮಾಡಲು ಅವಕಾಶ ನೀಡುತ್ತಿದ್ದು, ಈ ಗಣಿ ವಸ್ತುಗಳನ್ನು ಸಾಗಿಸಲು ಪ್ರತಿನಿತ್ಯ ಸಾವಿರಾರು ಟಿಪ್ಪರ್‌ಗಳು ವೇಗದ ಮಿತಿ ಇಲ್ಲದೆ ರಸ್ತೆಯಲ್ಲಿ ಸಂಚರಿಸುತ್ತಿರುವ ಕಾರಣ ಈರಸ್ತೆಗಳಲ್ಲಿ ಸಂಚರಿಸುವ ಸ್ಥಳೀಯರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಆಟಟಿಒ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಯಾವುದಾದರೂ ಅಪಘಾತ ನಡೆದಾಗ ಮಾತ್ರ ತೀವ್ರ ಗೊಂದಲ ಮಾಡುವಂತೆ ನಟಿಸಿ, ನಂತರ ಗಣಿ ಟಿಪ್ಪರ್‌ಗಳನ್ನು ಮುಟ್ಟಲೂ ಮುಂದಾಗುವುದಿಲ್ಲ. ಇದರಿಂದ ಪ್ರತಿನಿತ್ಯ ಸಾವಿರಾರು ಟಿಪ್ಪರ್‌ಗಳು ಅಧಿಕ ಭಾರ ಹೊತ್ತು, ಅತಿ ವೇಗವಾಗಿ ಸಂಚರಿಸುವ ಮೂಲಕ ಸಾಮಾನ್ಯ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿವೆ. ಒಟ್ಟಿನಲ್ಲಿ ಆರ್‌ಟಿಒ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಎಚ್ಚೆತ್ತು ಕಠಿಣ ಕ್ರಮ ಕೈಗೊಳ್ಳುವ ಲಕ್ಷಣಗಳೂ ಇಲ್ಲ, ಈ ರಸ್ತೆಗಳಲ್ಲಿ ಜೀವ ಬಿಡುವ ಅಮಾಯಕರ ಕಾಪಾಡುವವರು ಇಳ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.