ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ಜಿಲ್ಲೆಯಾದ್ಯಂತ ಪವರ್ ಸ್ಟಾರ್ ಪವನ್ ಕಲ್ಯಾಣ್ ಜನ್ಮದಿನ

1 min read

ಜಿಲ್ಲೆಯಾದ್ಯಂತ ಪವರ್ ಸ್ಟಾರ್ ಪವನ್ ಕಲ್ಯಾಣ್ ಜನ್ಮದಿನ

ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಹುಟ್ಟುಹಬ್ಬ ಆಚರಣೆ

ರಕ್ತದಾನ, ಅನ್ನದಾನ, ಪೌರಕಾರ್ಮಿಕರಿಗೆ ಬಾಗಿನ ಅರ್ಪಣೆ

ಟಾಲಿವುಡ್ ನಟನಿಗೆ ಕರ್ನಾಟಕದಲ್ಲಿ ಅಭಿಮಾನಿಗಳ ಸೇವೆ

ಅಭಿಮಾನ ಅಂದರೆ ಅದೇ ಇರಬೇಕು, ತಮ್ಮ ನೆಚ್ಚಿನ ನಾಯಕನಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಅಭಿಮಾನಿಗಳು ಸಿದ್ಧ ಎಂಬುದಕ್ಕೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಪ್ರತ್ಯಕ್ಷ ನಿದರ್ಶನ. ಪವನ್ ಕಲ್ಯಾಣ್ ತೆಲುಗು ನಟ, ಅದರಲ್ಲೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ, ಅವರಿಗೆ ಅಭಿಮಾನಿಗಳಿದ್ದರೆ ಆಂಧ್ರದಲ್ಲೋ, ತೆಲಂಗಾಣದಲ್ಲೋ ಇರಬೇಕು. ಆದರೆ ಅದನ್ನೂ ಮೀರಿ ಅಭಿಮಾನವನ್ನು ಪವನ್ ಕಲ್ಯಾಣ್ ಕರ್ನಾಟಕದಲ್ಲೂ ಸಂಪಾದಿಸಿರುವುದು ವಿಶೇಷ. ಇಂದು ಪವನ್ ಕಲ್ಯಾಣ್ ಹುಟ್ಟುಹಬ್ಬ ಜಿಲ್ಲೆಯಾದ್ಯಂತ ಅವರ ಹುಟ್ಟುಹಬ್ಬದ ಆಛರಣೆ ಹೇಗಿತ್ತು ಎಂಬ ಒಂದು ಝಲಕ್.

ಹೌದು, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಸಿನಿಮಾ ತಾರೆಯರೆಂದರೆ ಹುಚ್ಚು ಅಭಿಮಾನ. ಅದೇ ಕಾರಣಕ್ಕೆ ತಮಿಳುನಾಡಿನಲ್ಲಿ ಎಂಜಿಆರ್, ಜಯಲಲಿತಾ, ಆಂಧ್ರಪ್ರದೇಶದಲ್ಲಿ ಎನ್‌ಟಿಆರ್, ಪವನ್‌ಕಲ್ಯಾಣ್ ಅಧಿಕಾರದ ಚುಕ್ಕಾಣಿ ಹಿಡಿದರು ಎಂದರೆ ತಪ್ಪಾಗಲಾರದು. ಪ್ರಸ್ತುತ ಪವನ್ ಕಲ್ಯಾಣ್ ಇನ್ನೂ ಸಿನಿಮಾ ನಟರಾಗಿದ್ದಾರೆ. ಅಲ್ಲದೆ ಇತ್ತೀಚಿಗೆ ನಡೆದ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 21 ಸ್ಥಾನಗಳಲ್ಲಿ ಸ್ಪರ್ಧಿಸಿ 21 ಸ್ಥಾನಗಳಲ್ಲಿಯೂ ಗೆದ್ದು ಉಪ ಮುಖ್ಯಮಂತ್ರಿಯಾಗಿದ್ದಾರೆ. ಹಾಗಾಗಿಯೇ ಜನರಲ್ಲಿದ್ದ ಅವರ ಮೇಲೆ ಅಭಿಮಾನ ಮತ್ತಷ್ಟು ಹೆಚ್ಚಾಗಿದೆ.

ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಇಂದು ಕರ್ನಾಟಕ ರೈತ ಜನಸೇನಾ ಸಂಸ್ಥಾಪಕ ಅಧ್ಯಕ್ಷೆ ಸುಷ್ಮಾ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇಂದು ಬೆಳಗ್ಗೆ 10ಗಂಟೆಗೆ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು, ನೂರಾರು ಸಂಖ್ಯೆಯಲ್ಲಿ ಬಂದ ಪವನ್ ಕಲ್ಯಾಣ್ ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ತಮ್ಮ ಅಭಿಮಾನ ನಟನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು.

ಮಧ್ಯಾಹ್ನ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕ ಹೆಣ್ಣು ಮಕ್ಕಳಿಗೆ ಹರಶಿನ ಕುಂಕುಮ ಕೊಡುವ ಕಾರ್ಯಕ್ರಮವನ್ನು ಜನ ಸೇನಾನಿಗಳು ಏರ್ಪಡಿಸಿದ್ದರು. ಅಲ್ಲದೆ ಇನ್ಸೂರೆನ್ಸ್ ಬಾಂಡ್ ವಿತರಣೆಯೂ ಇದೇ ಸಂದರ್ಭದಲ್ಲಿ ನಡೆಯಿತು. ಬೃಹತ್ ಕೇಕ್ ಕತ್ತರಿಸುವ ಮೂಲಕ ಕರ್ನಾಟಕ ರೈತ ಜನಸೇನಾ ಕಾರ್ಯಕರ್ತರು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.

ಇನ್ನು ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿ ಮೊಬೈಲ್ ಬಾಬು ಅವರ ನೇತೃತ್ವದಲ್ಲಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಇಂದು ನಗರದಲ್ಲಿ ಆಯೋಜಿಸಲಾಗಿತ್ತು. ನಗರದ ಕೃಷ್ಣಾ ಚಿತ್ರಮಂದಿರದಲ್ಲಿ ಪವನ್ ಕಲ್ಯಾಣ್ ನಟಿಸಿರುವ ಗಬ್ಬರ್‌ಸಿಂಗ್ ಸಿನಿಮಾ ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಿನಿಮಾ ಪ್ರದರ್ಶನಕ್ಕೂ ಮೊದಲು ಬೃಹತ್ ಕೇಕ್ ಕತ್ತರಿಸಿ, ಪವನ್ ಕಲ್ಯಾಣ್‌ಗೆ ಜೈಕಾರದ ಜೊತೆಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಅಭಿಮಾನಿಗಳು ಕೇಕ್ ಹಂಚಿಕೊ0ಡರು.

ನ0ತರ ಕೃಷ್ಣಾ ಚಿತ್ರಮಂದಿರದಲ್ಲಿ ಗಬ್ಬರ್ ಸಿಂಗ್ ಸಿನಿಮಾ ರೀ ರಿಲೀಸಿಂಗ್ ಈವೆಂಟ್ ನಡೆಸಿದರು. ಈ ಸಂದರ್ಬದಲ್ಲಿ ಪವರ್ ಸ್ಟಾರ್ ಡ್ಯಾನ್ಸ್ಗೆ ಚಿತ್ರಮಂದಿರದಲ್ಲಿ ತುಂಬಿದ್ದ ಅಭಿಮಾನಿಗಳು ಕುಣಿದು ಕಪ್ಪಳಿಸುವ ಮೂಲಕ ಅಭಿಮಾನ ಮೆರೆದರು. ನಂತರ ಮೊಬೈಲ್ ಬಾಬು ಅವರ ನೇತೃತ್ವದಲ್ಲಿ ಮಧ್ಯಾಹ್ನ ಸುಲ್ತಾನಪೇಟೆಯ ದ್ವಾರಕಾ ಮಾಯಿ ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ವೃದ್ಧಾಶ್ರಮದಲ್ಲಿಯೂ ಕೇಕ್ ಕತ್ತರಿಸಿ, ವೃದ್ಧರಿಗೆ ವಿಶೇಷ ಊಟದ ವ್ಯವಸ್ಥೆ ಮಾಡುವ ಮೂಲಕ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಛರಿಸಲಾಯಿತು. ನಗರದ ಟೌನ್‌ಹಾಲ್ ವೃತ್ತದಲ್ಲಿ ಮೆಗಾಸ್ಟಾರ್ ಚಿರಂಜೀವಿ ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳಿಂದ ಪವನ್ ಕಲ್ಯಾಣ್ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇನ್ನು ಬಾಗೇಪಲ್ಲಿಯಲ್ಲಿ ಕಮಲ್ ಬಾಬು ನೇತೃತ್ವದಲ್ಲಿ ಪವನ್ ಕಲ್ಯಾಣ್ ಅಭಿಮಾನಿಗಳಿಂದ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೃಹತ್ ರಕ್ತದಾನ ಶಿಬಿರ, ಅನ್ನದಾನ ಕಾರ್ಯಕ್ರಮಗಳ ಮೂಲಕ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಹುಟ್ಟುಹಬ್ಬವನ್ನು ಛಆರಿಸಲಾಯಿತು. ಇದಲ್ಲದೆ ಜಿಲ್ಲೆಯಾದ್ಯಂತ ವಿವಿಧ ತಾಲ್ಲೂಕುಗಳು ಮತ್ತು ಗ್ರಾಮಗಳಲ್ಲಿ ಪವನ್ ಕಲ್ಯಾಣ್ ಅವರ ಹುಟ್ಟುಹಬ್ಬವನ್ನು ಸಂಭ್ರಮದಿ0ದ ಅವರ ಅಭಿಮಾನಿಗಳು ಆಚರಿಸಿರುವುದು ವಿಶೇಷ.

 

About The Author

Leave a Reply

Your email address will not be published. Required fields are marked *