ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ಅಂತೂ ಇಂತೂ ನಗರಸಭಾ ಸದಸ್ಯರು ಪ್ರವಾಸಕ್ಕೆ

1 min read

ಅಂತೂ ಇಂತೂ ನಗರಸಭಾ ಸದಸ್ಯರು ಪ್ರವಾಸಕ್ಕೆ

ಇಂದು ಸಂಜೆ ವಿಮಾನದಲ್ಲಿ ರಹಸ್ಯ ಸ್ಥಳಕ್ಕೆ

12ರ ವರೆಗೂ ಸದಸ್ಯರ ಚಿಕ್ಕಬಳ್ಳಾಪುರ ಸಂಪರ್ಕ ಕಡಿತ

ಕಾಂಗ್ರೆಸ್ ಒತ್ತಡಕ್ಕೆ ಮಣಿದು ಜಂಪ್ ಆದರೆ ಸದಸ್ಯರು?

ಚಿಕ್ಕಬಳ್ಳಪಾಉರ ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲು ಇನ್ನೂ 10 ದಿನ ಬಾಕಿ ಇದೆ. ಇಂದು ನಗರಸಭೆಯ ಬಿಜೆಪಿ ಬೆಂಬಲಿತ 18ಸದಸ್ಯರು ಪ್ರವಾಸಕ್ಕೆ ತೆರಳಿದ್ದಾರೆ. ನಗರಸಭಾ ಸದಸ್ಯರಿಗೆ ಹಣ ನೀಡಲ್ಲ, ಪಕ್ಷದ ಚಿಹ್ನೆಯಡಿ ಗೆದ್ದ ಸದಸ್ಯರು ಬಂದು ಕಾಂಗ್ರೆಸ್ ಬೆಂಬಲಿಸಬೇಕು, ಅಯೋಗ್ಯರಿಗೆ, ಭ್ರಷ್ಟರಿಗೆ ಹಣ ನೀಡೋ ಬದಲು ಬಡ ಮಕ್ಕಳಿಗೆ ಬಟ್ಟೆ ಕೊಡಿಸೋದ ವಾಸಿ ಎಂದೆಲ್ಲ ಹೇಳಿದ್ದ ಕಾಂಗ್ರೆಸ್, ಕೊನೆ ಕ್ಷಣದಲ್ಲಿ ಸದಸ್ಯರ ಮನವೊಲಿಸುವ ಪ್ರಯತ್ನಕ್ಕೆ ಮುಂದಾಗಿದ್ದು, ಒತ್ತಡಕ್ಕೆ ಸದಸ್ಯರು ಮಣಿಯುವ ಆತಂಕದಿ0ದಲೇ ಪ್ರವಾಸ ಎಂದು ತಿಳಿದು ಬಂದಿದೆ.

ಹೌದು ನಿರೀಕ್ಷೆಯಂತೆ ಬಿಜೆಪಿ ಬೆಂಬಲಿತ 18 ಮಂದಿ ನಗರಸಭಾ ಸದಸ್ಯರ ತಂಡ ಇಂದು ಪ್ರವಾಸಕ್ಕೆ ತೆರಳಿದೆ. ಸೋಮವಾರ ಮಧ್ಯಾಹ್ನ ಚಿಕ್ಕಬಳ್ಳಾಪುರದಿಂದ ತೆರಳಿದ 18 ಮಂದಿ ಸದಸ್ಯರು, ಬೆಂಗಳೂರಿನಲ್ಲಿ ಒಟ್ಟಾಗಿದ್ದು, ಇಂದು ಸಂಜೆ ವಿಮಾನದ ಮೂಲಕ ಅಜ್ಞಾತ ಸ್ಥಳದತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸದಸ್ಯರು ಎಲ್ಲಿಗೆ ಹೋಗುತ್ತಿದ್ದಾರೆ ಎಂಬ ಬಗ್ಗೆ ಸದಸ್ಯರಿಗೇ ತಿಳಿಯದಿದ್ದು, ಹೋಗಬೇಕಾದ ಡಾಗ ತಲುಪವರೆಗೂ ಎಲ್ಲಿಗೆ ಎಂಬ ವಿಚಾರ ಸದಸ್ಯರಿಗೂ ತಿಳಿದಿಲ್ಲ. ಇನ್ನೂ ಸದಸ್ಯರ ಮೊಬೈಲ್‌ಗಳು ಇನ್ನೂ ಅವರ ಬಳಿಯೇ ಇದ್ದು, ಮುಂದಿನ ದಿನಗಳಲ್ಲಿ ಅವೂ ಕೂಡಾ ಸ್ಥಬ್ದವಾಗುವ ಸೂಚನೆಗಳಿವೆ.

ಚಿಕ್ಕಬಳ್ಳಾಪುರ ನಗರಸಬೆ ಅಧ್ಯಕ್ಷ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಂಸದ ಡಾ.ಕೆ. ಸುಧಾಕರ್ ಅವರು ಚುನಾವಣೆ ಘೋಷಣೆಯಾದ ದಿನಂದಿದಲೇ ಫುಲ್ ಅಲರ್ಟ್ ಆಗಿದ್ದರು. ಅಲ್ಲದೆ ಎಲ್ಲ ಸದಸ್ಯರೂ ಒಗ್ಗಟ್ಟಾಗಿರುವಂತೆ ಸೂಚಿಸಿದ್ದರು ಎಂದುತಿಳಿದುಬ0ದೆ. ಈ ನಡುವೆ ಶತಾಗತಾಯ ನಗರಸಭೆಯಲ್ಲಿ ಅಧಿಕಾರ ಹಿಡಿಯಬೇಕು ಎಂಬ ಉದ್ಧೇಶದಿಂದ ಭಾನುವಾರ ಕಾಂಗ್ರೆಸ್ ತೀವ್ರ ಪ್ರಯತ್ನ ನಡೆಸಿದೆ ಎನ್ನಲಾಗಿದೆ. ಸದಸ್ಯರ ಮನೆಗಳ ಬಳಿಯೇ ತೆರಳಿ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ ಎನ್ನಲಾಗಿದ್ದು, ಇದನ್ನು ತಿಳಿದ ಇಥರೆ ಸದಸ್ಯರು ಕೂಡಲೇ ಚಿಕ್ಕಬಳ್ಳಾಪುರ ಖಾಲಿ ಮಾಡಲು ನಿರ್ಧರಿಸಿದ್ದಾರೆ ಎಂದು ಉನ್ನತ ಮೂಲಗಳು ಸಿಟಿವಿ ನ್ಯೂಸ್‌ಗೆ ದೃಢಪಡಿಸಿವೆ.

ಕಾಂಗ್ರೆಸ್ ಒತಡ ತೀವ್ರವಾಗುತ್ತಿರುವ ಬೆನ್ನಲ್ಲಿಯೇ 18 ಮಂದಿ ನಗರಸಭಾ ಸದಸ್ಯರ ತಂಡ ರಾಜಧಾನಿ ಬೆಂಗಳೂರಿಗೆ ತಲುಪಿದ್ದು, ಅಲ್ಲಿಂದ ಸಂಜೆ ೯ ಗಂಟೆ ನಂತರ ವಿಮಾನದ ಮೂಲಕ ರಹಸ್ಯ ಸ್ಥಳಕ್ಕೆ ತೆರಳುವುದು ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಪ್ರಸ್ತುತ ಕಾಂಗ್ರೆಸ್‌ನಲ್ಲಿರುವ 12 ಮಂದಿ ಸದಸ್ಯರಲ್ಲಿಯೂ ಸುಮಾರು ನಾಲ್ಕು ಮಂದಿ ಮುಂದಿನ ಎರಡು ದಿನಗಳಲ್ಲಿ ಈ ಸದಸ್ಯರನ್ನು ಸೇರಲಿದ್ದು, ಅಲ್ಲಿಗೆ ಬಿಜೆಪಿ ಬೆಂಬಲಿತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಒಟ್ಟು ೩೧ ಮಂದಿ ಸದಸ್ಯರಿದ್ದು, ಇದರಲ್ಲಿ ಕಾಂಗ್ರೆಸ್ 16, ಬಿಜೆಪಿ 9, ಪಕ್ಷೇತರರು ೪ ಮತ್ತು ಜೆಡಿಎಸ್ ಇಬ್ಬರು ಸದಸ್ಯರಿದ್ದಾರೆ. ಈ ಹಿಂದೆ ನಗರಸಭೆಗೆ ಮೊದಲ ಅವಧಿಯ ಅಧ್ಯಕ್ಷರ ಆಯ್ಕೆ ವೇಳೆ ಕಾಂಗ್ರೆಸ್‌ಗೆ ಕೈಕೊಟ್ಟ ಹಲವು ಸದಸ್ಯರು ಬಿಜೆಪಿ ಬೆಂಬಲಿಸಿದ್ದರು. ಇದರಿಂದ ಆನಂದರೆಡ್ಡಿಯವರು ನಗರಸಭಾ ಅಧ್ಯಕ್ಷೆರಾಗಿ ಆಯ್ಕೆಯಾಗುವ ಮೂಲಕ ನಗರಸಭೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿತ್ತು. ಇದೀಗ ಮತ್ತೆ ಇತಿಹಾಸ ಪುನರಾವರ್ತನೆಯಾಗುವ ಎಲ್ಲ ಸೂಚನೆಗಳೂ ಗೋಚರಿಸುತ್ತಿವೆ.

ಪ್ರಸ್ತುತ ಬಿಜೆಪಿಯ 9, ಕಾಂಗ್ರೆಸ್‌ನ ಐವರು, ಪಕ್ಷೇತರರು ನಾಲ್ವರು ಮತ್ತು ಜೆಡಿಎಸ್‌ನ ಒಬ್ಬರು ಪ್ರವಾಸಕ್ಕೆ ತೆರಳಿದ್ದು, ಜೆಡಿಎಸ್‌ನ ಮತ್ತೊಬ್ಬ ಸದಸ್ಯರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಜೊತೆಗೆ ಬಿಜೆಪಿ ಪರ ಬಹುಮತ ಕಂಡು ಬಂದ ಹಿನ್ನೆಲೆಯಲ್ಲಿ ಇನ್ನೂ ಹಲವು ಕಾಂಗ್ರೆಸ್ ಸದಸ್ಯರು ಪ್ರವಾಸ ತೆರಳುವ ಗುಮಾನಿ ಇದ್ದು, ಮುಂದಿನ ಒಂದೆರಡು ದಿನಗಳಲ್ಲಿ ಅವರೂ ಇಂದು ತೆರಳಿದ ಸದಸ್ಯರನ್ನು ಕೂಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸೆಪ್ಟೆಂಬರ್ 12 ರಂದು ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯಲಿದ್ದು, ಪ್ರಸ್ತುತ ಪ್ರವಾಸ ತೆರಳಿದ ಸದಸ್ಯರ ಸಂಖ್ಯೆ ಗಮನಿಸಿದರೆ ಮತ್ತೆ ನಗರಸಭೆಯಲ್ಲಿ ಕಮಲ ಅರಳುವುದು ಬಹುತೇಕ ಖಚಿತ ಎಂಬ0ತಿದೆ. ಇದರಿಂದ ಕಾಂಗ್ರೆಸ್ ಮತ್ತೆ ಮುಖಂಡ ಅನುಭವಿಸಲಿದೆಯೇ ಇಲ್ಲವೇ ಬಿಜೆಪಿಗೆ ಸೆಡ್ಡು ಹೊಡೆದು ಅಧಿಕಾರ ಹಿಡಿಯಲಿದೆಯೇ ಎಂಬುದನ್ನು ತಿಳಿಯಲು ಸೆಪ್ಟೆಂಬರ್ 12ರವರೆಗೂ ಕಾಯಬೇಕಿದೆ.

 

About The Author

Leave a Reply

Your email address will not be published. Required fields are marked *