ಶ್ರೀಕೃಷ್ಣ ಜನ್ಮಾಷ್ಟಮಿ ಸಪ್ತಾಹದಲ್ಲಿ ಚಿನ್ನ ಕೃಷ್ಣರ ಕಲರವ
1 min readಶ್ರೀಕೃಷ್ಣ ಜನ್ಮಾಷ್ಟಮಿ ಸಪ್ತಾಹದಲ್ಲಿ ಚಿನ್ನ ಕೃಷ್ಣರ ಕಲರವ
ವೇಣುಗೋಲ ಸ್ವಾಮಿ ಟ್ರಸ್ಟ್ನಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಸ್ತಾಹ
7 ದಿನಗಳ ಸ್ತಾಹಕ್ಕೆ ಚಿಣ್ಣರ ಕಲರವದೊಂದಿಗೆ ತೆರೆ
ಶ್ರೀಕೃಷ್ಣನ ಲೀಲೆಗಳೇ ಹಾಗೆ, ಆತ ಏನೇ ಮಾಡಿದರೂ ಅದರಲ್ಲಿ ಒಂದು ಸಂದೇಶ ಎಂಬುದು ಜಗತ್ತಿಗೆ ಸಾರಲಾಗಿದೆ. ಅಂತಹ ಶ್ರೀಕೃಷ್ಣನ ಜನ್ಮ ದಿನವಾದ ಶ್ರೀಕೃಷ್ಣ ಜನ್ಮಾಷ್ಟಮಿ ಕಳೆದ ವಾರವಷಷ್ಟೇ ಅದ್ಧೂರಿಯಾಗಿ ಆಚರಿಸಲಾಯಿತು. ಈಗ ಯಾಕೆ ಮತ್ತೆ ಕೃಷ್ಣ ಅಂತೀರಾ, ಚಿಕ್ಕಬಳ್ಳಾಪುರದ ವೇಣುಗೋಪಾಲಸ್ವಾಮಿ ಭಜನೆ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಪ್ತಾಹ ನಡೆಯಿತು.
ಪ್ರತಿ ವರ್ಷ ಚಿಕ್ಕಬಳ್ಳಾಪುರದ ವೇಣುಗೋಪಾಲಸ್ವಾಮಿ ಭಜನೆ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸ್ತಾಹ ಕಾರ್ಯಕ್ರಮ ನಡೆಸಲಾಗುತ್ತೆ. ಈ ಸ್ತಾಹದ ಅಂಗವಾಗಿ ಒಂದು ವಾರದ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಅದರ ಭಾಗವಾಗಿ ಪುಟಾಣಿ ಮಕ್ಕಳಿಗೆ ಶ್ರೀಕೃಷ್ಣನ ವೇಷ ಹಾಕಿ, ಸಾಮೂಹಿಕವಾಗಿ ಕೃಷ್ಣ, ರಾಧೆ ಮತ್ತು ರುಕ್ಮಿಣಿಯರನ್ನು ಕಾಣುವುದೇ ಕಣ್ಣಿಗೆ ಇಂಪಾಗಿತ್ತು.
ಚಿಕ್ಕಬಳ್ಳಾಪುರದ ಒಪಿಒ ರಸ್ತೆಯಲ್ಲಿರುವ ವೇಣುಗೋಪಾಲಸ್ವಾಮಿ ಭಜನೆ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸ್ತಾಹವನ್ನು ಪ್ರತಿ ವರ್ಷ ಆಚರಿಸುತ್ತಿದ್ದು, ಈ ವರ್ಷವೂ ಏಳು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸ್ತಾಹ ಯಶಸ್ವಿಯಾಯಿತು. ಈ ಸ್ತಾಹದಲ್ಲಿ ೬ನೇ ದಿನವಾದ ಭಾನುವಾರ ಸಂಜೆ ಚಿಣ್ಣರಿಗೆ ಶ್ರೀಕೃಷ್ಣ ವೇಷ ಹಾಕಿ ಪೋಷಕರು ಆನಂದಿಸಿದ್ದು ವಿಶೇಷವಾಗಿತ್ತು. ಶ್ರೀಕೃಷ್ಣ, ರಾಧೆ, ರುಕ್ಮಿಣಿಯ ವೇಷದಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಮಕ್ಕಳು ಮಿಂಚಿದರು.
ಇಲ್ಲಿ ನೋಡಿ, ಬೆಣ್ಣೆಯ ಹದಲಿಗೆ ಲಿಪ್ಸಿ÷್ಟಕ್ ಮೆಲ್ಲುತ್ತಿರುವ ಬಾಲಕೃಷ್ಣ, ಇನ್ನು ಈ ಕಡೆ ನೋಡಿದರೆ ಬಾಲ ಭೀಮ್ ಥರ ಇರೋ ಬಲಾಢ್ಯ ಕೃಷ್ಣ, ಇನ್ನು ಮುರಳಿ ವಾದನ ನುಡಿಸುತ್ತಿರುವ ಮುದ್ದುಕೃಷ್ಣನಿಗಂತೂ ಮೆಚ್ಚುಗೆಯ ಮಹಾಪೂರ. ಹೀಗೆ ಶ್ರೀಕೃಷ್ಣನ ಬಾಲ್ಯದ ಲೀಲೆಗಳನ್ನೆಲ್ಲ ಮೈಗೂಡಿಸಿಕೊಂಡಿರುವ ಈ ಚಿಣ್ಣರು ತಮ್ಮದೇ ಶೈಲಿಯಲ್ಲಿ ಶ್ರೀಕೃಷ್ಣನಾಗಿ, ಬಾಲಕೃಷ್ಣನಾಗಿ, ಮುದ್ದುಕೃಷ್ಣನಾಗಿ ಮಿಂಚುತ್ತಿರುವುದು ನೋಡಿದ್ರಲ್ಲಾ, ಇದು ಶ್ರೀಕೃಷ್ಣ ಜನ್ಮಾಷ್ಟಮಿ ಸ್ತಾಹದ ೬ನೇ ದಿನದ ಕಾರ್ಯಕ್ರಮ.
ಇನ್ನು ಇಲ್ಲ್ಲಿ ಶ್ರೀ ಕೃಷ್ಣ ಮಾತ್ರವಲ್ಲ, ರಾಧೆ, ರುಕ್ಮಿಣಿಯರೂ ಸಾತ್ ನೀಡಿದರು. ನೂರಾರು ಮಕ್ಕಳು ತಮ್ಮ ಮುಗ್ದ ಮುಖಗಳೊಂದಿಗೆ ವೇಣುಗೋಪಾಲಸ್ವಾಮಿ ಭಜನೆ ಮಂದಿರದಲ್ಲಿ ಮಾಡಿದ ಕಲರವ ಅಷ್ಟಿಷ್ಟಲ್ಲ. ಒಟ್ಟಿನಲ್ಲಿ ೭ ದಿನಗಳ ಸ್ತಾಹದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳೇ ಒಂದುಕಡೆಯಾದರೆ, ಈ ಚಿಣ್ಣರ ಕಲರವವೇ ಒಂದು ಕಡೆಯಾಗಿ, ಅತ್ಯಂತ ಆಕರ್ಷಣೀಯವಾಗಿತ್ತು ಎಂದರೆ ತಪ್ಪಾಗಲಾರದು.