ಶನೈಶ್ಚರ ದೇವಾಲಯಕ್ಕೆ ಆನಂದ ಗುರೂಜಿ ಭೇಟಿ
1 min readಶನೈಶ್ಚರ ದೇವಾಲಯಕ್ಕೆ ಆನಂದ ಗುರೂಜಿ ಭೇಟಿ
ಚಿಕ್ಕಬಳ್ಳಾಪುರದ ಬಿಬಿ ರಸ್ತೆಯಲ್ಲಿರುವ ದೇವಾಲಯ
ಜಗತ್ತಿನ ಶಾಂತಿಗಾಗಿ ವಿಶೇಷ ಪೂಜೆ ಸಲ್ಲಿಸಿದ ಗುರೂಜಿ
ಕಡೇ ಶ್ರಾವಣ ಶನಿವಾರದ ಜೊತೆಗೆ ಇಂದು ಶನಿ ತ್ರೋಯದಶಿ ಇರುವ ಕಾರಣ ಆನಂದ ಗುರೂಜಿಯವರು ಇಂದು ಚಿಕ್ಕಬಳ್ಳಾಪುರದ ಬಿಬಿ ರಸ್ತೆಯಲ್ಲಿರುವ ಶನೈಶ್ಚರ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆಯುವ ಜೊತೆಗೆ ಜಗತ್ತಿನಲ್ಲಿ ಶಾಂತಿ, ಸಮೃದ್ಧಿ ನೆಲಸಲಿ, ರೈತರು ಮತ್ತು ಸೈನಿಕರು ನೆಮ್ಮದಿಯಾಗಿರಲಿ ಎಂದು ಸಂಕಲ್ಪ ತೊಟ್ಟರು.
ಆನಂದ ಗುರೂಜಿ, ಭಕ್ತರ ಪಾಲಿಗೆ ವಿಶೇಷ ಆರಾಧಿಸುವ ಸ್ವಾಮೀಜಿಗಳು. ಅವರು ಎಲ್ಲಿಗೇ ಹೋದರೂ ಅಲ್ಲಿ ಅವರ ಭಕ್ತರ ದಂಡೇ ಸೇರಿರುತ್ತದೆ. ಅಲ್ಲದೆ ಆನಂದ ಗುರೂಜಿಯವರು ವಿಶ್ವ ಶಾಂತಿ ಮತ್ತು ಎಲ್ಲರ ಸಮೃದ್ಧಿಗಾಗಿ ಸದಾ ದೇವರ ಕೈಂಕರ್ಯಗಳಲ್ಲಿ ತೊಡಗಿರುತ್ತಾರೆ. ಇಂದು ಶ್ರಾವಣ ಮಾಸದ ಕೊನೆಯ ಶನಿವಾರದ ಜೊತೆಗೆ ಶನಿ ತ್ರಯೋದಶಿ ಇದ್ದ ಕಾರಣ ಆನಂದ ಗುರೂಡಿಯವರು ಇಂದು ಚಿಕ್ಕಬಳ್ಳಾಪುರಕ್ಕೆ ಆಗಮಿಸಿ, ಬಿಬಿ ರಸ್ತೆಯಲ್ಲಿರುವ ಶನೈಶ್ಚರ ದೇವಾಲಯದಲ್ಲಿ ವಿಶೇಷ ಸಂಕ್ಲಪ ಮಾಡಿಕೊಡಂರು.
ಆನAದ ಗುರೂಜಿಯವರು ಶನೈಶ್ಚರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ವೇಳೆ ದೇವರು ಬಲಗಡೆಯಿಂದ ಪುಷ್ಪ ನೀಡುವ ಮೂಲಕ ಗುರೂಜಿಯವರ ಸಂಕಲ್ಪ ಈಡೇರುವ ಸೂಚನೆ ನೀಡಿದರು. ದೇವಾಲಯದಲ್ಲಿ ಸುಮಾರು ಸಮಯ ಇದ್ದ ಗುರೂಜಿಯವರು ದೇವರ ದರ್ಶನದ ಜೊತೆಗೆ ವಿಶೇಷ ಪೂಜೆ ಮಾಡಿಸಿ, ಹಾರತಿ ಪಡೆದು, ದೇವರಲ್ಲಿ ಸಂಕಲ್ಪ ಮಾಡಿದರು.
ನಂತರ ಮಾತನಾಡಿದ ಆನಂದ ಗುರೂಜಿ, ಇಂದು ಕಡೇ ಶ್ರಾವಣ ಶನಿವಾರದ ಜೊತೆಗೆ ಶನಿ ತ್ರಯೋದಶಿ ಇದೆ. ಇಂದು ಶನೈಶ್ಚರನ ದರ್ಶನ ಮಾಡಿ ಸಂಕಲ್ಪ ಮಾಡಬೇಕು ಎಂದು ಚಿಕ್ಕಬಳ್ಳಾಪುರಕ್ಕೆ ಬಂದು ದೇವರ ದರ್ಶನ ಪಡೆಯಲಾಗಿದೆ. ಭಗವಂತನ ಸಂಕಲ್ಪ ಆಗಬೇಕಿತ್ತು, ಜಗತ್ತಿನಲ್ಲಿ ಶಾಂತಿ ನೆಮ್ಮದಿ ಅಗತ್ಯವಿದೆ. ಪ್ರಸ್ತುತ ನಾನಾ ವಿಧವಾದ ಸಮಸ್ಯೆಗಳಿಂದ ವಿಶ್ವಜದ ಜನರಿಗೆ ನೆಮ್ಮದಿ ನೀಡುವಂತೆ ದೇವರಲ್ಲಿ ಸಂಕಲ್ಪ ಮಾಡಲಾಗಿದೆ ಎಂದರು.
ಜಗತ್ತಿನ ಶಾಂತಿಗಾಗಿ ಶನೈಶ್ಚರನ ಮುಂದೆ ಪ್ರಾರ್ಥನೆ ಮಾಡಲಾಗಿದ್ದು, ಭಗವಂತೆ ಬಲ ಭಾಗದಿಂದ ಪುಷ್ಪ ನಡುವ ಮೂಲಕ ಸಂಕಲ್ಪ ಈಡೇರಿಸುವ ಸೂಚನೆ ನೀಡಿದ್ದಾರೆ. ಇಂದು ಗೋವಿಂದನ ನಾಮಸ್ಮರಣೆ ಮಾಡುವ ಜೊತೆಗೆ ಶನೈಶ್ಚರನ ಆರಾಧನೆ ಮಾಡಿದರೆ ಎಲ್ಲರಿಗೂ ಶುಭವಾಗಲಿದೆ. ಪ್ರತಿಯೊಬ್ಬರ ಸಂಕಲ್ಪ ಈಡೇರಿ, ಸೈನಿಕರು ಮತ್ತು ರೈತರು ಸಮೃದ್ಧಿಯಾಗಿರಲಿ, ಎಲ್ಲರಿಗೂ ಶುಭವಾಗಲಿ ಎಂದು ಗುರೂಜಿ ಹೌರೈಸಿದರು.