ಅಪಾರ ಪ್ರಮಾಣದ ಜಕ್ಕಲಮಡಗು ನೀರು ಪೋಲು
1 min readನೀರಿನ ಮೌಲ್ಯ ಗೊತ್ತಿಲ್ಲದ ಚಿಕ್ಕಬಳ್ಳಾಪುರ ನಗರಸಭೆ
ಗ್ಯಾಲನ್‌ಗಟ್ಟಲೆ ನೀರು ಚರಂಡಿಗೆ ಹರಿದರೂ ತಡೆಯುವ ಪ್ರಯತ್ನ ಇಲ್ಲ
ಅಪಾರ ಪ್ರಮಾಣದ ಜಕ್ಕಲಮಡಗು ನೀರು ಪೋಲು
ಚಿಕ್ಕಬಳ್ಳಾಪುರ ನಗರಸಭೆ ಅಧಿಕಾರಿಗಳು ಬುದ್ಧಿ ಕಲಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಕೇವಲ ಒಂದು ತಿಂಗಳ ಹಿಂದೆ ಜಕ್ಕಲಮಡಗು ಜಲಾಶಯ ಖಾಲಿಯಾಗುವ ಆತಂಕ ಎದುರಿಸಲಾಗಿತ್ತು. ಆ ಸಮಯದಲ್ಲಿ ನಗರಕ್ಕೆ ನೀರು ಸರಬರಾಜು ಮಾಡುವುದು ಹೇಗೆ ಎಂಬ ಆತಂಕ ನಗರಸಭೆ ಅಧಿಕಾರಿಗಳು ಮತ್ತು ಸದಸ್ಯರಿಗೆ ಮಾತ್ರವಲ್ಲದೆ ನಾಗರಿಕರಿಗೂ ಎದುರಾಗಿತ್ತು. ಆದರೆ ವರುಣ ಕೃಪೆ ತೋರಿದ ಪರಿಣಾಮ ಇದೀಗ ನೀರಿದೆ. ಆದರೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಮಾತ್ರ ನಗರಸಭೆಗಿಲ್ಲ.
ವೀಕ್ಷಕರೇ, ಇಲ್ಲಿ ಕಾಣುತ್ತಿದೆಯಲ್ಲಾ, ರಸ್ತೆಯಲ್ಲಿ ಹರಿಯುತ್ತಿರುವ ನೀರು. ಇದು ಮಳೆಯಿಂದಾಗಿ ಹರಿಯುತ್ತಿರುವ ನೀರಲ್ಲ. ಈ ಪ್ರಮಾಣದಲ್ಲಿ ನೀರು ಹರಿಯುವ ಮಳೆ ಇಂದು ಬಪಂದೂ ಇಲ್ಲ. ಆದರೂ ಈ ನೀರು ಎಲ್ಲಿಂದ ಹರಿಯುತ್ತಿದೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯೇ ಥೇಟ್ ನಮಗೂ ಅದೇ ಪ್ರಶ್ನೆ ಎದುರಾಯಿತು. ಹಾಗಾಗಿಯೇ ನಾವು ಹರಿಯುತ್ತಿರುವ ನೀರಿನ ಮೂಲ ಹಿಡಿದು ಸಾಗಿದಾಗ ಅರ್ಥವಾಗಿದ್ದು ಚಿಕ್ಕಬಳ್ಳಾಪುರ ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ವಾಟರ್‌ಮನ್‌ಗಳ ನಿರ್ಲಕ್ಷ್ಯ. ಅರೇ ರಸ್ತೆಯಲ್ಲಿ ನೀರು ಹರಿಯೋದಕ್ಕೂ ನಗರಸಭೆ ಅಧಿಕಾರಿಗಳಿಗೂ ಏನು ಸಂಬAಧ ಅಂತೀರಾ, ಅದಕ್ಕೂ ಮುಂದೆ ಉಥ್ತರ ಹೇಳುತ್ತೇನೆ ಸ್ವಲ್ಪ ತಾಳ್ಮೆಯಿಂದ ನೋಡಿ.
ವೀಕ್ಷಕರಿಗೆ ನೆನಪಿರಬಹುದು, ಕಳೆದ ಕೆಲ ದಿನಗಳ ಹಿಂದೆ ನಿಮ್ಮ ಸಿಟಿವಿ ನ್ಯೂಸ್‌ನಲ್ಲಿಯೇ ಜಕ್ಕಲಮಡಗು ಜಲಾಶಯ ಖಾಲಿಯಾಗಿರುವ ಬಗ್ಗೆ ಸುದ್ದಿ ಮಾಡಲಾಗಿತ್ತು. ಆ ವೇಳೆ ಕೇವಲ 15 ದಿನಗಳಿಗೆ ಆಗುವಷ್ಟು ನೀರು ಮಾತ್ರ ಜಲಾಶಯದಲ್ಲಿದ್ದು, ಮಳೆ ಬಾರದಿದ್ದರೆ ನೀರಿನ ಸಮಸ್ಯೆ ತಲೆದೂರಲಿದೆ ಎಂಬ ಆತಂಕವನ್ನು ಸಿಟಿವಿ ನ್ಯೂಸ್ ಕೂಡಾ ವ್ಯಕ್ತಪಡಿಸಿತ್ತು. ಆದರೆ ಅದೃಷ್ಟವಶಾತ್ ಮಳೆ ಬಂದು ಜಲಾಶಯದಲ್ಲಿ ನೀರು ಶೇಖರಣೆಯಾಗಿದೆ. ಹಾಗಾಗಿ ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿದೆ.
ಆದರೆ ಜಲಾಶಯದಲ್ಲಿ ಶೇಖರಣೆಯಾಗಿರುವ ನೀರು ಮಿತವಾಗಿ ಬಳಸಬೇಕು ಎಂಬ ಕನಿಷ್ಠ ಜ್ಞಾನ ನಮ್ಮ ಚಿಕ್ಕಬಳ್ಳಾಪುರ ನಗರಸಭೆ ಅಧಿಕಾರಿಗಳಿಗೆ ಇಲ್ಲ ನಿಜ. ಆದರೆ ನೀರು ವ್ಯರ್ಥ ಮಾಡಬಾರದು ಎಂಬ ಜ್ಞಾವೂ ಇಲ್ಲದ ಪರಿಣಾಮವೇ ಇಂದು ಅಪಾರ ಪ್ರಮಾಣದ ಜಲರಾಶಿ ಚರಂಡಿ ಪಾಲಾಗಿದೆ. ಚಿಕ್ಕಬಳ್ಳಾಪುರ ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆ ಇದೆಯಲ್ಲ, ಅದರ ಮುಂಭಾಗದಲ್ಲಿರುವ ಓವರ್ ಹೆಡ್ ಟ್ಯಾಂಕ್‌ಗೆ ಸಂಪರ್ಕ ಕಲ್ಪಿಸುವ ಜಾಗದಲ್ಲಿ ಪೈಪ್ ಒಡೆದೋ ಇಲ್ಲವೇ, ಮತ್ತೊಂದು ಸಮಸ್ಯೆಯಿಂದಲೋ ನೀರು ಚರಂಡಿಗೆ ಹರಿಯುತ್ತಿದೆ.
ಹೀಗೆ ಹರಿಯುತ್ತಿರುವ ನೀರು ಅಪಾರ ಪ್ರಮಾಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿವಾಸದ ಪಕ್ಕದ ಚರಂಡಿ ಮೂಲಕ ನೇರವಾಗಿ ವಾಪಸಂದ್ರದ ರೇಷ್ಮೇಗೂಡಿನ ಮಾರುಕಟ್ಟೆ ರಸ್ತೆಯತ್ತ ಹರಿದಿದೆ. ಎಷ್ಟು ಪ್ರಮಾಣದಲ್ಲಿ ನೀರು ಹರಿದಿದೆ ಎಂದರೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನೀರು ಪೋಲಾದರೂ ನಗರಸಭೆ ಅಧಿಕಾರಿಗಳು ಮಾತ್ರ ಅತ್ತ ತಿರುಗಿಯೂ ನೋಡಿಲ್ಲ. ಅಪಾರ ಪ್ರಮಾಣದ ಜೀವಜಲ ಪೋಲಾಗುವುದನ್ನು ಕಂಡು ಅನೇಕ ಮಂದಿ ನಾಗರಿಕರು ಸಂಬ0ಧಿಸಿದ ವಾಟರ್‌ಮನ್‌ಗಳ ಗಮನಕ್ಕೆ ತಂದರೂ ಉಪಯೋಗವಾಗಿಲ್ಲ.
ಅಲ್ಲದೆ ಇಲ್ಲಿ ಈ ರೀತಿ ನೀರು ಪೋಲಾಗುವುದು ಇದೇ ಮೊದಲಲ್ಲವಂತೆ. ಅನೇಕ ಬಾರಿ ಇದೇ ರೀತಿಯಲ್ಲಿ ನೀರು ಪೋಲಾದರೂ ಅದನ್ನು ತಡೆಯುವ ಕನಿಷ್ಠ ಪ್ರಯತ್ನವನ್ನೂ ನಗರಸಭೆ ಮಾಡದೆ ಪದೇ ಪದೇ ನಿರ್ಲಕ್ಷ್ಯ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕುವವರೇ ಇಲ್ಲವಾಗಿದ್ದಾರೆ. ಪ್ರಸ್ತುತ ನಗರಸಭೆಯಲ್ಲಿ ಅಧ್ಯಕ್ಷರು ಇಲ್ಲದಿದ್ದು, ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಯಾಗಿದ್ದಾರೆ. ಜಿಲ್ಲಾಧಿಕಾರಿಗಳ ನಿವಾಸದ ಪಕ್ಕದಲ್ಲಿಯೇ ಅಪಾರ ಪ್ರಮಾಣ ನೀರು ಚರಂಡಿಗೆ ಹರಿಯುತ್ತಿದ್ದು, ಕೂಡಲೇ ನಗಹರಸಭೆ ನಿರ್ಲಕ್ಷ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.