ಪ್ರೀತಿಸಿ ದೈಹಿಕ ಸಂಪರ್ಕ ಬೆಳೆಸಿ ಮದುವೆ ಆಗದೆ ಮೋಸ
1 min readಪ್ರೀತಿಸಿ ದೈಹಿಕ ಸಂಪರ್ಕ ಬೆಳೆಸಿ ಮದುವೆ ಆಗದೆ ಮೋಸ
ಪೊಲೀಸ್ ಪೇದೆಯಿಂದ ವಿಧ್ಯಾರ್ಥಿ ನಿಗೆ ಅನ್ಯಾಯ ಆರೋಪ
ಪ್ರೀತಿಸಿ ಇಬ್ಬರೂ ಒಟ್ಟೊಟ್ಟಿಗೆ ಪ್ರಣಯ ಪಕ್ಷಿಗಳಂತೆ ಸುತ್ತುತ್ತಿದ್ದರು. ಪ್ರೀತಿಗೆ ಅಡ್ಡವಾಗದ ಜಾತಿ ಮದುವೆಗೆ ಅಡ್ಡಿಯಾಗಿದೆ. ಪೊಲೀಸ್ ಪೇದೆ ಮತ್ತು ಯುವತಿ ಇಬ್ಬರೂ ವಿಷ ಸೇವಿಸಿ ಆಸ್ಪತ್ರೆಯಲ್ಲಿ ಬೆಡ್ ಮೇಲೆ ನರಳಾಡುತ್ತಿದ್ದಾರೆ. ಹಾಗಾದರೆ ಅಲ್ಲಿ ನಡೆದಿದ್ದಾದರೂ ಏನು ಅನ್ನೋದನ್ನ ನೀವೇ ನೋಡಿ.
ಹೀಗೆ ಬೆಡ್ ಮೇಲೆ ಒದ್ದಾಡುತ್ತಿರುವ ಹುಡುಗ ಹುಡುಗಿ. ಮದುವೆ ಆಗಲು ಜಾತಿ ಅಡ್ಡಿಯಾದ ಹಿನ್ನಲೆ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಬೆಡ್ ನೇಲಿರೋ ಹುಡುಗ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆ ಪೇದೆ ತಿಮ್ಮಣ್ಣರಾಮಪ್ಪ ಭೂಸರೆಡ್ಡಿ ಆಗಿದ್ದರೆ, ಮತ್ತೊಂದು ಬೆಡ್ ಮೇಲಿರೋ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಪೊಲೀಸ್ ಪೇದೆಯ ಪ್ರೀತಿ ನಂಬಿ ಯುವತಿ ಆತನೊಂದಿಗೆ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾಳೆ. ಮದುವೆ ದಿನವೂ ನಿಗದಿ ಮಾಡಿ ಲಗ್ನ ಪತ್ರಿಕೆಯೂ ಮುದ್ರಿಸಿದ್ದಾರೆ. ಕೊನೆ ಗಳಿಗೆಯಲ್ಲಿ ಯುವಕನಿಗೆ ಅದೇನಾಯ್ತೋ ಮದುವೆ ಬೇಡ, ನೀವು ಬೇರೆ ಜಾತಿ ನಾವು ಬೇರೆ ಜಾತಿ ಎಂದು ನೆಪ ಹೇಳಿ ಮದುವೆಗೆ ನಿರಾಕರಿಸಿದ್ದಾನೆ.
ಮದುವೆಗೆ ನಿರಾಕರಿಸಿದ ಹಿನ್ನಲೆ ಯುವತಿ ಮೊದಲು ವಿಷ ಸೇವನೆ ಮಾಡಿದ್ದಾಳೆ. ಆಗ ರಾಜಿ ಸಂಧಾನಕ್ಕೆ ಮುಂದಾದ ಪೊಲೀಸ್ ಸಿಬ್ಬಂದಿ, ಮದುವೆ ಆಗುವುದಾಗಿ ಹೇಳಿ ರಾಜಿ ಸಂಧಾನ ಮಾಡಿಕೊಂಡಿದ್ದಾನೆ. ಇದೇ ರೀತಿ ಪದೇ ಪದೇ ಜಗಳ ಆಗುತ್ತಿತ್ತು ಎನ್ನಲಾಗಿದ್ದು, ಎರಡು ಬಾರಿ ವಿಷ ಸೇವನೆ ಮಾಡಿದ್ದ ಯುವತಿ ಈಗ ಮೂರನೇ ಬಾರಿಗೆ ವಿಷ ಸೇವನೆ ಮಾಡಿದ್ದಾಳೆ. ನನ್ನನ್ನು ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದಾನೆ. ನನಗೆ ಆತನೇ ಬೇಕು ಎಂದು ಯುವತಿ ಪಟ್ಟು ಹಿಡಿದ್ದಾಳೆ.
ಇವರಿಬ್ಬರು ಕರೆಸ್ಪಾಂಡೆನ್ಸ್ ನಲ್ಲಿ ಬಿಎ ವ್ಯಾಸಂಗ ಮಾಡಲು ಚಿಕ್ಕಬಳ್ಳಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರುತ್ತಾರೆ. ಕಾಲೇಜಿನಲ್ಲಿ ವಿಧ್ಯಾರ್ಥಿ ಒಂದು ವಾಟ್ಸ್ ಆಪ್ ಗ್ರೂಪ್ ಮಾಡುತ್ತಾರೆ. ಆಗ ಮೊಬೈಲ್ ನಂಬರ್ ಪಡೆದಿದ್ದಾನೆ. ಅಲ್ಲಿಂದ ಆರಂಭವಾದ ಪ್ರೀತಿ ಈಗ ಆಸ್ಪತ್ರೆಯಲ್ಲಿ ವಿಷ ಸೇವಿಸಿ ಮಲಗುವ ಹಂತಕ್ಕೆ ತಲುಪಿದೆ. ವಿಷ ಸೇವನೆ ಮಾಡುವಾಗ ಯುವಕ ನನಗೆ ಯುವತಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾಳೆ, ಮಧ್ಯಸ್ಥಿಕೆ ವಹಿಸಿದ್ದವರು ಹಣ ಕೇಳಿದ್ದರು. ಕೊಟ್ಟರೂ ನನಗೆ ಕಿರುಕುಳ ತಪ್ಪಿಲ್ಲ ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾನೆ.
ಒಟ್ಟಾರೆ ಪ್ರೀತಿಸಿ ಮದುವೆ ಆಗಿ ಸುಖ ಸಂಸಾರ ಸಾಗಿಸಬೇಕಿದ್ದ ಜೋಡಿ, ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಪಾಲಾಗಿದ್ದು ಮಾತ್ರ ವಿಪರ್ಯಾಸ. ಪೊಲೀಸ್ ಪೇದೆಯಾಗಿ ಜನಸಾಮಾನ್ಯರಿಗೆ ನ್ಯಾಯ ಹೇಳಬೇಕಿದ್ದ ವ್ಯಕ್ತಿ, ಈಗ ಯುವತಿಗೆ ಮೋಸ ಮಾಡಿರುವ ಆರೋಪ ಹೊತ್ತಿದ್ದಾನೆ. ಆಸ್ಪತ್ರೆಗೆ ಎಸ್ಪಿ ಕುಶಾಲ್ ಚೌಕ್ಸೆ ಭೇಟಿ ನೀಡಿದ್ದು, ತನಿಖೆ ಮುಂದುವರಿಸಿದ್ದಾರೆ.