ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹ

ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ

ಅಕ್ರಮ ಭೂಮಿ ಮಂಜೂರು ವಜಾಗೆ ಒತ್ತಾಯ

ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ

December 24, 2024

Ctv News Kannada

Chikkaballapura

ಚಿಕ್ಕಬಳ್ಳಾಪುರದಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ

1 min read

ಚಿಕ್ಕಬಳ್ಳಾಪುರದಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ

ಚಿಕ್ಕಬಳ್ಳಾಪುರದಲ್ಲಿ ಮೂರು ದಿನಗಳಿಂದ ಧಾರ್ಮಿಕ ಕಾರ್ಯಕ್ರಮ

ಇಂದು ಉತ್ತರಾಧನೆಯೊಂದಿಗೆ ಕಾರ್ಯಕ್ರಮ ಮುಕ್ತಾಯ

ಕಲಿಯುಗದ ಕಾಮಧೇನು ಎಂದೇ ಪ್ರಸಿದ್ಧಿ ಪಡೆದ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಮಂತ್ರಾಲಯದಲ್ಲಿ ಮಂಗಳವಾರ ಆರಂಭಗೊ0ಡಿದ್ದು, ಅದೇ ದಿನ ಚಿಕ್ಕಬಳ್ಳಾಪುರದಲ್ಲಿಯೂ ಆರಾಧನಾ ಮಹೋತ್ಸವ ಆರಂಭವಾಗಿದೆ. ಚಿಕ್ಕಬಳ್ಳಾಪುರದ ಗರ್ಲ್ ಸ್ಕೂಲ್ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಮಠದಲ್ಲಿ ಭಾನುವಾರದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದವು.

ರಾಯರ ಉತ್ಸವ ಮೂರ್ತಿಯ ಬಲಿ, ಗೋ ಪೂಜೆ, ಗಜಪೂಜೆ ಮತ್ತಿತರ ಪೂಜೆಗಳು ನಡೆದವು. ಪೂರ್ವ ಆರಾಧನಾ ದಿನದಂದು ಸಿಂಹ ವಾಹನ ಸವಾರಿ, ಮಧ್ಯ ಆರಾಧನಾ ದಿನದಂದು ಮಹಾ ಪಂಚಾಮೃತ ಅಭಿಷೇಕ, ಉತ್ತರ ಆರಾಧನಾ ದಿನದಂದು ಸ್ವರ್ಣ ರಥೋತ್ಸವ ನಡೆಸಲಾಯಿತು. ಈ ಸಂದರ್ಭದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳನ್ನೂ ನಡೆಸಲಾಯಿತು.

ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಗಳ ೩೫೩ನೇ ಆರಾಧನಾ ಮಹೋತ್ಸವ ಮಂಗಳವಾರದಿ0ದ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆಯಿತು. ಗುರುಗಳು ವೃಂದಾವನ ಪ್ರವೇಶಿಸಿದ ಈ ದಿನವನ್ನು ದೇಶ, ವಿದೇಶಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆಗಸ್ಟ್ 20ರಂದು ಪೂರ್ವಾರಾಧನೆ, 21ರಂದು ಮಧ್ಯ ಆರಾಧನೆ ಮತ್ತು 22ರಂದು ಉತ್ತರ ಆರಾಧನೆ ಯಶಸ್ವಿಯಾಗಿ ನಡೆಯಿತು.

16ನೇ ಶತಮಾನದ ಸಂತರು ಮತ್ತು ಗುರುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳು ವೈಷ್ಣವ ಧರ್ಮವನ್ನು ಪ್ರತಿಪಾದಿಸಿದ್ದು, ಮಧ್ವಾಚಾರ್ಯರ ದ್ವೆತ ತತ್ತ್ವವನ್ನು ಜನಪ್ರಿಯಗೊಳಿಸಿದರು. ಗುರುಗಳು ವೃಂದಾವನ ಪ್ರವೇಶಿಸಿರುವ ಕ್ಷೇತ್ರವಾಗಿರುವ ಮಂತ್ರಾಲಯದಲ್ಲಿ ಗುರುಗಳ ಆರಾಧನೆ ಆರಂಭವಾದ ದಿನವೇ ಚಿಕ್ಕಬಳ್ಳಾಪುರದ ರಾಯರ ಮಠದಲ್ಲಿಯೂ ಆರಾಧನೆಯ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿ ಇಂದು ಕೊನೆಗೊಂಡವು.

ರಾಘವೇ0ದ್ರ ಸ್ವಾಮಿ ಆರಾಧನೆ ಎಂದರೆ ರಾಯರು ಜೀವಂತವಾಗಿ ವೃಂದಾವನ ಪ್ರವೇಶಿಸಿರುವ ದಿನ. ದೇಶ ವಿದೇಶಗಳಲ್ಲಿ ಆಚರಿಸಲ್ಪಡುವ ಗುರುಗಳ ಆರಾಧನೆ ಹೆಚ್ಚಿನ ಮಠಗಳು ಮತ್ತು ಸಂಸ್ಥೆಗಳಲ್ಲಿ ಪೂರ್ವಾರಾಧನೆಯಿಂದ ಪ್ರಾರಂಭವಾಗುತ್ತದೆ. ಇದನ್ನು ವಾರ್ಷಿಕವಾಗಿ ಶ್ರಾವಣ, ಕೃಷ್ಣ ಪಕ್ಷ, ದ್ವಿತೀಯ ಅಥವಾ ಕರ್ನಾಟಕದಲ್ಲಿ ಅನುಸರಿಸುವ ಸಾಂಪ್ರದಾಯಿಕ ಹಿಂದೂ ಚಂದ್ರಮಾನ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದಲ್ಲಿ ಚಂದ್ರನ ಕ್ಷೀಣಿಸುತ್ತಿರುವ ಎರಡನೇ ದಿನ ಆಚರಿಸಲಾಗುತ್ತದೆ.

ರಾಘವೇಂದ್ರ ಸ್ವಾಮಿ ವಿಷ್ಣುವಿನ ಶ್ರೇಷ್ಠ ಭಕ್ತರಾಗಿದ್ದರು. 1621 ರಿಂದ 1671ರವರೆಗೆ ಅವರು ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ ಶ್ರೀ ಮಠದ ಮುಖ್ಯಸ್ಥರಾಗಿದ್ದರು. ತಮ್ಮ ಜೀವನದಲ್ಲಿ ಹಲವಾರು ಪವಾಡಗಳನ್ನು ನಡೆಸಿರುವ ಅವರು ಮಧ್ವಾಚಾರ್ಯರ ಬೋಧನೆಗಳ ಮೇಲೆ ಹಲವಾರು ಭಜನೆ ಮತ್ತು ವ್ಯಾಖ್ಯಾನಗಳನ್ನು ರಚಿಸಿದ್ದಾರೆ. ಗುರು ಶ್ರೀ ರಾಘವೇಂದ್ರ ಸ್ವಾಮಿಗಳು 1671 ರಲ್ಲಿ ಸಮಾಧಿಯನ್ನು ಪ್ರವೇಶಿಸದರು. ಆವರ ಸಮಾಧಿ ಸ್ಥಳವನ್ನು ವೃಂದಾವನ ಎಂದು ಕರೆಯಲಾಗುತ್ತದೆ. ಇದು ಮಂತ್ರಾಲಯದಲ್ಲಿದೆ. ಮಂತ್ರಾಲಯದಲ್ಲಿರುವ ವೃಂದಾವನ ಮಾದರಿಯಲ್ಲಿಯೇ ಚಿಕ್ಕಬಳ್ಳಾಪುರದಲ್ಲಿಯೂ ರಾಯರ ವೃಂದಾವನ ನಿರ್ಮಿಸಿ ಪೂಡೆಗಳನ್ನು ನಿರ್ವಹಿಸಲಾಗುತ್ತಿದೆ.

ಗುರುವಿನ ಪ್ರಾರ್ಥನೆ ಮಾಡಿದರೆ ಎಲ್ಲ ವಿಘ್ನಗಳೂ ದೂರವಾಗುತ್ತವೆ ಎಂಬುದು ನಂಬಿಕೆ. ಚಿಕ್ಕಬಳ್ಳಾಪುರದ ರಾಯರ ದೇವಾಲಯಕ್ಕೆ ವರ್ಷ ವರ್ಷ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಈ ಬಾರಿಯ ಆರಾಧನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಾಯರ ಕೃಪೆಗೆ ಪಾತ್ರರಾದರು. ಆರಾಧನೆ ಪ್ರಯುಕ್ತ ಕಳೆದ ಮೂರು ದಿನಗಳಿಂದ ರಾಯರ ಮಠವನ್ನು ಹೂವು ಮತ್ತು ವಿದ್ಯುತ್ ದೀಪಾಲಂಕಾರದೊ0ದಿಗೆ ಸಿಂಗರಿಸಲಾಗಿತ್ತು.

ಅಲ್ಲದೆ ಮಂಗಳವಾರದಿ0ದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮಧ್ಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ವೃಂದಾವನದಿ0ದಲೇ ಭಕ್ತರನ್ನು ಹರಿಸುತ್ತಿರುವ ರಾಘವೇಂದ್ರ ಸ್ವಾಮಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಭಕ್ತ ವೃಂದವೇ ಇದ್ದು, ಆರಾಧನೆಯ ವೇಳೆ ರಾಯರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಮುಖ್ಯವಾಗಿ ಚಿಕ್ಕಬಳ್ಳಾಪುರದಲ್ಲಿರುವ ರಾಯರ ಮಠ ವಿಶ್ವೇಶ ತೀರ್ಥರಿಂದ ಶಿಲಾನ್ಯಾಸಗೊಂಡಿತ್ತು.

ಪೂರ್ವ ಆರಾಧನೆಯೊಂದಿಗೆ ಆರಂಭವಾದ ರಾಯಾರ 353ನೇ ಆರಾಧನಾ ಮಹೋತ್ಸವ ಉತ್ತರ ಆರಾಧನೆಯೊಂದಿಗೆ ಇಂದು ಮುಕ್ತಾಯವಾಗಿದ್ದು, ದೇವಾಲಯಕ್ಕೆ ಆಗಮಿಸುವ ಎಲ್ಲ ಭಕ್ತರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲದೆ ಸಂಜೆ ಸಂಗೀತ ಕಾರ್ಯಕ್ರಮದೊಂದಿಗೆ ರಾಯರ ಆರಾಧನಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

About The Author

Leave a Reply

Your email address will not be published. Required fields are marked *