ವೈದ್ಯರ ಚೀಟಿ ಇಲ್ಲದೆ ಔಷಧಿ ಕೊಡಬೇಡಿ
1 min readವೈದ್ಯರ ಚೀಟಿ ಇಲ್ಲದೆ ಔಷಧಿ ಕೊಡಬೇಡಿ
ಔಷದಿ ಅಂಗಡಿ ಮಾಲೀಕರಲ್ಲಿ ಸಂಘದಿ0ದ ಮನವಿ
ಇತ್ತೀಚಿನ ದಿನಗಳಲ್ಲಿ ಕೆಲ ಔಷಧಿ ಕೇಂದ್ರಗಳಲ್ಲಿ ವೈದ್ಯರ ಸಲಹೆ ಚೀಟಿ ಇಲ್ಲದೆ ಔಷಧಿ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದು. ಯಾವುದೇ ಕಾರಣಕ್ಕೂ ತಾಲ್ಲೂಕಿನ ಔಷಧಿ ಮಳಿಗೆಗಳ ಮಾಲೀಕರು ವೈದ್ಯರ ಸಲಹೆ ಚೀಟಿ ಇಲ್ಲದೆ ಯಾವುದೇ ಔಷಧಿ ನೀಡಬಾರದು ಎಂದು ತಾಲೂಕು ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್ ಸಿ ಪಟಾಲಯ್ಯ ಮನವಿ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಕೆಲ ಔಷಧಿ ಕೇಂದ್ರಗಳಲ್ಲಿ ವೈದ್ಯರ ಸಲಹೆ ಚೀಟಿ ಇಲ್ಲದೆ ಔಷಧಿ ನೀಡುತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದು. ಯಾವುದೇ ಕಾರಣಕ್ಕೂ ತಾಲೂಕಿನ ಔಷಧಿ ಮಳಿಗೆಗಳ ಮಾಲೀಕರು ವೈದ್ಯರ ಸಲಹೆ ಚೀಟಿ ಇಲ್ಲದೆ ಯಾವುದೇ ಔಷಧಿ ನೀಡಬಾರದು ಎಂದು ತಾಲೂಕು ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್ ಸಿ ಪಟಾಲಯ್ಯ ಮನವಿ ಮಾಡಿದರು. ದೊಡ್ಡಬಳ್ಳಾಪುರ ನಗರದ ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಎನ್‌ಡಿಪಿಎಸ್ ಅಮಲುಭರಿತ ಔಷಧಿಗಳು, ಎಂಟಿಪಿಲ್ ಯಾವುದೇ ಕಾರಣಕ್ಕೂ ನೀಡಬಾರದು, ಆಂಟಿಬಯೋಟಿಕ್ ಔಷಧಿಗಳನ್ನು ಇತ್ತೀಚಿನ ದಿನಗಳಲ್ಲಿ ಕೆಲವು ಔಷಧಿ ಮಳಿಗೆಗಳಲ್ಲಿ ವೈದ್ಯರ ಸಲಹೆ ಚೀಟಿ ಇಲ್ಲದೆ ವಿತರಣೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು , ಈ ಕುರಿತು ತಾಲೂಕಿನ ಔಷಧಿ ಮಳಿಗೆಗಳ ಮಾಲೀಕರಿಗೆ ಮಾಹಿತಿ ರವಾನೆ ಮಾಡಲಾಗುವುದು. ತಾಲೂಕಿನ ಯಾವುದೇ ಔಷಧಿ ಮಳಿಗೆಯ ಮಾಲೀಕರು ಸೂಕ್ತ ವೈದ್ಯರ ಸಲಹೆ ಚೀಟಿ ಇಲ್ಲದೆ ಯಾವುದೇ ಕಾರಣಕ್ಕೂ ಔಷಧಿಗಳನ್ನು ವಿತರಣೆ ಮಾಡುವಂತಿಲ್ಲ. ವೈದ್ಯರ ಸಲಹೆ ಚೀಟಿ ಪಡೆಯದೆ ಔಷಧಿ ವಿತರಣೆ ಮಾಡಿದ ಪ್ರಕರಣಗಳಲ್ಲಿ ಅಂಗಡಿ ಮಾಲೀಕರೇ ನೇರಹೊಣೆಯಾಗಿರುತ್ತಾರೆ ಎಂದರು.
ಅ0ತಹ ಪ್ರಕರಣಗಳಿಗೆ ಸಂಘವು ಬೆಂಬಲ ನೀಡುವುದಿಲ್ಲ. ಔಷಧಿಗಳ ವಿತರಣೆ ಕುರಿತು ಪ್ರತಿ ಮಾಸಿಕವಾಗಿ ಸಭೆ ನಡೆಸಿ ಔಷಧಿ ಮಳಿಗೆಗಳ ಮಾಲೀಕರಿಗೆ ಸಂಘದಿ0ದ ತಿಳುವಳಿಕೆ ನೀಡಲಾಗುತ್ತಿದೆ. ನಮ್ಮಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗೆ ಅವಕಾಶವಿಲ್ಲ ಎಂದರು. ಸಂಘದ ಗೌರವಾಧ್ಯಕ್ಷ ಸಿದ್ದಣ್ಣ ಮಾತನಾಡಿ, ನಮ್ಮ ತಾಲೂಕಿನಲ್ಲಿ ಯಾವುದೇ ಔಷಧಿ ಬಳಕೆಗಳಲ್ಲಿ ವೈದ್ಯರ ಚೀಟಿ ಪಡೆಯದೆ ಔಷಧಿ ವಿತರಣೆ ಮಾಡಲಾಗುತ್ತಿಲ್ಲ, ಔಷಧಿ ಮಳಿಗೆ ಮಾಲೀಕರು ಎಚ್ಚರ ತಪ್ಪಿದಲ್ಲಿ ಅನಾಹುತ ಖಂಡಿತ ಎಂದರು.