ಔರಾದ್‌ನಲ್ಲಿ ಶಾಸಕ ಪ್ರಭು ಚವ್ಹಾಣ ರಕ್ಷಾ ಬಂಧನ ಆಚರಣೆ
1 min readಔರಾದ್‌ನಲ್ಲಿ ಶಾಸಕ ಪ್ರಭು ಚವ್ಹಾಣ ರಕ್ಷಾ ಬಂಧನ ಆಚರಣೆ
ಸಾಲು ಸಾಲಾಗಿ ಬಂದ ಮಹಿಳೆಯರಿಂದ ಶಾಸಕರಿಗೆ ರಾಖಿ
ಶಾಸಕ ಪ್ರಭು ಬಿ. ಚವ್ಹಾಣ ಅವರು ಇಂದು ಶಾಸಕರ ಕಛೇರಿ ಆವರಣದಲ್ಲಿ ಔರಾದ್ ಹಾಗೂ ಕಮಲನಗರ ತಾಲ್ಲೂಕಿನ ಸಹೋದರಿಯರೊಂದಿಗೆ ರಕ್ಷಾ ಬಂಧನ ಆಚರಿಸಿದರು. ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಶಾಸಕರಿಗೆ ಆರತಿ ಬೆಳಗಿಸಿ, ಹೂ ಸುರಿಸಿ, ಕೈಗೆ ರಾಖಿ ಕಟ್ಟುವ ಮೂಲಕ ವಿಭಿನ್ನವಾಗಿ ಆಚರಿಸಿದರು.
ಔರಾದ್ ಹಾಗೂ ಕಮಲನಗರ ತಾಲ್ಲೂಕುಗಳ ವಿವಿಧ ಗ್ರಾಮಗಳಿಂದ ಆಗಮಿಸಿದ ಮಹಿಳೆಯರು ಸಾಲು ಸಾಲಾಗಿ ಶಾಸಕರಿಗೆ ರಾಖಿ ಕಟ್ಟಿ ಹಾರೈಸಿದರು. ಎಲ್ಲ ಸಹೋದರಿಯರಿಗೆ ಕಾಣಿಕೆ ನೀಡಿ ಶಾಸಕರು ಗೌರವ ಸಲ್ಲಿಸಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಿಕ್ಷಕಿಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಪಕ್ಷದ ಪ್ರಮುಖರು, ಕಾರ್ಯಕರ್ತೆಯರು, ಬಂಜಾರಾ ಸಮಾಜದ ಬಾಂಧವರು ಹಾಗೂ ಸಾವಿರಾರು ಮಹಿಳೆಯರು ಆಗಮಿಸಿ ಶಾಸಕರಿಗೆ ರಾಖಿ ಕಟ್ಟಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಹಿಂದೂ ಪದ್ದತಿಯಲ್ಲಿ ರಕ್ಷಾ ಬಂಧನ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಇದು ಅಣ್ಣ-ತಮ್ಮಂದಿರ ನಡುವೆ ವಾತ್ಸಲ್ಯ ಬೆಳೆಸುವ ಹಬ್ಬವಾಗಿದೆ. ಸಹೋದರರಿಂದ ರಕ್ಷಣೆ ಬಯಸಿ ಹೆಣ್ಣು ಮಕ್ಕಳು ರಾಖಿ ಕಟ್ಟುತ್ತಾರೆ. ಅಕ್ಕ ತಂಗಿಯರಿಗೆ ರಕ್ಷಣೆ ಕೊಡುವ ಸಹೋದರರಿಗೆ ಯಾವುದೇ ರೀತಿಯ ಕೊರತೆಯಾಗುವುದಿಲ್ಲ ಎಂದರು.
ಹೆಣ್ಣು ಮಕ್ಕಳು ಲಕ್ಷ್ಮಿ, ಸರಸ್ವತಿ, ತಾಯಿ ಭವಾನಿ ದೇವಿಯ ಅವತಾರವಾಗಿರುತ್ತಾರೆ. ಸಹೋದರಿಯರ ಆಶೀರ್ವಾದ ನನ್ನ ಮೇಲಿರುವುದರಿಂದ ನನಗೆ ಎದುರಾದ ಎಲ್ಲ ತೊಡಕುಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗಿದೆ. ಸದಾ ಎಲ್ಲ ಸಹೋದರಿಯರ ರಕ್ಷಣೆಗೆ ಬದ್ಧನಾಗಿದ್ದು, ಅವರ ಶ್ರೇಯೋಭಿವೃದ್ಧಿಗಾಗಿ ನಿರಂತರ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮಿಕೌಟಗೆ, ತಾಲ್ಲೂಕು ಅಧ್ಯಕ್ಷೆ ಶಕುಂತಲಾ ಮುತ್ತಂಗೆ. ಪ್ರಧಾನ ಕಾರ್ಯದರ್ಶಿಗಳಾದ ಗೀತಾ ಗೌಡ, ಕಲ್ಪನಾ ಪಾಟೀಲ್, ಮಂಡಲ ಉಪಾಧ್ಯಕ್ಷ ಭಾರತಿ ಬೋಚರೆ, ಕೋಮಲ್ ಭಾನುದಾಸ ಪಾಟೀಲ, ಪಟ್ಟಣ ಪಂಚಾಯತ್ ಸದಸ್ಯೆ ಪ್ರೇರಣಾ ಬಾಬು ರಾಠೋಡ್ ಸೇರಿದಂತೆ ಇತರರರು ಉಪಸ್ಥಿತರಿದ್ದರು. ಬೆಳಗ್ಗೆ ಶಾಸಕರ ನಿವಾಸ ಬೋಂತಿ ತಾಂಡಾದಲ್ಲಿ ರಕ್ಷಾ ಬಂಧನ ಆಚರಿಸಲಾಯಿತು. ಶಾಸಕರ ಸಹೋದರಿಯರು ರಾಖಿ ಕಟ್ಟಿ ಶುಭ ಹಾರೈಸಿದರು.