ಕುಡಿತದಿಂದ ಲಿವರ್ ಫೇಲ್ಯೂರ್, ಸಂಸಾರದಲ್ಲಿ ಬಿರುಕು
1 min readಕುಡಿತದಿಂದ ಲಿವರ್ ಫೇಲ್ಯೂರ್, ಸಂಸಾರದಲ್ಲಿ ಬಿರುಕು
ಪತ್ನಿಯ ಶವ ಬಾತ್ ರೂಮ್‌ನಲ್ಲಿ ಪತ್ತೆ
ಕುಡಿತದಿಂದ ಲಿವರ್ ಫೇಲ್ಯೂರ್ ಆಗಿ ಗಂಡನ ಆರೋಗ್ಯ ಹದಗೆಟ್ಟಿತ್ತು, ಸಂಸಾರದಲ್ಲಿ ಬಿರುಕು ಮೂಡಿ ಹೆಂಡತಿ ಮಕ್ಕಳ ಜೊತೆ ತವರು ಸೇರಿದ್ಳು, ಮತ್ತೆ ಗಂಡನ ಮನೆಗೆ ಬಂದವಳು ಬಾತ್ ರೂಮ್ ನಲ್ಲಿ ಶವವಾಗಿ ಸಿಕ್ಕಿದ್ದಾಳೆ.
ಕುಡಿತದಿಂದ ಲಿವರ್ ಫೇಲ್ಯೂರ್ ಆಗಿ ಗಂಡನ ಆರೋಗ್ಯ ಹದಗೆಟ್ಟಿತ್ತು, ಸಂಸಾರದಲ್ಲಿ ಬಿರುಕು ಮೂಡಿ ಹೆಂಡತಿ ಮಕ್ಕಳ ಜೊತೆ ತವರು ಸೇರಿದ್ಳು, ಮತ್ತೆ ಗಂಡನ ಮನೆಗೆ ಬಂದವಳು ಬಾತ್ ರೂಮ್ ನಲ್ಲಿ ಶವವಾಗಿ ಸಿಕ್ಕಿದ್ದಾಳೆ. ನೆಲಮಂಗಲ ತಾಲ್ಲೂಕಿನ ದಾಬಸ್ ಪೇಟೆಯಲ್ಲಿ ಧಾರುಣ ಘಟನೆ ನಡೆದಿದ್ದು, ಸುಟ್ಟುಕರಕಲಾದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾಗಿದೆ, ಪೋನ್ ಕರೆ ಸ್ವೀಕರಿಸದ ಹಿನ್ನಲೆ ಸಂಶಯಗೊ0ಡ ತವರು ಮನೆಯವರು ಬಂದು ನೋಡಿದ್ದಾಗ ಮಗಳ ಶವ ಬಾತ್ ರೂಮ್ ನಲ್ಲಿ ಪತ್ತೆಯಾಗಿದೆ.
ಮೃತ ಮಹಿಳೆಯ ಹೆಸರು ಕಾವ್ಯ, 27 ವರ್ಷದ ಈಕೆ ಎರಡು ಮಕ್ಕಳ ತಾಯಿ, ಹಾಸನ ಜಿಲ್ಲೆ ಹೊಳೇನರಸಿಪುರ ತಾಲ್ಲೂಕಿನ ಮಾವಿನಕೆರೆ ಗ್ರಾಮದವಳು, ಇದೇ ಹಾಸನದ ಆಲೂರು ತಾಲ್ಲೂಕಿನ ಮಣಿಪುರದ ಶಿವಾನಂದ್ ಎಂಬುವನನ್ನ ಮದುವೆಯಾಗಿದ್ರು, ಗಂಡ ದಾಬಸ್ ಪೇಟೆಯ ಖಾಸಗಿ ಕಂಪನಿಯೊ0ದರಲ್ಲಿ ಕೆಲಸ ಮಾಡುತ್ತಿದ್ದ ಕಾರಣಕ್ಕೆ ದಂಪತಿಗಳು ತಮ್ಮ ಇಬ್ಬರು ಮಕ್ಕಳ ಜೊತೆ ದಾಬಸ್ ಪೇಟೆಯಲ್ಲಿ ವಾಸವಾಗಿದ್ದರು.
ಗಂಡ ಶಿವಾನಂದ್ ಕುಡಿತ ಚಟ ಮೈಗಟ್ಟಿಸಿಕೊಂಡಿದ್ದ, ಕುಡಿತದಿಂದ ಲಿವರ್ ಫೇಲ್ಯೂರ್ ಆಗಿ ಆರೋಗ್ಯ ಹದಗೆಟ್ಟಿತ್ತು, ಇದೇ ವೇಳೆ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದ ಶಿವಾನಂದ್ ಮನೆಯಲ್ಲಿಯೇ ಇದ್ದ, ಆರೋಗ್ಯ ಮತ್ತು ಕೆಲಸದ ಕಾರಣದಲ್ಲಿ ಸಂಸಾರದಲ್ಲಿ ಬಿರುಕು ಮೂಡಿತು, ಇದೇ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಜಗಳವಾಗುತ್ತಿತ್ತು. ಸಂಸಾರಿಕ ಜಗಳದಿಂದ ಬೇಸರಗೊಂಡಿದ್ದ ಕಾವ್ಯ ತವರು ಮನೆಗೆ ಹೋಗಿದ್ಳು, ಕೆಲವು ದಿನಗಳ ಹಿಂದೆಯಷ್ಟೇ ಗಂಡನ ಮನೆಗೆ ಬಂದಿದ್ಳು, ಮಗಳ ಯೋಗಕ್ಷೇಮ ವಿಚಾರಿಸಲು ಕಳೆದ ಶನಿವಾರ ಪೋನ್ ಮಾಡಿದ್ದಾಗ ಗಂಡ ಶಿವಾನಂದ್ ಹೆಂಡತಿ ಮಲಗಿದ್ದಾಳೆಂದು ಹೇಳಿದ, ಸಂಶಯಗೊ0ಡ ತವರು ಮನೆಯವರು ಬಂದು ನೋಡಿದಾಗ ಶವವಾಗಿರೋದು ಬೆಳಕಿಗೆಗೆ ಬಂದಿದೆ.
ಇ0ದು ಬೆಳಗ್ಗೆ ವಿಷಯ ತಿಳದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ, ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾರವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ, ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮೇನ್ನೋಟಕ್ಕೆ ಆಕೆಯ ಗಂಡನೇ ಕೃತ್ಯ ಮಾಡಿರುವ ಸಾಧ್ಯತೆ ಇದೆ, ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಕೊಲೆ ಮಾಡಲಾಗಿದೆ, ವಿಚಾರಣೆ ನಂತರ ಸತ್ಯಾಂಶ ಬೆಳಕಿಗೆ ಬರಲಿದೆ ಎಂದರು.