ನಂಜು0ಡೇಶ್ವರ ದೇವಾಲಯಕ್ಕೆ ಜಿ.ಟಿ. ದೇವೇಗೌಡ ಭೇಟಿ
1 min readನಂಜು0ಡೇಶ್ವರ ದೇವಾಲಯಕ್ಕೆ ಜಿ.ಟಿ. ದೇವೇಗೌಡ ಭೇಟಿ
ಕುಟುಂಬ ಸಮೇತ ಆಗಮಿಸಿದ ಮಾಜಿ ಶಾಸಕ ಜಿಟಿ ದೇವೇಗೌಡ
ಶ್ರಾವಣ ಮಾಸದ ಹುಣ್ಣಿಮೆಯಂದು ವಿಶೇಷ ಪೂಜೆಗೆ ಆಗಮನ
ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ನಂಜನಗೂಡಿನ ನಂಜು0ಡೇಶ್ವರ ದೇವಾಲಯಕ್ಕೆ ಜೆಡಿಎಸ್ ಹಿರಿಯ ನಾಯಕ, ಮಾಜಿ ಸಚಿವ ಜಿ ಟಿ ದೇವೇಗೌಡ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂಜು0ಡೇಶ್ವರನ ದರ್ಶನ ಪಡೆದರು.
ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ನಂಜನಗೂಡಿನ ನಂಜು0ಡೇಶ್ವರ ದೇವಾಲಯಕ್ಕೆ ಜೆಡಿಎಸ್ ಹಿರಿಯ ನಾಯಕ, ಮಾಜಿ ಸಚಿವ ಜಿ ಟಿ ದೇವೇಗೌಡ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂಜು0ಡೇಶ್ವರನ ದರ್ಶನ ಪಡೆದರು. ಶ್ರಾವಣ ಮಾಸದ ಹುಣ್ಣಿಮೆಯಂದು ನಂಜು0ಡೇಶ್ವರನಿಗೆ ಬೆಳಂ ಬೆಳಗ್ಗೆ ಬಿಲ್ವಪತ್ರ ಮತ್ತು ತುಳಸಿ ಇಷ್ಟಾರ್ಥ ವಿಶೇಷ ಪೂಜೆ ಹಿನ್ನೆಲೆ ಮಾಜಿ ಸಚಿವ ಜಿಟಿ ದೇವೇಗೌಡ ಮತ್ತು ಪತ್ನಿ ನಂಜು0ಡೇಶ್ವರನ ಗರ್ಭಗುಡಿಯಲ್ಲಿ ಕುಳಿತು ಬೇಡಿದ ಕಾರ್ಯ ಈಡೇರಿಕೆಗಾಗಿ ಭಕ್ತಿ ಮೆರೆದರು.
ನಂತರ ಮಾತನಾಡಿದ ಮಾಜಿ ಸಚಿವ ಜಿ ಟಿ ದೇವೇಗೌಡ, ಶ್ರಾವಣ ಮಾಸದ ಹುಣ್ಣಿಮೆ ಅಂಗವಾಗಿ ನಂಜು0ಡೇಶ್ವರನ ದರ್ಶನ ಪಡೆಯಲು ಆಗಮಿಸಿರುವುದಾಗಿ ತಿಳಿಸಿದರು. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಜೆಡಿಎಸ್ ನಡೆಸಿದ ಮೈಸೂರು ಚಲೋ ಪಾದಯಾತ್ರೆ ಯಶಸ್ವಿಯಾಗಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ವಿಚಾರದಲ್ಲಿ ಅವರ ಕೆಲಸ ಅವರು ಮಾಡಿದ್ದಾರೆ. ಆದರೆ ಇದೀಗ ಚೆಂಡು ನ್ಯಾಯಾಲಯದ ಅಂಗಳದಲ್ಲಿದೆ, ಹಾಗಾಗಿ ನ್ಯಾಯಾಲಯ ಯಾವ ತೀರ್ಮಾನ ಕೈಗೊಳ್ಳಲಿದೆ ಕಾದು ನೋಡಬೇಕಿದ, ಜೆಡಿಎಸ್ ಬಿಜೆಪಿ ಒಟ್ಟಾಗಿ ಹೋಗಲು ನಿರ್ಧರಿಸಲಾಗಿದೆ ಎಂದರು. ಪತ್ನಿ ಲಲಿತ ಜಿ ಟಿ ದೇವೇಗೌಡ ,ಜಿಲ್ಲಾ ಜೆಡಿಎಸ್ ಅಧ್ಯಕ್ಷ ನರಸಿಂಹಸ್ವಾಮಿ ಉಪಸ್ಥಿತರಿದ್ದರು.